Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Women's World Cup: ಪ್ರತಿಕಾ ರಾವಲ್‌, ಸ್ಮೃತಿ ಶತಕದ ಸೊಬಗು: ಭಾರತ ದಾಖಲೆಯ ಮೊತ್ತ

ಮುಂಬೈ: ಸ್ಟಾರ್ ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್‌ ಅವರು ಬಾರಿಸಿದ ಶತಕದ ನೆರಿವಿಂದ ಟೀಮ್ ಇಂಡಿಯಾ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸವಾಲಿನ ಮೊತ್ತವನ್ನು ಕಲೆ ಹಾಕಿದೆ. ಭಾರತ 341 ರನ್‌ಗಳ ಗುರಿಯನ್ನು ಕಿವೀಸ್ ತಂಡಕ್ಕೆ ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ಅಮೋಘವಾಗಿತ್ತು. ಪ್ರತಿಕಾ ರಾವಲ್‌ ಹಾಗೂ ಸ್ಮೃತಿ ಮಂಧಾನ ಜೀಡು ಮೊದಲ ವಿಕೆಟ್‌ ಸೊಗಸಾದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಆರಂಭದಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿತು. ಒಂದು ಹಂತದಲ್ಲಿ ಆಮೆಗತಿಯಲ್ಲಿ ರನ್‌ಗಳು ದಾಖಲಾದರೆ, ಆ ಬಳಿಕ ಸ್ಫೋಟಕ ಆಟ ಕಂಡು ಬಂದಿತು. ಭಾರತ ಮೊದಲ 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಪೇರಿಸಿತು. ಈ ಭರ್ಜರಿ ಜೊತೆಯಾಟದ ನೆರವಿನಿಂದ ಬೃಹತ್ ಮೊತ್ತದತ್ತ ಹರ್ಮನ್ ಪ್ರಿತ್ ಕೌರ್ ಪಡೆ ಹೆಜ್ಜೆ ಇಟ್ಟಿತು.

Mandhana 109 and Raval 122 Centuries Steer India Women to a Commanding Total Against New Zealand

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ವೃತ್ತಿ ಜೀವನದಲ್ಲಿ 14ನೇ ಏಕದಿನ ಶತಕವನ್ನು ದಾಖಲಿಸಿದರು. ಅಂತಿಮವಾಗಿ ಸ್ಮೃತಿ 95 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 109 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಲೀಗ್‌ ಹಂತದ ಹಿಂದಿನ 2 ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸಿದ್ದ ಸ್ಮೃತಿ ಮಂಧಾನ ಅವರು, ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದರು.

ಸ್ಮೃತಿ ಔಟ್ ಆದರೂ ತಮ್ಮ ನೈಜ್ಯ ಆಟವನ್ನು ಆಡಿದ ಪ್ರತಿಕಾ ರಾವಲ್ ಭರ್ಜರಿ ಆಟವನ್ನು ಮುಂದುವರೆಸಿದರು. 25 ವರ್ಷದ ಯುವ ಬ್ಯಾಟರ್ ಪ್ರತಿಕಾ ರಾವಲ್‌ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಶತಕವನ್ನು ಸಿಡಿಸಿ ಸಂಭ್ರಮಿಸಿದರು. ಇದು ಅವರ ವೃತ್ತಿ ಜೀವನದ 2ನೇ ಶತಕವಾಗಿದೆ. ಪ್ರತಿಕಾ 134 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ 122 ರನ್‌ ಬಾರಿಸಿ ಅಬ್ಬರಿಸಿದರು. 2ನೇ ವಿಕೆಟ್‌ಗೆ ಜೆಮಿಮಾ ರೋಡ್ರಿಗಸ್‌ ಹಾಗೂ ಪ್ರತಿಕಾ ಜೋಡಿ 58 ಎಸೆತಗಳಲ್ಲಿ 76 ರನ್‌ ಸಿಡಿಸಿತು.

ಜೇಮಿಮಾ ಅರ್ಧಶತಕ

ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್‌ 55 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ ಅಜೇಯ 76 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ರಿಚಾ ಘೋಷ್ ಒಂದು ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 340 ರನ್‌ ಕಲೆ ಹಾಕಿತು. ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಓವರ್‌ಗಳಿಗೆ ಕತ್ತರಿ ಹಾಕಲಾಯಿತು. ನ್ಯೂಜಿಲೆಂಡ್ ತಂಡದ ಪರ ಸೂಜಿ ಬೆಟ್ಸ್‌ ಹಾಗೂ ಅಮೆಲಿಯಾ ಕೆರ್, ಮೀರ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

Story first published: Thursday, October 23, 2025, 18:41 [IST]
Other articles published on Oct 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+