For Quick Alerts
ALLOW NOTIFICATIONS  
For Daily Alerts
 

Manisankar Murasingh: ಐಪಿಎಲ್ 2026 ಹರಾಜಿನಲ್ಲಿ ತ್ರಿಪುರಾದ 'ಒನ್ ಮ್ಯಾನ್ ಆರ್ಮಿ' ಮೇಲೆ ಎಲ್ಲರ ಚಿತ್ತ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹರಾಜಿಗೆ ಭರದ ಸಿದ್ಧತೆಗಳು ನಡೆದಿವೆ. ಈ ವೇಳೆ ಎಲ್ಲ ತಂಡಗಳು ತಮ್ಮ ತಮ್ಮ ತಂಡವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ವಿದೇಶಿ ಆಟಗಾರರು ಹಾಗೂ ದೇಶೀಯ ಆಟಗಾರರು ಈ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇದೇ ವೇಳೆ ಎಲ್ಲರ ಕಣ್ಣುಗಳು ಯುವ ಹಾಗೂ ಭರವಸೆಯ ಆಟಗಾರರ ಮೇಲೆ ನೆಟ್ಟಿರಲಿವೆ. ತ್ರಿಪುರಾದ ಮಣಿಶಂಕರ್ ಮುರಾಸಿಂಗ್ (Manisankar Murasingh) ಸಹ ಈ ಹರಾಜಿನಲ್ಲಿ ಮಾಲೀಕರ ಚಿತ್ತ ಕದ್ದ ಪ್ಲೇಯರ್.

ತ್ರಿಪುರಾದ ದೇಶೀಯ ಕ್ರಿಕೆಟಿಗ ಮಣಿಶಂಕರ್ ಮುರಾಸಿಂಗ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಪ್ರತಿಭೆ. ಇವರನ್ನು ಅಲ್ಲಿನ ಅಭಿಮಾನಿಗಳು ಒನ್ ಮ್ಯಾನ್ ಆರ್ಮಿ ಎಂದು ಕರೆಯುತ್ತಾರೆ. ಇವರು ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇವರು ದೆಹಲಿ ಹಾಗೂ ಕರ್ನಾಟಕ ವಿರುದ್ಧ ನೀಡಿದ ಪ್ರದರ್ಶನ ಫ್ರಾಂಚೈಸಿಗಳು ಇವರತ್ತ ನೋಡುವಂತೆ ಮಾಡಿದೆ. ಇವರು ಪಕ್ಕಾ ಆಲ್‌ರೌಂಡರ್ ಕಡಿಮೆ ಬೆಲೆಗೆ ಒಳ್ಳೆಯ ಆಲ್‌ರೌಂಡರ್‌ ಸಿಗುವ ಸಾಧ್ಯತೆ ಇದೆ.

Manisankar Murasingh The One Man Army from Tripura Awaits IPL 2026 Breakthrough

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಇವರು ಆಡಿದ 7 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 277 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿರುವ ಇವರು 6 ವಿಕೆಟ್ ಕಬಳಿಸಿದ್ದಾರೆ. ಇದು ಇವರಲ್ಲಿ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಇವರು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಪ್ಲೇಯರ್. ಅಂದಹಾಗೆ ಇವರ ಹೆಸರನ್ನು ಐಪಿಎಲ್‌ಗೆ ಸೇರಿಸಲಾಗದೆ.

ದೇಶೀಯ ಟೂರ್ನಿಯಲ್ಲಿ ಅಬ್ಬರ

ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುತ್ತಾರೆ. ಆದರೆ ಈ ಹರಾಜಿಗೆ ಮಣಿಶಂಕರ್ ಮುರಾಸಿಂಗ್ ತಮ್ಮ ಹೆಸರು ನಮೂದಿಸಿರಲಿಲ್ಲ. ಆದರೂ ಇವರ ಹೆಸರು ಹೇಗೆ ಸೇರ್ಪಡೆಗೊಂಡಿದೆ ಎಂಬುದು ತಿಳಿಯದು ಎಂದು ತಿಳಿಸಿದ್ದಾರೆ. ಇನ್ನು ತನ್ನ ನಿಯಂತ್ರಣದಲ್ಲಿ ಇರುವ ವಿಷಯಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರು 2019-20ರ ಸೀಸನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಇದೇ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದರಿಂದ ಇವರಿಗೆ ಮುಂದಿನ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಆದರೆ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಇವರು ಮಾಲೀಕರ ಚಿತ್ತವನ್ನು ಕದಿಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಬಿಗ್‌ ಹಿಟ್ ಬಾರಿಸುವ ಕ್ಷಮತೆ ಹೊಂದಿದ್ದು, ನಿಖರವಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಬಲ್ಲರು.

ಮಣಿಶಂಕರ್ ಮುರಾಸಿಂಗ್ ಅವರನ್ನು ಭಾರತದ ಭರವಸೆಯ ಆಲ್‌ರೌಂಡರ್ ಎಂದು ಗುರುತಿಸಲಾಗಿದೆ. ಇವರನ್ನು ಬೆನ್‌ ಸ್ಟೋಕ್ಸ್‌ ಅವರಿಗೂ ಸಹ ಹೋಲಿಸಲಾಗುತ್ತಿದೆ. ಬಹು ವರ್ಷಗಳಿಂದ ಐಪಿಎಲ್‌ಗೆ ಪದಾರ್ಪಣೆ ಮಾಡುವ ಕನಸನ್ನು ಹೊಂದಿದ್ದಾರೆ. ದೇಶೀಯ ಪ್ರತಿಭೆಗಳನ್ನು ಲೀಗ್ ಉತ್ತೇಜಿಸುತ್ತಲೇ ಬಂದಿದೆ. ಇದೇ ಸಾಲಿಗೆ ಮಣಿಶಂಕರ್ ಮುರಾಸಿಂಗ್ ಹೆಸರು ಸೇರಿಕೊಳ್ಳುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

Story first published: Thursday, December 11, 2025, 14:33 [IST]
Other articles published on Dec 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+