Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಟಿ20: ಮಂಧಾನ ಅರ್ಧಶತಕ ವ್ಯರ್ಥ, ಕಿವೀಸ್‌ಗೆ ಶರಣಾದ ಭಾರತ

Mandhana shines but India fail; New Zealand women win 1st T20

ವೆಲ್ಲಿಂಗ್ಟನ್, ಫೆಬ್ರವರಿ 6: ಸ್ಮೃತಿ ಮಂಧಾನ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ವೆಲ್ಲಿಂಗ್ಟನ್‌ನ ವೆಸ್ಟ್ ಪ್ಯಾಕ್‌ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 6) ನಡೆದ ನ್ಯೂಜಿಲ್ಯಾಂಡ್-ಭಾರತ ವನಿತಾ ಮೊದಲ ಟಿ20 ಪಂದ್ಯದಲ್ಲಿ ಭಾರತ 23 ರನ್ ಸೋಲಭವಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿಕೀಸ್ 1-0ಯ ಮುನ್ನಡೆಯಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಸೋಫಿ ಡೆವೈನ್ 62, ನಾಯಕಿ ಆಮಿ ಸಟ್ಟರ್ವೈಟ್ 33 ರನ್ ಸೇರಿಸಿದರು. ನ್ಯೂಜಿಲ್ಯಾಂಡ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದು 159 ರನ್ ಗಳಿಸಿತು.

160 ರನ್ ಗುರಿ ಬೆನ್ನತ್ತಿದ ಭಾರತ ಪರ ಸ್ಮೃತಿ ಮಂಧಾನ 58, ಜೆಮಿಮಾ ರೋಡ್ರಿಗಸ್ 39 ರನ್ ಸೇರಿಸಿದರಾದರೂ ಈ ರನ್ ತಂಡವನ್ನು ಗೆಲ್ಲಿಸುವಲ್ಲಿ ನೆರವಾಗಲಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಭಾರತದ ಉಳಿದ ಆಟಗಾರ್ತಿಯರ ಬೇಜಾವಾಬ್ದಾರಿಯ ಆಟಕ್ಕೆ ತಂಡ ಸೋಲಿನ ಬೆಲೆ ತೆರಬೇಕಾಯ್ತು.

ಭಾರತ 19.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 136 ರನ್ ಕಲೆ ಹಾಕುವುದರೊಂದಿಗೆ ಶರಣಾಯಿತು. ಆತಿಥೇಯರ ಪರ ಲೀ ಟಾಹುಹು 3, ಲೇಘ್ ಕ್ಯಾಸ್ಪರೆಕ್ ಮತ್ತು ಅಮೆಲಿಯಾ ಕೆರ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಟಾಹುಹು ಪಂದ್ಯಶ್ರೇಷ್ಠ ಆಟಗಾರ್ತಿಯೆನಿಸಿದರು.

Story first published: Wednesday, February 6, 2019, 15:26 [IST]
Other articles published on Feb 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+