ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಯ್ಕೆದಾರರ ಸ್ಥಾನಕ್ಕೆ ಚೇತನ್ ಶರ್ಮಾ, ಮಣೀಂದರ್ ಸಿಂಗ್ ಅರ್ಜಿ

Maninder Singh, Chetan Sharma confirm application for national selectors posts

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಆಯ್ಕೆದಾರರ ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಾದ ಚೇತನ್ ಶರ್ಮಾ, ಮಣೀಂದರ್ ಸಿಂಗ್ ಮತ್ತು ಶಿವ್ ಸುಂದರ್ ದಾಸ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ತಮ್ಮ ಝೋನ್‌ಗಳಿಂದ ಸೆಲೆಕ್ಟರ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವುದನ್ನು ಮೂವರೂ ಖಾತರಿಪಡಿಸಿದ್ದಾರೆ.

ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್

ರಾಷ್ಟ್ರೀಯ ಆಯ್ಕೆದಾರರ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ಅಜಿತ್ ಅರ್ಗಕಾರ್ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. 191 ಏಕದಿನ ಪಂದ್ಯಗಳು, 26 ಟೆಸ್ಟ್ ಪಂದ್ಯಗಳು ಮತ್ತು 4 T20I ಪಂದ್ಯಗಳನ್ನಾಡಿರುವ ಅಗರ್ಕಾರ್ ಹಿಂದಿನ ಸಾರಿಯೂ ಅರ್ಜಿ ಸಲ್ಲಿಸಿದ್ದರು. ಈ ಬಾರಿಯೂ ಮರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಿರುವವರಲ್ಲಿ ಅಜಿತ್ ಅಗರ್ಕಾರ್ ಅರ್ಜಿಯನ್ನು ಕಡೆಗಣಿಸುವಂತಿಲ್ಲ. ಯಾಕೆಂದರೆ ಮೂರು ಏಕದಿನ ವಿಶ್ವಕಪ್‌ ಪಂದ್ಯಗಳು ಮತ್ತು 2007ರಲ್ಲಿ ಒಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಆಡಿದ ಸಾಧನೆ ಅಜಿತ್ ಮಾಡಿದ್ದಾರೆ. ಹೀಗಾಗಿ ಅವರ ಅರ್ಜಿಗೆ ಹೆಚ್ಚಿನ ಮೌಲ್ಯ ಲಭಿಸಿದೆ.

'ಕ್ರಿಕೆಟ್ ದೇವರು' ಸಚಿನ್ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ ದಿನವಿದು'ಕ್ರಿಕೆಟ್ ದೇವರು' ಸಚಿನ್ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ ದಿನವಿದು

ಬಿಸಿಸಿಐಯಲ್ಲಿ ಆಯ್ಕೆದಾರರನ್ನು ಆರಿಸುವಾಗ ಒಂದೇ ಝೋನ್‌ನಿಂದ ಇಬ್ಬರನ್ನು ಆರಿಸುವಂತಿಲ್ಲ. ಒಟ್ಟು 84 ಪಂದ್ಯಗಳನ್ನಾಡಿರುವ ಸುನಿಲ್ ಜೋಶಿ ಸೌತ್ ಝೋನ್‌ನಿಂದ ಬಂದಿದ್ದಾರೆ. ಅವರೀಗ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಇನ್ನು ಸದ್ಯ ಸಮಿತಿಯಲ್ಲಿರುವ ಹಾರ್ವೀಂದ್ ಸಿಂಗ್ ಸೆಂಟ್ರಲ್ ಝೋನ್‌ನಿಂದ ಆಯ್ಕೆಯಾಗಿದ್ದಾರೆ.

Story first published: Monday, November 16, 2020, 16:48 [IST]
Other articles published on Nov 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X