For Quick Alerts
ALLOW NOTIFICATIONS  
For Daily Alerts
 

Kuldeep Yadav: ನಾಲ್ಕನೇ ಟೆಸ್ಟ್‌ನಲ್ಲಿ ಕುಲ್‌ದೀಪ್‌ಗೆ ಸಿಗುತ್ತಾ ಅವಕಾಶ?

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಜುಲೈ 23 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಪ್ಲ್ಯಾನ್ ಭಾರತ ತಂಡದ್ದಾಗಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಆಡುವುದು ಡೌಟ್. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಯೋಜನೆ ಹೇಗಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಭಾರತ ಆಂಡರ್ಸನ್ ಹಾಗೂ ತೆಂಡುಲ್ಕರ್ ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ. ಈ ವೇಳೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಯಾರಿಗೆಲ್ಲಾ ಅವಕಾಶ ಸಿಗುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಕರುಣ್ ನಾಯರ್‌ಗೆ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ತಂಡದ ಸಂಯೋಜನೆ ದೊಡ್ಡ ಪ್ರಶ್ನೆಯಾಗಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ಅನುಪಸ್ಥಿತಿಯನ್ನು ತುಂಬುವುದು ಯಾರು? ಎಂಬ ಪ್ರಶ್ನೆಗಳು ಎದ್ದಿವೆ.

Manchester Test Will Kuldeep Get a Chance in the Fourth Test

ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಎಕ್ಸ್‌ ಫ್ಯಾಕ್ಟರ್‌ ರೂಪದಲ್ಲಿ ಕುಲ್‌ದೀಪ್‌ ಯಾದವ್ ಅವರನ್ನು ಕಣಕ್ಕೆ ಇಳಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರು ತಂಡಕ್ಕೆ ಎಂಟ್ರಿ ನೀಡಿದಲ್ಲಿ ತಂಡದ ಮನೋಬಲ ಹೆಚ್ಚಲಿದೆ. ಟೀಮ್ ಇಂಡಿಯಾ ಕುಲ್‌ದೀಪ್‌ ಯಾದವ್ ಅವರಿಗೆ ಸ್ಥನ ನೀಡ ಬೇಕು ಎಂಬ ಕೂಗುಗಳು ಕೇಳಿ ಬರುತ್ತಿವೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕುಲ್‌ದೀಪ್ ಯಾದವ್ ಇನ್ನು ಈ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಮೈದಾನಕ್ಕೆ ಇಳಿದಿಲ್ಲ.

ಅವಕಾಶಕ್ಕಾಗಿ ಕಾಯುತ್ತಿರುವ ಸ್ಪಿನ್ ಬೌಲರ್‌

ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಒಬ್ಬ ಬ್ಯಾಟರ್‌ ಕಡಿಮೆ ಮಾಡಿ, ಇನ್ನು ಒಬ್ಬ ಬೌಲರ್‌ನ್ನು ಸೇರಿಸಿಕೊಂಡರೆ ಒಳ್ಳೆಯದು ಎಂಬ ಮಾತುಗಳು ಕೇಳಿ ಬಂದಿವೆ. ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂವರು ವೇಗಿಗಳೊಂದಿಗೆ ಕಣಕ್ಕೆ ಇಳಿಯುವುದು ಫಿಕ್ಸ್‌ ಎಂಬಂತಾಗಿದೆ. ಇನ್ನು ಇಬ್ಬರು ಆಲ್‌ರೌಂಡರ್ ಹಾಗೂ ಒಬ್ಬ ನುರಿತ ಸ್ಪಿನ್ ಬೌಲರ್‌ಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ಆರಂಭವಾಗಿವೆ.

Manchester Test Will Kuldeep Get a Chance in the Fourth Test

ಮ್ಯಾಂಚೆಸ್ಟರ್‌ ಪಿಚ್‌ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ತಂಡದಲ್ಲಿ ಮೂವರು ಸ್ಪಿನ್ ಬೌಲರ್‌ಗಳು ಇದ್ದರೆ ಒಳ್ಳೆಯದು ಎಂಬ ಮಾತುಗಳು ಕೇಳಿ ಬಂದಿವೆ. ಕುಲ್‌ದೀಪ್‌ ತಂಡಕ್ಕೆ ಎಂಟ್ರಿ ನೀಡುವುದರಿಂದ, ತಂಡದ ಬೌಲಿಂಗ್ ವಿಭಾಗಕ್ಕೆ ಬಲ ಬಂದಂತೆ ಆಗುತ್ತದೆ. ಕುಲ್‌ದೀಪ್‌ ತಮ್ಮ ರಾಂಗ್ ಒನ್, ಚೈನಾಮೆನ್ ಹಾಗೂ ಗೂಗ್ಲಿ ಮೂಲಕ ಎದುರಾಳಿಗನ್ನು ಕಾಡಿ ವಿಕೆಟ್ ಬೇಟೆ ನಡೆಸಬಲ್ಲರು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕುಲ್‌ದೀಪ್ ಆಡಿದ್ರೆ ಬೆಸ್ಟ್.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರು ಟೆಸ್ಟ್‌ ಪಂದ್ಯಗಳು ಮುಗಿದಿವೆ. ಇದರಲ್ಲಿ ಇಂಗ್ಲೆಂಡ್‌ 2 ಹಾಗೂ ಭಾರತ 1 ರಲ್ಲಿ ಜಯ ಸಾಧಿಸಿದೆ. ಇನ್ನು ಎರಡು ಪಂದ್ಯಗಳು ನಡೆಯಲಿದ್ದು, ಈ ಪಂದ್ಯಗಳು ಸರಣಿಯ ದಿಕ್ಕನ್ನು ಸೂಚಿಸಲಿವೆ.

Story first published: Sunday, July 20, 2025, 13:05 [IST]
Other articles published on Jul 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+