For Quick Alerts
ALLOW NOTIFICATIONS  
For Daily Alerts
 

Richa Ghosh: ರಿಚಾ ಘೋಷ್ ಹೆಸರಿನಲ್ಲಿ ಬಂಗಾಳದಲ್ಲಿ ಮೈದಾನ

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದ ಆಟಗಾರ್ತಿಯರಿಗೆ ಆಯಾ ರಾಜ್ಯಗಳು ಸನ್ಮಾನಿಸುತ್ತಿವೆ. ಅಂತೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಸ ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿರ್ಮಣಾವಾಗಲಿರುವ ಹೊಸ ಮೈದಾನಕ್ಕೆ ರಿಚಾ ಘೋಷ್ ಹೆಸರು ಇಡುವುದಾಗಿ ಘೋಷಿಸಿದ್ದಾರೆ.

ಪಶ್ವಿಮ್‌ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಇದನ್ನು ಖಚಿತ ಪಡಿಸಿದ್ದಾರೆ. ರಿಷಾ ಘೋಷ್ ಅವರ ತವರಾಗಿರುವ ಸಿಲಿಗುರಿಯಲ್ಲಿ ಮೈದಾನ ನಿರ್ಮಿಸಲು ಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಿಲಿಗುರಿ ಉತ್ತರ ಬಂಗಾಳದ ದೊಡ್ಡ ನಗರವಾಗಿದೆ.

Mamata Banerjee announces new stadium in Siliguri to be named after World Cup star Richa Ghosh

ರಿಚಾ ಘೋಷ್‌ ಅವರು ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆದು ವಿಜೇತರಾಗಿರುವ ತಂಡದ ಮೊದಲ ಬಂಗಾಳಿ ಸದಸ್ಯೆಯಾಗಿದ್ದಾರೆ. ಇವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ನವಿ ಮುಂಬೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದರು. ಇವರು ಸ್ಥಿರ ಪ್ರದರ್ಶನದ ತಂಡದ ಗೆಲುವಿಗೆ ಕಾರಣವಾಗಿದೆ. ಹೀಗಾಗಿ ರಿಚಾ ಅವರನ್ನು ರಾಜ್ಯದ ವಿವಿದೆಡೆ ಸನ್ಮಾನಿಸಲಾಗುತ್ತಿದೆ.

ರಿಚಾಗೆ ಗೌರವ

ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ತಂಡದ ಬ್ಯಾಟಿಂಗ್ ಹಾಗೂ ವಿಕೆಟ್‌ ಕೀಪಿಂಗ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಿಚಾ ಅವರನ್ನು ಪಶ್ಚಿಮ ಬಂಗಾಳ ಕ್ರಿಕೆಟ್‌ (CAB) ಸಂಸ್ಥೆಯೂ ಸಹ ಈ ಮೊದಲೇ ಗೌರವಿಸಿದೆ. ಅಲ್ಲದೆ ಸರ್ಕಾರ ಸಹ ಅವರ ಸಾಧನೆಗೆ ಮನ್ನಣೆ ನೀಡಿದ್ದು, ರಾಜ್ಯ ಸರ್ಕಾರದಲ್ಲಿ ಉಪ ಪೊಲೀಸ್‌ ವರಿಷ್ಠಾದಿಕಾರಿ (DSP) ಜವಾಬ್ದಾರಿಯನ್ನು ನೀಡಿ ಗೌರವಿಸಿದೆ. ನ.8 ರಂದು ಈಡನ್‌ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ರಿಚಾ ಅವರಿಗೆ ಮಮತಾ ಬ್ಯಾನರ್ಜಿ ನೆಮಕಾತಿ ಪತ್ರವನ್ನು (appointment letter) ಹಸ್ತಾಂತರಿಸಿದರು.

Mamata Banerjee announces new stadium in Siliguri to be named after World Cup star Richa Ghosh

ಇನ್ನು ರಾಜ್ಯ ಸರ್ಕಾರದಿಂದ ರಿಚಾ ಅವರಿಗೆ ಬಂಗಾ ಬೂಷಣ್‌ ಪ್ರಶಸ್ತಿಯನ್ನು ನೀಡಲಾಯಿತು. ಇದು ಬಂಗಾರದ ಸರ ಹೊಂದಿದೆ. ಇನ್ನು 34 ಲಕ್ಷದ ನಗದು ಬಹುಮಾನವನ್ನು ಸಿಎಬಿ ಘೋಷಿಸಿದೆ. ವಿಶ್ವಕಪ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ಚಿನ್ನ ಲೇಪಿತ ಬ್ಯಾಟ್ ಹಾಗೂ ಚೆಂಡನ್ನು ನೀಡಿ ಗೌರವಿಸಲಾಗಿದೆ. ರಿಚಾ ಘೋಷ್‌ ಅವರು ಆಡಿದ 8 ಪಂದ್ಯಗಳಲ್ಲಿ 235 ರನ್‌ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.

Story first published: Monday, November 10, 2025, 20:15 [IST]
Other articles published on Nov 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+