Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಕೆಎಲ್ ರಾಹುಲ್‌ 11 ರನ್‌ ಬಾರಿಸುತ್ತಿದ್ದಂತೆ ಎಲೈಟ್‌ ಕ್ಲಬ್‌ಗೆ ಎಂಟ್ರಿ

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಬುಧವಾರ ನಡೆಯಲಿದೆ. ಈ ಟೆಸ್ಟ್‌ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಇಂಗ್ಲೆಂಡ್‌ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ್ದು, ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ಕೆಎಲ್ ರಾಹುಲ್ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 11 ರನ್‌ ಬಾರಿಸುತ್ತಾ ಇದ್ದಂತೆ ದೊಡ್ಡ ಸಾಧನೆ ಮಾಡಲಿದ್ದಾರೆ.

ಆಂಡರ್ಸನ್‌, ತೆಂಡುಲ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಭಿಕ ರಾಹುಲ್‌ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮಾಡಿ ರನ್‌ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ ತಮ್ಮ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನದಿಂದ ತಂಡಕ್ಕೆ ನೆರವಾಗಿದ್ದಾರೆ. ಈ ಮೂಲಕ ಇವರು ಈಗ ಟ್ರಬಲ್‌ ಶೂಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ.

Manchester Test All Eyes on KL Rahul as He Stands Poised to Reach 1000 Test Runs in England

ಇಂಗ್ಲೆಂಡ್‌ ನೆಲದಲ್ಲಿ ಕೆಎಲ್ ರಾಹುಲ್‌ ಸೊಗಸಾಗಿ ಬ್ಯಾಟ್ ಮಾಡಿದ್ದಾರೆ. ಈ ವೇಳೆ ಇವರು ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ 11 ರನ್‌ ಸಿಡಿಸುತ್ತಾ ಇದ್ದಂತೆ, ಆಂಗ್ಲರ ನಾಡಿನಲ್ಲಿ 1000 ರನ್‌ ಪೂರೈಸಿದ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಈ ಸಾಧನೆಯ ಮಾಡಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಲಿದ್ದಾರೆ. ಈ ಮೊದಲ ಸಚಿನ್ ತೆಂಡೂಲ್ಕರ್ (1575 ರನ್‌), ರಾಹುಲ್ ದ್ರಾವಿಡ್ (1376 ರನ್‌) ಮತ್ತು ಸುನಿಲ್ ಗವಾಸ್ಕರ್ (1152 ರನ್‌) ಈ ಸಾಧನೆ ಮಾಡಿದ್ದರು. ಈಗ ರಾಹುಲ್‌ ಈ ಎಲೈಟ್‌ ಕ್ಲಬ್‌ ಸೇರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಸರಣಿಯಲ್ಲಿ ಹೇಗಿದೆ ರಾಹುಲ್ ಪ್ರದರ್ಶನ

ಕನ್ನಡಿಗ ಕೆಎಲ್ ರಾಹುಲ್‌ ಇಂಗ್ಲೆಂಡ್‌ನಲ್ಲಿ 12 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಸೇರಿದಂತೆ 41.20 ಸರಾಸರಿಯಲ್ಲಿ 989 ರನ್‌ ಸಿಡಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ ರಾಹುಲ್‌ ಆಡಿರುವ 3 ಟೆಸ್ಟ್ ಪಂದ್ಯಗಳಲ್ಲಿ 62.50 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ. ಇವರು ಹೆಡಿಂಗ್ಲಿ ಹಾಗೂ ಲಾರ್ಡ್ಸ್‌ ಮೈದಾನದಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಹೀಗಾಗಿ ಇವರ ಮೇಲೆ ಭರವಸೆ ಹೆಚ್ಚಾಗಿದೆ. ಟೀಮ್ ಇಂಡಿಯಾ ಮುಂದಿನ ಪಂದ್ಯವನ್ನು ಗೆಲ್ಲ ಬೇಕಾದಲ್ಲಿ ಇವರ ಸಾಧನೆ ಸಹ ಮಹತ್ವದಾಗಿದೆ.

Manchester Test All Eyes on KL Rahul as He Stands Poised to Reach 1000 Test Runs in England

ಸರಣಿಯ ಚಿತ್ರಣ

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೊದಲ ಟೆಸ್ಟ್ ಪಂದ್ಯ ಲೀಡ್ಸ್ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಗೆದ್ದು ಕೊಂಡಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್‌ಗಳಿಂದ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಇನ್ನು ಲಾರ್ಡ್ಸ್‌ನಲ್ಲಿ ನಡೆದ ರೋಚಕ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 22 ರನ್‌ಗಳಿಂದ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Story first published: Saturday, July 19, 2025, 10:13 [IST]
Other articles published on Jul 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+