ಭಾರತ vs ಆಸೀಸ್: ವಿಜಯ್ ಶಂಕರ್, ರಿಷಬ್ ಪಂತ್ ಮೇಲೆ ಮಂಜ್ರೇಕರ್ ಗರಂ

ನವದೆಹಲಿ, ಮಾರ್ಚ್ 14: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ವಿಜಯ್ ಶಂಕರ್ ಮತ್ತು ರಿಷಬ್ ಪಂತ್ ಮೇಲೆ ಕಿಡಿ ಕಾರಿದ್ದಾರೆ. ವಿಶ್ವಕಪ್ ಅವಕಾಶವನ್ನು ಕೈ ಚೆಲ್ಲುವ ಸುಳಿವು ನೀಡುತ್ತಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಸೋತಿದ್ದಕ್ಕೆ ಪ್ರತಿಕ್ರಿಯಿಸಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಇದರಲ್ಲಿ ವಿಶಾಖಪಟ್ಟಣ ಮತ್ತು ನಾಗ್ಪುರದಲ್ಲಿ ನಡೆದಿದ್ದ ಪಂದ್ಯಗಳನ್ನು ಗೆದ್ದುಕೊಂಡಿತು. ಆದರೆ ರಾಂಚಿ, ಹೊಹಾಲಿ ಮತ್ತು ಡೆಲ್ಲಿ ಪಂದ್ಯಗಳನ್ನು ಸೋತು ಸರಣಿಯನ್ನು 2-3ರಿಂದ ಕಳೆದುಕೊಂಡಿತು.
ಟೀಮ್ ಇಂಡಿಯ ಏಕದಿನ ಸರಣಿಗೂ ಮುನ್ನ ಎರಡು ಪಂದ್ಯಗಳ ಟಿ20 ಸರಣಿಯನ್ನೂ ಆಸೀಸ್‌ಗೆ ಒಪ್ಪಿಸಿತ್ತು. ಒಟ್ಟಿನಲ್ಲಿ ಭಾರತ ತಂಡದ ಸದ್ಯದ ಪರಿಸ್ಥಿತಿ ಗಮನಿಸಿದರೆ ವಿಶ್ವಕಪ್ ಟ್ರೋಫಿ ದುಬಾರಿಯಾಗುವುದರಲ್ಲಿದೆ. ಇದೇ ಆತಂಕವನ್ನು ಮಂಜ್ರೇಕರ್ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಹೀರೋ ಆಗಿದ್ದ ವಿಜಯ್
ಐದೂ ಪಂದ್ಯಗಳಲ್ಲಿ ವಿಜಯ್ ಆಡುವ 11 ತಂಡಲ್ಲಿ ಇದ್ದರಾದರೂ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಅವಕಾಶ ಲಭಿಸಿರಲಿಲ್ಲ. ಆದರೆ ಬ್ಯಾಟಿಂಗ್‌ಗೆ ಅವಕಾಶ ಸಿಕ್ಕಿದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿಜಯ್ ಆಕರ್ಷಕ 46 ರನ್ ಬಾರಿಸಿದ್ದರಲ್ಲದೆ, ಆಸೀಸ್ ಇನ್ನಿಂಗ್ಸ್ ವೇಳೆ ಅಂತಿಮ ಓವರ್‌ನಲ್ಲಿ 2 ವಿಕೆಟ್ ಕೆಡವಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದ ಹೀರೋ ಅನ್ನಿಸಿದ್ದರು.

ಹೀರೋದಿಂದ ಜೀರೋ ಕಡೆಗೆ
ಮೊದಲ ಪಂದ್ಯದ ಬಳಿಕ ಅನಂತರದ ಪಂದ್ಯಗಳಲ್ಲಿ ವಿಜಯ್ ಗಳಿಸಿದ್ದು ಕ್ರಮವಾಗಿ 32, 26, 16 ರನ್ ಮಾತ್ರ. ಅದರಲ್ಲೂ ಸರಣಿ ಗೆಲುವಿಗೆ ನಿರ್ಣಾಯಕ ಅನ್ನಿಸಿದ್ದ ಅಂತಿಮ ಪಂದ್ಯದಲ್ಲಿ ವಿಜಯ್ ಶಂಕರ್ ಮತ್ತು ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಇಬ್ಬರೂ ಕೂಡ ತಲಾ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ನಿಜಕ್ಕೂ ನಿರಾಶೆಯಾಗಿದೆ
ಶಂಕರ್, ಪಂತ್ ಕಳಪೆ ಬ್ಯಾಟಿಂಗ್ ಗಮನಿಸಿ ಮಂಜ್ರೇಕರ್ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 'ಶಂಕರ್ ಮತ್ತು ಪಂತ್ ಬಗ್ಗೆ ಇವತ್ತು ನಿಜಕ್ಕೂನಿರಾಶೆಯಾಗಿದೆ. ಅವರ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಎಂಥಾ ಒಳ್ಳೆಯ ಅವಕಾಶವಿತ್ತು. ದೊಡ್ಡ ಹೊಡೆತಗಳಿಗೆ ಬದಲು ವಿರಾಟ್ ಕೊಹ್ಲಿಯಂತೆ ಎಚ್ಚರಿಕೆಯ ಆಟದ ಮೂಲಕ ಸ್ಟ್ರೈಕ್ ರೇಟ್ ಹೆಚ್ಚಿಸಿಕೊಳ್ಳುವುದನ್ನು ಇಬ್ಬರೂ ಕಲಿತುಕೊಳ್ಳಬೇಕಿದೆ' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವಕಪ್ ಬಗ್ಗೆ ಎಚ್ಚರಿಕೆ
ವಿರಾಟ್ ಕೊಹ್ಲಿ ಬಳಗ ಮಧ್ಯಮ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕು. ತಂಡದ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ಚೇತರಿಸಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಮಧ್ಯಮ ಕ್ರಮಾಂಕ ಇದೇ ರೀತಿ ಪರದಾಡುತ್ತಿದ್ದರೆ 2019ರ ವಿಶ್ವಕಪ್ ಅವಕಾಶ ಕೈತಪ್ಪಲಿದೆ ಎಂದು ಮಂಜ್ರೇಕರ್ ಟ್ವಿಟರ್ ಸಾಲಿನ ಮೂಲಕ ಎಚ್ಚರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications