Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪದಾರ್ಪಣಾ ಪಂದ್ಯದಲ್ಲಿ 6 ವಿಕೆಟ್‌ ಪಡೆದ ಮಾನವ್ ಸುತಾರ್ ದಾಖಲೆ: ಅಫ್ಘಾನಿಸ್ತಾನಕ್ಕೆ ಫಾಲೋ ಆನ್‌

ಟೀಮ್ ಇಂಡಿಯಾ ಯುವ ಸ್ಪಿನ್ ಬೌಲರ್‌ ಮಾನವ್ ಸುತಾರ್ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಾನವ್ ಸುತಾರ್ ಮಾರಕ ದಾಳಿ ನಡೆಸಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಮಾನವ್ ಸುತಾರ್ 6 ವಿಕೆಟ್‌ ಪಡೆದು ಆರ್ಭಟಿಸಿದ್ದಾರೆ.

ಮೂರನೇ ದಿನದಾಟವನ್ನು ಅಫ್ಘಾನಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 113 ರನ್‌ಗಳಿಂದ ಆರಂಭಿಸಿತು. ಭೋಜನ ವಿರಾಮದ ವೇಳೆ ಟೀಮ್ ಇಂಡಿಯಾ ಅಫ್ಘಾನಿಸ್ತಾನ ತಂಡವನ್ನು ಆಲೌಟ್ ಮಾಡುವಲ್ಲಿ ಸಫಲವಾಯಿತು. ಮೊದಲ ಇನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ 152 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನಿಸ್ತಾನದ ಪರ ಮಧ್ಯಮ ಕ್ರಮಾಂಕದ ರಹಮತ್ ಶಾ 60 ರನ್‌ ಬಾರಿಸಿ ಅಬ್ಬರಿಸಿದರು.

Manav Suthar

23 ವರ್ಷದ ರಾಜಸ್ಥಾನದ ಮಾನವ್ ಸುತಾರ್ ತಮ್ಮ ಪದಾರ್ಪಣಾ ಪಂದ್ಯವನ್ನು ಸ್ಮರಣೀಯವಾಗಿಸಿದರು. ಇವರು ತಮ್ಮ ಟೆಸ್ಟ್‌ ಕ್ರಿಕೆಟ್‌ ಜೀವನದ ಮೊದಲ ಪಂದ್ಯದಲ್ಲಿ 6 ವಿಕೆಟ್‌ ಪಡೆದ ಸಾಧನೆ ಮಾಡಿದರು. ಇವರ ಎಸೆತಗಳನ್ನು ಎದುರಿಸುವಲ್ಲಿ ಅಫ್ಘಾನ್‌ ಬ್ಯಾಟರ್‌ಗಳು ಕಂಗಾಲಾದರು.

ಸುತಾರ್‌ ಮೊದಲ ಇನಿಂಗ್ಸ್‌ನಲ್ಲಿ 22 ಓವರ್‌ ಬೌಲಿಂಗ್ ನಡೆಸಿ 33 ರನ್‌ ನೀಡಿ 6 ವಿಕೆಟ್‌ ಪಡೆಯುತ್ತಿದ್ದಂತೆ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ.

ಸ್ಮರಣೀಯ ಪಂದ್ಯ

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಮಾನವ್ ಸುತಾರ್ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಭಾರತ 8 ವಿಕೆಟ್‌ಗೆ 564 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಮಾನವ್‌ ಸುತಾರ್ ತಮ್ಮ ಟೆಸ್ಟ್‌ ವೃತ್ತಿ ಜೀವನದ ಮೊದಲ ಪಂದ್ಯದ ಮೊದಲ ಓವರ್‌ನಲ್ಲಿ ವಿಕೆಟ್‌ ಪಡೆದು ಅಬ್ಬರಿಸಿದರು.

Manav Suthar

ಮಾನವ್ ಸುತಾರ್ ಮೊದಲ ಪಂದ್ಯದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದ ಭಾರತದ 10ನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಟೆಸ್ಟ್ ಇತಿಹಾಸದಲ್ಲಿ ವಿಶ್ವದಾದ್ಯಂತ ಸುಮಾರು 174 ಆಟಗಾರರು ಮಾತ್ರ ಈ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

ಪದಾರ್ಪಣೆ ಪಂದ್ಯದಲ್ಲಿ 5ಕ್ಕೂ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

  • ಮೊಹಮ್ಮದ್ ನಿಸ್ಸಾರ್ - ಇಂಗ್ಲೆಂಡ್ ವಿರುದ್ಧ 5/93, ಲಾರ್ಡ್ಸ್ (1932)
  • ವಾಮನ್ ಕುಮಾರ್ - ಪಾಕಿಸ್ತಾನ ವಿರುದ್ಧ 5/64, ದೆಹಲಿ (1961)
  • ಸೈಯದ್ ಅಬಿದ್ ಅಲಿ - ಆಸ್ಟ್ರೇಲಿಯಾ ವಿರುದ್ಧ 6/55, ಅಡಿಲೇಡ್ (1967)
  • ದಿಲೀಪ್ ದೋಷಿ - ಆಸ್ಟ್ರೇಲಿಯಾ ವಿರುದ್ಧ 6/103, ಚೆನ್ನೈ (1979)
  • ನರೇಂದ್ರ ಹಿರ್ವಾನಿ - ವೆಸ್ಟ್ ಇಂಡೀಸ್ ವಿರುದ್ಧ 8/61, ಚೆನ್ನೈ (1988)
  • ಅಮಿತ್ ಮಿಶ್ರಾ - ಆಸ್ಟ್ರೇಲಿಯಾ ವಿರುದ್ಧ 5/71, ಮೊಹಾಲಿ (2008)
  • ರವಿಚಂದ್ರನ್ ಅಶ್ವಿನ್ - ವೆಸ್ಟ್ ಇಂಡೀಸ್ ವಿರುದ್ಧ 6/47, ದೆಹಲಿ (2011)
  • ಮೊಹಮ್ಮದ್ ಶಮಿ - ವೆಸ್ಟ್ ಇಂಡೀಸ್ ವಿರುದ್ಧ 5/47, ಕೋಲ್ಕತ್ತಾ (2013)
  • ಅಕ್ಷರ್ ಪಟೇಲ್ - ಇಂಗ್ಲೆಂಡ್ ವಿರುದ್ಧ 5/60, ಚೆನ್ನೈ (2021)
  • ಮಾನವ್ ಸುತಾರ್ - ಅಫ್ಘಾನಿಸ್ತಾನ ವಿರುದ್ಧ 6/33, ನ್ಯೂ ಚಂಡೀಗಢ (2026)

Story first published: Monday, June 8, 2026, 11:43 [IST]
Other articles published on Jun 8, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+