ಗಂಭೀರ್ ಪ್ರೆಸ್ ಮೀಟ್ ಮಾಡಿದ್ದೇ ತಪ್ಪು: ಸಂಜಯ್ ಮಾಂಜ್ರೇಕರ್ ಕಿಡಿ
ಟೀಮ್ ಇಂಡಿಯಾ ಯಾವುದೇ ಒಂದು ಪ್ರವಾಸ ಕೈ ಗೊಳ್ಳುವ ಮುನ್ನ ತಂಡದ ಕೋಚ್ ಪತ್ರಿಕಾಗೋಷ್ಠಿ ನಡೆಸುವುದು ಕಾಮನ್. ಹಾಗೇಯ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಪತ್ರಕರ್ತರ ಬೌನ್ಸ್‌ರಗೆ ಉತ್ತರ ನೀಡಿದರು. ಆದರೆ ಇವರು ಮಾಧ್ಯಮದ ಮುಂದೆ ಬಂದಿದ್ದು ಮಾತ್ರ ಟೀಮ್ ಇಂಡಿಯಾದ ಮಾಜಿ ಆಟಗಾರನಿಗೆ ನುಂಗಲರಾದ ತುತ್ತಾಗಿದೆ. ಪರಿಣಾಮ ಮಾಜಿ ಪ್ಲೇಯರ್ ನೀಡಿದ ಹೇಳಿಕೆ ಈಗ ವಿವಾದವಾಗಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು. ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಕೋಚ್ ಸಮರ್ಥವಾಗಿ ಉತ್ತರ ನೀಡಿದರು. ಆದರೆ ಇವರು ಪ್ರೇಸ್ ಮೀಟ್ ಮಾಡಿದ್ದಕ್ಕೆ ಸಂಜಯ್ ಮಂಜ್ರೇಕರ್ ಕೆಂಡ ಕಾರಿದ್ದಾರೆ.

ಮಂಜ್ರೇಕರ್ ಹೇಳಿದ್ದೇನು?
ಸಂಜಯ್ ಮಂಜ್ರೇಕರ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿ. ಇವರು ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ವಿವಾದಗಳಿಂದ ಸುತ್ತುವರೆದಿರುತ್ತಾರೆ. ಈಗ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಗೌತಮ್ ಗಂಭೀರ್ ಹೇಗೆ ಪತ್ರಿಕಾಗೋಷ್ಠಿ ನಡೆಸಿದರು ಎಂದು ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಂಜಯ್ ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ. ಈಗ ತಾನೇ ಗೌತಮ್ ಗಂಭೀರ್ ಅವರ ಪತ್ರಿಕಾಗೋಷ್ಠಿಯನ್ನು ನೋಡಿದೆ. ಈ ಪತ್ರಿಕಾಗೋಷ್ಠಿಗೆ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಕಳುಹಿಸಿದ್ದು ಉತ್ತಮ ನಿರ್ಣಯವಲ್ಲ. ಅವರು ಪ್ರೇಸ್ ಮೀಟ್ ಎದುರಿಸುವುದು ಸೂಕ್ತವಲ್ಲ. ಇವರ ಬದಲಿಗೆ ಬಿಸಿಸಿಐ ಆಯ್ಕೆದಾರ ಅಜಿತ್ ಅಗರ್ಕರ್, ನಾಯಕ ರೋಹಿತ್ ಶರ್ಮಾ ಬರಬೇಕಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಲರ್ ಟ್ರೋಫಿಗೆ ಭಾರತದ ಮೊದಲ ಬ್ಯಾಚ್ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದೆ. ಇನ್ನು ಎರಡನೇ ಬ್ಯಾಚ್‌ನಲ್ಲಿ ಸ್ಟಾರ್ ಆಟಗಾರರು ಪ್ರವಾಸ ಬೆಳೆಸಲಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾಗವಹಿಸುವುದು ಅನುಮಾನವಾಗಿದೆ. ಇವರು ವೈಯಕ್ತಿಕ ಕಾರಣಗಳನ್ನು ನೀಡಿ ಮೊದಲ ಪಂದ್ಯದಿಂದ ಹಿಂದೆ ಸರಿಯುತ್ತಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಉಪನಯಾಕ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಅಭಿಮನ್ಯು ಈಶ್ವರನ್ ಹಾಗೂ ಕೆಎಲ್ ರಾಹುಲ್ ಈ ರೇಸ್‌ನಲ್ಲಿದ್ದಾರೆ.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನವನ್ನು ನೀಡಿದ್ದು, ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದೆ. ಈಗಾಗಲೇ ಟೀಮ್ ಇಂಡಿಯಾ ಈ ಹಿಂದಿನ ಎರಡೂ ಪ್ರವಾಸದಲ್ಲೂ ಬಾರ್ಡರ್ ಗವಾಸ್ಕರ್ ಸರಣಿಯನ್ನು ಗೆದ್ದು ಬೀಗಿತ್ತು. ಟೀಮ್ ಇಂಡಿಯಾ ಮತ್ತೊಂದು ಸರಣಿ ಗೆಲುವಿನ ಕನಸಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ರೋಹಿತ್ ಪಡೆ ಬೆಳೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications