Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ 'ಶೂನ್ಯ' ಸುತ್ತಿದರೂ ದಾಖಲೆ

ಓಲ್ಡ್ ಟ್ರಾಫರ್ಡ್, ಆ.8: ಇಲ್ಲಿ ಆರಂಭವಾದ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಳಪೆ ಪ್ರದರ್ಶನ ನೀಡಿದ್ದಲ್ಲದೆ ಹಲವು ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತ್ತುವ ಮೂಲಕ ವಿಶ್ವ ದಾಖಲೆ ಸರಿಗಟ್ಟಿದರು. ಸ್ಟುವರ್ಟ್ ಬ್ರಾಡ್, ಆಂಡರ್ಸನ್ ದಾಳಿಗೆ ತತ್ತರಿಸಿದ ಧೋನಿ ಪಡೆ 152 ಸ್ಕೋರಿಗೆ ಕುಸಿಯಿತು.

ಈ ಟೆಸ್ಟ್ ಪಂದ್ಯ ಸೇರಿದಂತೆ 2,134 ಟೆಸ್ಟ್ ಗಳ ಇತಿಹಾಸದಲ್ಲಿ 6 ಜನ ಬ್ಯಾಟ್ಸ್ ಮನ್ ಗಳು ರನ್ ಖಾತೆ ತೆರೆಯದೇ ಪೆವಿಲಿಯನ್ ಗೆ ಹಿಂತಿರುಗಿದ್ದು ದಾಖಲೆಯಾಗಿ ಉಳಿಯಿತು. ಮುರಳಿ ವಿಜಯ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್ ಹಾಗೂ ಪಂಕಜ್ ಸಿಂಗ್ 'ಡಕ್' ಔಟ್ ಆದ ಆಟಗಾರರು.

ಸ್ಕೋರ್ ಕಾರ್ಡ್ ನೋಡಿ

ಸ್ಟುವರ್ಟ್ ಬ್ರಾಡ್(6-25) ಹಾಗೂ ಜೇಮ್ಸ್ ಆಂಡರ್ಸನ್(3-46) ಬಿರುಗಾಳಿ ವೇಗಕ್ಕೆ ತತ್ತರಿಸಿದ ಭಾರತ ಕೇವಲ 152 ರನ್‌ಗೆ ಸರ್ವಪತನ ಕಂಡರೆ, ನಾಯಕ ಧೋನಿ(71) ಹಾಗೂ ಅಶ್ವಿನ್(40) ಕೊಂಚ ಪ್ರತಿರೋಧ ತೋರಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪರೇಡ್ ನಡೆಸಿದರು.

Heroes to Zeroes: India equal world record with 6 ducks

ಪಂದ್ಯ ಆರಂಭವಾಗಿ 5.1 ಓವರ್‌ಗಳಲ್ಲಿ 8 ರನ್‌ಗೆ 4 ವಿಕೆಟ್ ಕಳೆದುಕೊಂಡ ಭಾರತ ತಂಡ 62 ವರ್ಷಗಳ ನಂತರ ಅತ್ಯಂತ ಕೆಟ್ಟ ಆರಂಭವನ್ನು ಪಡೆಯಿತು. ಭಾರತದ ಆರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾಗಿದ್ದು ಬ್ಯಾಟಿಂಗ್ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿತ್ತು. ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಕಳೆದುಕೊಂಡ ನಾಲ್ಕನೆ ತಂಡ ಭಾರತ ಎನಿಸಿದೆ.

ಈ ಹಿಂದೆ ಬಾಂಗ್ಲಾದೇಶ, ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನ ಈ ಕಳಪೆ ದಾಖಲೆ ಮಾಡಿದ್ದವು. ಟಾಸ್ ಜಯಿಸಿದ ಭಾರತದ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಧೋನಿಯ ನಿರ್ಧಾರ ತಪ್ಪೆಂದು ಸಾಬೀತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

* ಪಾಕಿಸ್ತಾನ vs ವೆಸ್ಟ್ ಇಂಡೀಸ್ (ಕರಾಚಿ, 1980)
* ದಕ್ಷಿಣ ಆಫ್ರಿಕಾ vs ಭಾರತ (ಅಹಮದಾಬಾದ್, 1996)
* ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ (ಢಾಕಾ, 2002)
* ಭಾರತ vs ಇಂಗ್ಲೆಂಡ್ (ಮ್ಯಾಂಚೆಸ್ಟರ್, 2014)

ಸರಣಿಯಲ್ಲಿ ಇದೇ ಮೊದಲ ಬಾರಿ ಶಿಖರ್ ಧವನ್ ಬದಲಿಗನಾಗಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದ ಗೌತಮ್ ಗಂಭೀರ್ (4) ಬ್ರಾಡ್ ಎಸೆತವನ್ನು ರೂಟ್ ಕೈಗೆ ನೀಡುವ ಮೂಲಕ ಭಾರತದ ಕುಸಿತ ಆರಂಭವಾಯಿತು. ಭಾರತ ಪ್ರಥಮ ಇನಿಂಗ್ಸ್ 46.4 ಓವರ್‌ಗಳಲ್ಲಿ 152(ಆಲೌಟ್)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+