Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Women's ODI Rankings: ಸ್ಮೃತಿ ಒಂದು ಸ್ಥಾನ ಕುಸಿತ: ಹರ್ಮನ್‌ಗೆ 10 ಸ್ಥಾನ ಬಡ್ತಿ

ಇತ್ತೀಚಿಗೆ ಇಂಗ್ಲೆಂಡ್‌ನಲ್ಲಿ ನಡೆದ ಮಹಿಳಾ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಮಂಧನಾ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಐಸಿಸಿ ನೂತನವಾಗಿ ಹೊರಡಿಸಿದ ರ್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಹಿನ್ನಡೆಯಾಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಮತ್ತೊಮ್ಮೆ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ 53ರ ಸರಾಸರಿಯಲ್ಲಿ 1 ಅರ್ಧಶತಕ ಸೇರಿದಂತೆ 160 ರನ್‌ ಸೇರಿಸಿದ್ದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ನಂಬರ್ 1 ಪಟ್ಟ ಲಭಿಸಿದೆ. ಇಂಗ್ಲೆಂಡ್ ಆಟಗಾರ್ತಿ ಸ್ಥಿರ ಪ್ರದರ್ಶನದ ಬಲದಿಂದ ಎರಡು ಸ್ಥಾನ ಏರಿಕೆ ಕಂಡಿದ್ದಾರೆ. ಸದ್ಯ ಇವರ ಬುಟ್ಟಿಯಲ್ಲಿ 731 ಅಂಕಗಳಿದ್ದು, ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ 728 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

Mandhana Slips as Sciver-Brunt Claims No 1 ODI Batting Spot Kaur Rodrigues Rise

ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ ಒಂದು ಸ್ಥಾನ ಕುಸಿತ ಕಂಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಆಸೀಸ್ ತಂಡದ ಸ್ಟಾರ್ ಬ್ಯಾಟರ್‌ ಎಲ್ಲಿಸ್ ಪೆರ್ರಿ 684 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಆಸೀಸ್‌ ತಂಡದ ಅಲಿಸಾ ಹೀಲಿ ಒಂದು ಸ್ಥಾನ ಏರಿಕೆ ಕಂಡಿದ್ದು, ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ಹರ್ಮನ್‌ಗೆ ಬಡ್ತಿ

ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್‌ ಶ್ರೇಯಾಂಕದಲ್ಲಿ 10 ಸ್ಥಾನ ಏರಿಕೆ ಕಂಡಿದ್ದಾರೆ. ಇವರು 645 ಅಂಕಗಳೊಂದಿಗೆ 11ನೇ ಸ್ಥಾನ ತಲುಪಿದ್ದಾರೆ. ಇವರು ಇಂಗ್ಲೆಂಡ್‌ ಪ್ರವಾಸದಲ್ಲಿ ವೇಗದ ಶತಕ ಬಾರಿಸಿ ಸುದ್ದಿಯಲ್ಲಿದ್ದರು. ಅಲ್ಲದೆ ಆಡಿದ 3 ಪಂದ್ಯಗಳಲ್ಲಿ 126 ರನ್‌ ಸಿಡಿಸಿದ್ದರು. ಇವರ ಸ್ಥಿರ ಪ್ರದರ್ಶನ ಶ್ರೇಯಾಂಕದಲ್ಲಿ ಲಾಭ ತಂದಿದೆ. ಟೀಮ್ ಇಂಡಿಯಾದ ಇನ್ನೋಬ್ಬ ಆಟಗಾರ್ತಿ ಜೆಮಿಮಾ ರೊಡ್ರಿಗಸ್‌ 622 ರೇಟಿಂಗ್ ಪಾಯಿಂಟ್ ಹೊಂದಿದ್ದು 13ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಉಳಿದಂತೆ ದೀಪ್ತಿ ಶರ್ಮಾ (24) ಒಂದು ಸ್ಥಾನ ಕುಸಿತ ಕಂಡಿದ್ದಾರೆ.

Mandhana Slips as Sciver-Brunt Claims No 1 ODI Batting Spot Kaur Rodrigues Rise

ಇನ್ನು ಮಹಿಳಾ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಸೋಫಿ ಎಕ್ಲೆಸ್ಟೋನ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್, ಮೇಗನ್ ಶುಟ್ ಕ್ರಮವಾಗಿ 2 ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ದೀಪ್ತಿ ಶರ್ಮಾ 650 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಕಿಮ್ ಗ್ರಾತ್‌ 5ನೇ ಸ್ಥಾನದಲ್ಲಿ ಉಳಿದಿದ್ದಾರೆ. ಉಳಿದಂತೆ ಟಾಪ್‌ 20ರಲ್ಲಿ ಮತ್ತೆ ಯಾವ್ ಬೌಲರ್ ಇಲ್ಲ.

Story first published: Tuesday, July 29, 2025, 16:48 [IST]
Other articles published on Jul 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+