For Quick Alerts
ALLOW NOTIFICATIONS  
For Daily Alerts
 

ವೈರಲ್ ಆಗಿದ್ದ 'ಮದುವೆ ಫೋಟೋ' ಡಿಲೀಟ್ ಮಾಡಿ ಸದ್ದು ಮಾಡಿದ ಸ್ಮೃತಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ಕಳೆದ ಭಾನುವಾರ (ನವೆಂಬರ್ 23) ಮದುವೆ ಸಮಾರಂಭ ನಡೆಯಬೇಕಿತ್ತು. ಆದರೆ ಅದೇ ದಿನ ಬೆಳಗ್ಗೆ ಸ್ಮೃತಿ ಅವರ ತಂದೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಸ್ಮೃತಿ ಮಂಧನಾ ಹಾಗೂ ಪಲಾಶ್‌ ಮುಶ್ಚಲ್‌ ಅವರ ಮದುವೆ ಮುಂದೂಡಲಾಗಿದೆ.

ಸ್ಮೃತಿ ತಂದೆಯ ಬಳಿಕ ಪಲಾಶ್ ಮುಚ್ಚಲ್ ಅವರ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಟೈಮ್ಸ್ ವರದಿಯ ಪ್ರಕಾರ, ಪಲಾಶ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಳಿಕ ಅವರನ್ನು ಪಲಾಶ್ ತಾಯಿ ಅವರನ್ನು ಕರೆದುಕೊಂಡು ಮುಂಬೈಗೆ ವಿಶ್ರಾಂತಿಗೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸ್ಮೃತಿ ಮಂಧನಾ ಅವರು ಸಾಮಾಜಿಕ ತಾಣದಲ್ಲಿ ತಾವು ಹಾಕಿದ್ದ ಮೆಹಂದಿ ಹಾಗೂ ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆಯೂ ಸ್ಪಷ್ಟತೆ ನೀಡಲಾಗಿದೆ.

Mandhana-Muschaal Wedding Postponed After Health Scare Smriti Deletes Engagement Posts

ಸ್ಮೃತಿ ಅವರ ತಂದೆ ಆರೋಗ್ಯದಲ್ಲಿ ಸುಧಾರಣೆ ಆಗುವುವರೆಗೆ ಮದುವೆ ಸಮಾರಂಭವನ್ನು ಅನಿರ್ಧಿಷ್ಟವಾಗಿ ಮುಂದೂಡಲಾಗಿದೆ ಎಂದು ಸ್ಮೃತಿ ಮಂಧಾನ ಮ್ಯಾನೇಜರ್‌ ತಿಳಿಸಿದ್ದಾರೆ. ಸ್ಮೃತಿ ಅವರ ತಂದೆಯೊಂದಿಗೆ ಪಲಾಶ್‌ ಅವರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಶ್ರೀನಿವಾಸ್‌ ಮಂಧಾನ ಅವರ ಆರೋಗ್ಯದಲ್ಲಿ ಸುಧಾರಣೆ ಆಗುವವರೆಗೂ ಮದುವೆ ಮುಂದೂಡುವ ಬಗ್ಗೆ ಪಲಾಶ್‌ ಮೊದಲು ನಿರ್ಧರಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಫೋಟೋ ವಿಡಿಯೋ, ಡಿಲೀಟ್‌

ಸ್ಮೃತಿ ಅವರು ಪಲಾಶ್‌ ಅವರೊಂದಿಗಿನ ನಿಶ್ಚಿತಾರ್ಥವನ್ನು ಸಮರ್ಥಿಸುವಂತಹ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸ್ಮೃತಿ ಟೀಮ್ ಇಂಡಿಯಾದ ಆಟಗಾರ್ತಿಯೊಂದಿಗೆ ಡ್ಯಾನ್ಸ್‌ ಮಾಡುತ್ತಿದ್ದ ವಿಡಿಯೋ ಅಭಿಮಾನಿಗಳ ಮನ ಸೆಳೆದಿತ್ತು. ಇದಾದ ಬಳಿಕ ಪಲಾಶ್‌ ಅವರು ಸ್ಮೃತಿ ಅವರಿಗೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಇದಾದ ಬಳಿಕ ಉಭಯ ಸ್ಟಾರ್‌ಗಳ ಹಳದಿ ಸಮಾರಂಭದ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಅಂದಹಾಗೆ ಈ ಎಲ್ಲ ವಿಡಿಯೋಗಳನ್ನು ಸೋಮವಾರ ಡಿಲೀಟ್ ಮಾಡಲಾಗಿದೆ. ಸ್ಮೃತಿ ಅವರ ತಂದೆ ಗುಣಮುಖರಾಗುವವರೆಗೂ ಮದುವೆ ಸಮಾರಂಭ ಮುಂದೂಡಲಾಗುವುದು ಎಂದು ಈ ಮೊದಲೇ ತಿಳಿಸಿಲಾಗಿತ್ತು. "ಶೀಘ್ರದಲ್ಲೇ ಎಲ್ಲವೂ ಸರಿಯಾಗುತ್ತದೆ ಮತ್ತು ಪಲಾಶ್ ಮತ್ತು ಸ್ಮೃತಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ಪಲಾಶ್ ಅವರ ತಾಯಿ ಅಮಿತಾ ಮುಚ್ಚಲ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Story first published: Monday, November 24, 2025, 23:01 [IST]
Other articles published on Nov 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+