ಟೀಮ್ ಇಂಡಿಯಾ ಸೋಲಿಸಿದರೆ ಮತ್ತೆ ಇತಿಹಾಸ ನಿರ್ಮಿಸಲಿದೆ ಬಾಂಗ್ಲಾದೇಶ!

ರಾಜ್‌ಕೋಟ್, ನವೆಂಬರ್ 6: ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ, ಭಾರತವನ್ನು ಸೋಲಿಸಿ ದಂಗುಬಡಿಸಿತ್ತು. ಅಂದಿನ ಪಂದ್ಯದಲ್ಲಿ ಬಾಂಗ್ಲಾ 7 ವಿಕೆಟ್ ಜಯದೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.
ಮುಷ್ಫಿಕರ್ ರಹೀಮ್ ಆಕರ್ಷಕ ಅರ್ಧಶತಕದೊಂದಿಗೆ (60) ದೆಹಲಿ ಪಂದ್ಯವನ್ನು ಗೆದ್ದಿದ್ದ ಬಾಂಗ್ಲಾ, ಭಾರತ ವಿರುದ್ಧ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಜಯ ದಾಖಲಿಸಿ ಇತಿಹಾಸವೂ ನಿರ್ಮಿಸಿತ್ತು. ಯಾಕೆಂದರೆ ಅದಕ್ಕೂ ಹಿಂದಿನ 8 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾ, ಮೆನ್ ಇನ್ ಬ್ಲ್ಯೂವಿರುದ್ಧ ಸೋಲಿನ ಮುಖಭಂಗ ಅನುಭವಿಸಿತ್ತು.
ಭಾರತ vs ಬಾಂಗ್ಲಾದೇಶ, 2ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ಇತ್ತಂಡಗಳಿಗೆ ದ್ವಿತೀಯ ಟಿ20 ನಡೆಯಲಿದೆ. ಅಲ್ಲೂ ರೋಹಿತ್ ಶರ್ಮಾ ಬಳಗ ಸೋತರೆ, ಭಾರತ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದು ಬಾಂಗ್ಲಾ ಮತ್ತೊಂದು ಇತಿಹಾಸ ಬರೆಯಲಿದೆ.
ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ದ್ವಿತೀಯ ಪಂದ್ಯದಲ್ಲಿ ಭಾರತ ತುಂಬಾ ಎಚ್ಚರಿಕೆಯಿಂದ ಆಟ ಆಡಬೇಕಿದೆ. ಅಂದ್ಹಾಗೆ ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ಮಹಮ್ಮದುಲ್ಲ ಕೇವಲ 2 ಸಿಕ್ಸ್ ಬಾರಿಸಿದರೆ ಟಿ20ಐನಲ್ಲಿ 50 ಸಿಕ್ಸ್‌ಗಳೊಂದಿಗೆ ಬಾಂಗ್ಲಾ ಪರ ಟಿ20ಐ ಅತ್ಯಧಿಕ ಸಿಕ್ಸ್ ದಾಖಲಿಸಿದ ಆಟಗಾರನಾಗಿ ಮೊಹಮದುಲ್ಲ ಗುರುತಿಸಿಕೊಳ್ಳಲಿದ್ದಾರೆ.
ಭಾರತ ತಂಡದ ಎಂದಿನ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿರುವುದರಿಂದ ತಂಡದ ನಾಯಕತ್ವ ಜವಾಬ್ದಾರಿಯಲ್ಲಿರುವ ರೋಹಿತ್ ಶರ್ಮಾ ಕೂಡ ದ್ವಿತೀಯ ಪಂದ್ಯದಲ್ಲಿ ದಾಖಲೆಗಳನ್ನು ನಿರ್ಮಿಸಲು ಅವಕಾಶವಿದೆ. ಈಗಲೇ ಟಿ20ಐ ಅತ್ಯಧಿಕ ರನ್ ಪಟ್ಟಿಯಲ್ಲಿ ರೋಹಿತ್ (2,452 ರನ್), ಕೊಹ್ಲಿಯನ್ನು (2,450 ರನ್)ಮೀರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications