ಕನ್ನಡಿಗ ಮನೀಷ್ ಪಾಂಡೆ ಹಿಡಿದ ಕ್ಯಾಚ್‌ಗೆ ಅಭಿಮಾನಿಗಳು ಸ್ಟನ್
ರಾಯ್‌ಪುರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಲಯಕ್ಕೆ ಮರಳಿದರು. ಇದೇ ಪಂದ್ಯದಲ್ಲಿ ಕೆಕೆಆರ್ ತಂಡದ ಪರ ಸ್ಟಾರ್ ಆಟಗಾರ ಮನೀಷ್ ಪಾಂಡೆ ಅದ್ಭುತ ಕ್ಯಾಚ್ ಪಡೆದು ಸಂಚಲನ ಮೂಡಿಸಿದರು.
ಮೊದಲಿನಿಂದಲೂ ಕರ್ನಾಟಕದ ಸ್ಟಾರ್ ಆಟಗಾರ ಮನೀಷ್ ಪಾಂಡೆ ತಮ್ಮ ಫೀಲ್ಡಿಂಗ್‌ಗೆ ಹೆಸರುವಾಸಿ. ಇವರು ತಮ್ಮ ಡೈವಿಂಗ್ ಕ್ಯಾಚ್‌ಗಳ ಮೂಲಕ ಹೆಸರು ಮಾಡಿದ ಆಟಗಾರ. ಬುಧವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ಒಂದು ಕ್ಯಾಚ್ ಪಡೆದು ಅಬ್ಬರಿಸಿದ್ದಾರೆ.

ಸಾಮಾನ್ಯಾವಾಗಿ ಬೌಂಡರಿ ಲೈನ್‌ನಲ್ಲಿ ಫೀಲ್ಡ್ ಮಾಡುವ ಮನೀಷ್ ಪಾಂಡೆ, ಬುಧವಾರ ಪಾಯಿಂಟ್‌ನಲ್ಲಿ ಕಾಣಿಸಿಕೊಂಡರು. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಔಟ್ ಆಗುತ್ತಿದ್ದಂತೆ, ಭರವಸೆಯ ಬ್ಯಾಟರ್ ಟೀಮ್ ಡೇವಿಡ್ ಮೈದಾನಕ್ಕೆ ಇಳಿದರು. ಇವರು ಮೈದಾನಕ್ಕೆ ಇಳಿದಾಗ ಆರ್‌ಸಿಬಿ ಗೆಲುವಿಗೆ 36 ರನ್ ಅವಶ್ಯಕತೆ ಇತ್ತು. ಬರುತ್ತಲೇ ತಮ್ಮ ನಿಜ ರೂಪ ತೋರಿಸುವ ಬಯಕೆ ಟಿಮ್ ಡೇವಿಡ್ ಅವರದ್ದಾಗಿತು. ಆದರೆ ಇವರ ಬಯಕೆ ಮೊಳಕೆಯೊಡೆಯಲು ಮನೀಷ್ ಪಾಂಡೆ ಬಿಡಲೇ ಇಲ್ಲ.
ಅದ್ಬುತ ಕ್ಯಾಚ್
ಇನಿಂಗ್ಸ್‌ನ 18ನೇ ಓವರ್ ಮಾಡಲು ಕಾರ್ತಿಕ್ ತ್ಯಾಗಿ ಮುಂದಾದರು. ಈ ಓವರ್‌ನ ಐದನೇ ಎಸೆತವನ್ನು ಎದುರಿಸಲು ಟಿಮ್ ಡೇವಿಡ್ ಮುಂದಾದರು. ಈ ವೇಳೆ ಕಾರ್ತಿಕ್ ತ್ಯಾಗಿ ಶಾರ್ಟ್ ಆಫ್ ಲೆಂತ್ ಎಸೆತವನ್ನು ಎಸೆದರು. ಈ ಎಸೆತವನ್ನು ಡೇವಿಡ್ ಕಟ್ ಮಾಡಿ ಬೌಂಡರಿ ಬಾರಿಸಲು ಮುಂದಾದರು. ಆದರೆ ಮನೀಷ್ ಪಾಂಡೆ ತಮ್ಮ ಎಡಭಾಗಕ್ಕೆ ಡೈವ್ ಮಾಡಿ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ನೋಡಿದ ಅಭಿಮಾನಿಗಳು ನಿಜಕ್ಕೂ ಫುಲ್ ಖುಷ್ ಆದರು.
ಮನೀಷ್ ಪಾಂಡೆ ತಮ್ಮ ಎಡಭಾಗಕ್ಕೆ ಡೈವ್ ಮಾಡಿ ಹಿಡಿದ ಕ್ಯಾಚ್‌ಗೆ ಎಲ್ಲರೂ ಸ್ಟನ್ ಆದರು. ಮನೀಷ್ ತಮ್ಮ ಎಡಕ್ಕೆ ಜಿಗಿದು ಅಮೋಘ ಕ್ಯಾಚ್ ಪಡೆದರು. ಕ್ಯಾಚ್ ಪಡೆದ ಬಳಿಕ ನೀಡಿದ ರಿಯಕ್ಷನ್ ಸಹ ವೈರಲ್ ಆಗಿದೆ.
ಪಂದ್ಯದ ಫಲಿತಾಂಶ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 192 ರನ್ ಸೇರಿಸಿತು. ಈ ವೇಳೆ ಭರವಸೆಯ ಬ್ಯಾಟರ್ ಅಂಗ್‌ಕ್ರಿಷ್ ರಘುವಂಶಿ (71 ರನ್, 7 ಬೌಂಡರಿ, 3 ಸಿಕ್ಸರ್), ರಿಂಕು ಸಿಂಗ್ (ಅಜೇಯ 49 ರನ್, 3 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತವನ್ನು ಹಿಗ್ಗಿಸಿದರು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಸೇರಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications