For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನೂತನ ಫ್ರಾಂಚೈಸಿ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರ ಕಣ್ಣು

Manchester United owners has shown interest for the new IPL teams

ಐಪಿಎಲ್‌ನ ಎರಡು ಹೊಸ ತಂಡಗಳ ಮಾಲೀಕತ್ವಕ್ಕೆ ಟೆಂಡರ್ ಕರೆಯಲಾಗಿದ್ದು ಎರಡು ನೂತನ ಫ್ರಾಂಚೈಸಿಗಳ ಮಾಲೀಕರು ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಐಪಿಎಲ್‌ನ ನೂತನ ಫ್ರಾಂಚೈಸಿಯ ಮೇಲೆ ಫುಟ್ಬಾಲ್ ಲೋಕದ ಅತ್ಯಂತ ಜನಪ್ರಿಯ ಕ್ಲಬ್ ಎಂದು ಖ್ಯಾತವಾಗಿರುವ ಮ್ಯಾಂಚೆಸ್ಟರ್ ಯುನೈಟೆಡ್‌ ಕೂಡ ಐಪಿಎಲ್ ಮೇಲೆ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

ನೂತನವಾಗಿ ಸೇರ್ಪಡೆಯಾಗಲಿರುವ ತಂಡಗಳ ಮಾಲೀಕತ್ವಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್‌ನ ಮಾಲಿಕರಾಗಿರುವ ಗ್ಲೇಜರ್ ಕುಟುಂಬ ಐಪಿಎಲ್‌ನಲ್ಲಿ ಫ್ರಾಂಚೈಸಿ ಹೊಂದಲು ಉತ್ಸುಕವಾಗಿದೆ ಎನ್ನಲಾಗಿದೆ. ಮಾಲೀಕರು ಕೂಡ ಈ ಫ್ರಾಂಚೈಸಿಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಂಗ್ಲೀಷ್ ಪ್ರೀಮಿಯರ್ ಲೀಗ್‌ನ ಈ ಪ್ರತಿಷ್ಠಿತ ಕ್ಲಬ್‌ನ ಯುಎಸ್ ಮೂಲದ ಮಾಲೀಕರು ಖಾಸಗಿ ಇಕ್ವಿಟಿ ಕಂಪನಿಯ ಮೂಲಕ ಬಿಸಿಸಿಐನ ಇನ್ವಿಟೇಶನ್ ಟು ಟೆಂಡರ್(ಐಟಿಟಿ) ಕೈಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಈ ಮೊದಲೇ ಇನ್ವಿಟೇಶನ್ ಟು ಟೆಂಡರ್ (ಐಟಿಟಿ) ನೀಡಿತ್ತು. ಟೆಂಡರ್ ಆಹ್ವಾನ ಪತ್ರದ ಶುಲ್ಕಕ್ಕೆ 2021ರ ಆಗಸ್ಟ್ 31 ಕೊನೇ ದಿನಾಂಕವೆಂದು ಹೇಳಿತ್ತು. ಆದರೆ ಆ ಬಳಿಕ ಐಟಿಟಿ ದಾಖಲಾತಿ ಖರೀದಿಗೆ ಶುಲ್ಕ ಭರಿಸಲು ಅಕ್ಟೋಬರ್ 10ರ ವರೆಗೆ ಗಡುವು ವಿಸ್ತರಿಸಿತ್ತು. ಇದೀಗ ಈ ಎಲ್ಲಾ ಪ್ರಕ್ರಿಯೆಗಳು ಕೂಡ ಸಂಪೂರ್ಣವಾಗಿದೆ.

ಇನ್ನು ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಯ ಖರೀದಿಗೆ ಸಾಕಷ್ಟು ಕಠಿಣ ನಿಯಮಗಳಿದೆ. ಹೊಸ ತಂಡಗಳಿಗಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಬಿಡ್ಡರ್‌ಗಳು 3000 ಕೋಟಿಯಷ್ಟು ವ್ಯವಹಾರವನ್ನು ಹೊಂದಿರಬೇಕು. ಅಥವಾ 2500 ಕೋಟಿಗೂ ಅಧಿಕ ಅಥವಾ ವೈಯಕ್ತಕ ಮೌಲ್ಯ 2500 ಕೋಟಿಯಷ್ಟಿರಬೇಕು.

ಇನ್ನು ಈ ಬಿಡ್ಡಿಂಗ್‌ಗಾಗಿ ಐಟಿಟಿ ಪಡೆದುಕೊಂಡು ವಿದೇಶಿ ಸಂಸ್ಥೆಗಳು ಕೂಡ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ವಿದೇಶಿ ಸಂಸ್ಥೆಗಳು ಈ ಬಿಡ್ಡಿಂಗ್‌ನಲ್ಲಿ ಗೆದ್ದರೆ ಆಗ ಭಾರತದಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

"ವಿದೇಶಿ ಹೂಡಿಕೆದಾರರು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ತಾಂತ್ರಿಕವಾಗಿ ಅವಕಾಶವಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲೀಕರು ಈ ಬಿಡ್ಡಿಂಗ್‌ನಲ್ಲಿ ಬಂದು ಪಾಳ್ಗೊಳ್ಳುತ್ತಾರೆಯೇ ಎಂಬು ನಮಗೆ ನಿಜಕ್ಕೂ ತಿಳಿದಿಲ್ಲ. ಆದರೆ ಈವರೆಗೆ ತಿಳಿದುಬಂದ ಮಾಹಿತಿಯಂತೆ ಈ ಬಗ್ಗೆ ಅವರು ಆಸಕ್ತಿಯನ್ನು ಹೊಂದಿದ್ದಾರೆ" ಎಂದು ಈ ಬೆಳವಣಿಯ ಬಗ್ಗೆ ಬಲ್ಲಮೂಲಗಳ ಹೇಳಿಕೆಯನ್ನು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ. ಇನ್ನು ಈ ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು 17-18 ಸಂಸ್ಥೆಗಳು ಉಮೇದುವಾರಿಕೆಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ.

Story first published: Thursday, October 21, 2021, 15:21 [IST]
Other articles published on Oct 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+