Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ಗೆ ಭಾರತದ 4, 5 ಕ್ರಮಾಂಕದ ಬ್ಯಾಟ್ಸ್ಮನ್‌ ಆರಿಸಿದ ಮಂಜ್ರೇಕರ್

Manjrekar names his number 4 and 5 batsman in Virat Kohli’s World Cup side

ನವದೆಹಲಿ, ಮಾರ್ಚ್ 19: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರಿಗೆ ಭಾರತದ ಮಧ್ಯಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಮಾಧಾನವಿಲ್ಲ. ಆದರೂ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಸೂಕ್ತವೆನಿಸುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್‌ಗಳನ್ನು ಮಂಜ್ರೇಕರ್ ಆರಿಸಿದ್ದಾರೆ.

ಮಧ್ಯಮ ಕ್ರಮಾಂಕದ ಅವಕಾಶವನ್ನು ಅನೇಕ ಬ್ಯಾಟ್ಸ್ಮನ್‌ಗಳಿಗೆ ನೀಡಿದ್ದರೂ ಅವರಲ್ಲಿ ಯಾರೂ ಕೂಡ 4, 5ನೇ ಕ್ರಮಾಂಕಕ್ಕೆ ಸೂಕ್ತವೆನಿಸುವಂತೆ ಕಂಡಿಲ್ಲ. ಭಾರತದ ತಂಡದ ಸದ್ಯದ ಮಧ್ಯಮ ಕ್ರಮಾಂಕ ಅಸ್ಥಿರವಾಗಿದೆ. ಹೀಗಾಗಿ 4 ಮತ್ತು 5ನೇ ಕ್ರಮಾಂಕಕ್ಕೆ ಮಂಜ್ರೇಕರ್ ಇಬ್ಬರನ್ನು ಸೂಚಿಸಿದ್ದಾರೆ.

'4ನೇ ಮತ್ತು 5ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ನನ್ನ ಆಯ್ಕೆಯೆಂದರೆ ಅದು ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್. ಆದರೆ ಇದೂ ಕೂಡ ನಾನು ಸಣ್ಣ ಅಸಮಾಧಾನದಿಂದಲೇ ಸೂಚಿಸುತ್ತಿರುವ ಎರಡು ಹೆಸರುಗಳು' ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ಕಾಲಂನಲ್ಲಿ ಮಂಜ್ರೇಕರ್ ಬರೆದುಕೊಂಡಿದ್ದಾರೆ.

ಕೊಹ್ಲಿಯನ್ನು ಹೊರತುಪಡಿಸಿದರೆ ಇನ್ನು ಯಾವುದೇ ಬ್ಯಾಟ್ಸ್ಮನ್‌ಗಳು ಬ್ಯಾಟಿಂಗ್‌ ವೇಳೆ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಲ್ಲ, ತಂಡದ ಜವಾಬ್ದಾರಿ ಹೊತ್ತುಕೊಳ್ಳಲ್ಲ. ರೋಚಕ ಪಂದ್ಯಗಳಲ್ಲಿ ಭಾರತಕ್ಕೆ ಇದೇ ಸಮಸ್ಯೆಯಾಗಲಿದೆ' ಎಂದೂ ಮಂಜ್ರೇಕರ್ ಎಚ್ಚರಿಸಿದ್ದಾರೆ.

Story first published: Tuesday, March 19, 2019, 11:34 [IST]
Other articles published on Mar 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+