ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ಸೇರಿಸಿಕೊಳ್ಳಿ: ಬಿಸಿಸಿಐ ಕೋರಿದ ಮಂಜ್ರೇಕರ್

ಮುಂಬೈ, ಜುಲೈ 31: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆದು ಹಾಕಲಾಗಿದ್ದ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ತನ್ನನ್ನು ಮತ್ತೆ ಕಾಮೆಂಟರಿ ಪ್ಯಾನೆಲ್‌ಗೆ ಸೇರಿಸಿಕೊಳ್ಳುವಂತೆ ಬಿಸಿಸಿಐಯನ್ನು ಕೋರಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಪ್ರವಾಸ ಬಂದಿತ್ತು. ಈ ಸರಣಿ ಕೋವಿಡ್-19ನಿಂದಾಗಿ ರದ್ದಾಯಿತು. ಈ ಸರಣಿ ವೇಳೆಯೇ ಬಿಸಿಸಿಯು ಸಂಜಯ್ ಮಂಜ್ರೇಕರ್ ಅವರನ್ನು ಅದರ ಕಾಮೆಂಟರಿ ಪ್ಯಾನೆಲ್‌ನಿಂದ ಕಿತ್ತು ಹಾಕಿತ್ತು. ಈಗ ಮಂಜ್ರೇಕರ್ ತನಗೆ ಐಪಿಎಲ್‌ನಲ್ಲಿ ಕಾಮೆಂಟರಿ ಮಾಡಲು ಅವಕಾಶ ನೀಡಿ ಎಂದು ಬಿಸಿಸಿಐಯನ್ನು ವಿನಂತಿಸಿಕೊಂಡಿದ್ದಾರೆ.
ಬಿಸಿಸಿಐಗೆ ಕಳುಹಿಸಿರುವ ಇ ಮೇಲ್‌ನಲ್ಲಿ ಮಂಜ್ರೇಕರ್ ತಾನು ಬಿಸಿಸಿಐ ಮಾರ್ಗಸೂಚಿಗಳನ್ನು ಇನ್ಮುಂದೆ ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಕಾಮೆಂಟರಿ ವೇಳೆ ಮಂಜ್ರೇಕರ್ ಬೇಜಾವಾಬ್ದಾರಿ ತೋರುತ್ತಾರೆ, ಎಲ್ಲೆ ಮೀರಿ ವರ್ತಿಸುತ್ತಾರೆ ಎಂದು ಬಿಸಿಸಿಐ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆಯುವಾಗ ಹೇಳಿತ್ತು.
ಮುಂಬೈ ತಂಡದ ಮಾಜಿ ನಾಯಕ ಮಂಜ್ರೇಕರ್ ಅವರದ್ದು ನೇರ ನುಡಿ. ಅವರು ಹಿಂದೆ ಮುಂದೆ ಯೋಚಿಸದೆ ಮನಸಿಗನ್ನಿಸಿದ್ದು ಮಾತನಾಡುತ್ತಾರೆ. ಹೀಗಾಗಿ ಅವರು ಬೇಗನೆ ನಿಷ್ಟುರಕ್ಕೆ ಒಳಗಾಗುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಕೆಟ್ಟ ಗುಣಗಳಿಲ್ಲ. ದುರುದ್ದೇಶಗಳಿಲ್ಲ ಎಂದು ಮಂಜ್ರೇಕರ್ ಮಾಜಿ ಕೋಚ್ ಹೇಳಿಕೆ ನೀಡಿದ್ದರು. ಬಿಸಿಸಿಐಯು ಮಂಜ್ರೇಕರ್ ವಿನಂತಿಯನ್ನು ಪರಿಗಣಿಸುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications