ಭಾರತದಿಂದ ತೆರಳುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದ ಮಾಲ್ಡೀವ್ಸ್: ಮೈಕ್ ಹಸ್ಸಿ ಪ್ರಯಾಣಕ್ಕೆ ಅಡ್ಡಿ

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಭಾರತ ಸೇರಿದಂತೆ ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಬರುವ ಎಲ್ಲಾ ಪ್ರಯಾಣಿಕರ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಹೊಸ ತಲೆನೋವನ್ನು ತಂದಿಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಐಪಿಎಲ್ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಸದ್ಯ ಭಾರತದಲ್ಲಿಯೇ ಉಳಿದುಕೊಂಡಿದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅವರು ನೆಗೆಟಿವ್ ವರದಿಯನ್ನು ಪಡೆದ ನಂತರ ಮಾಲ್ಡೀವ್ಸ್‌ಗೆ ತೆರಳು ಆಸ್ಟ್ರೇಲಿಯಾ ಮೂಲದ ಇತರ ಆಟಗಾರರನ್ನು ಕೂಡಿಕೊಂಡು ಬಳಿಕ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವ ನಿರ್ಧಾರ ಮಾಡಲಾಗಿತ್ತು. ಆದರೆ ಲಾಲ್ಡೀವ್ಸ್ ಸರ್ಕಾರ ತೆಗೆದುಕೊಂಡ ನಿರ್ಧಾರ ಈಗ ಮೈಕಲ್ ಹಸ್ಸಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ತಲೆನೋವು ತಂದಿಟ್ಟಿದೆ.
ಮೈಕಲ್ ಹಸ್ಸಿ ದೆಹಲಿಯಿಂದ ಚೆನ್ನೈಗೆ ಬಂದಿಳಿದ ನಂತರ ನಡೆಸಿದ ಮೊದಲ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ನಿಯಮದ ಪ್ರಕಾರ ಎರಡು ನೆಗೆಟಿವ್ ವರದಿಯ ನಂತರ ಕ್ವಾರಂಟೈನ್‌ನಿಂದ ಮುಕ್ತರಾಗಬಹುದು, ಹೀಗಾಗಿ ಎರಡನೇ ವರದಿಗಾಗಿ ಕಾಯಲಾಗಿತ್ತು. ಆದರೆ ಎರಡನೇ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಹಸ್ಸಿ ಭಾರತದಲ್ಲಿಯೇ ಮುಂದುವರಿಯುವಂತಾಗಿದೆ.
ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಮೂಲದ ಎಲ್ಲಾ ಆಟಗಾರರು ಹಾಗೂ ಇತರ ಸಿಬ್ಬಂದಿಗಳು ಮಾಲ್ಡೀವ್ಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ತೆರಳುವ ಎಲ್ಲಾ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿರ್ಧಾರ ಪ್ರಕಟಿಸಿದ ನಂತರ ಅನಿವಾರ್ಯವಾಗಿ ಆಸ್ಟ್ರೇಲಿಯಾ ಮೂಲದ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಆಸ್ಟ್ರೇಲಿಯಾ ಸರ್ಕಾರ ವಿಧಿಸಿದ ಈ ಕಠಿಣ ನಿರ್ಬಂಧ ನೇ 15ರ ವರೆಗೂ ಮುಂದುವರಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications