ಮನೋಜ್ ತಿವಾರಿ-ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ಜೋರು!

ನವದೆಹಲಿ: ಬೆಂಗಾಲ್ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಮತ್ತು ಭಾರತದ ಮಾಜಿ ಸ್ಪಿನ್ನರ್ ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಪುಸ್ತಕ ಓದುವ ಚಾಲೆಂಜ್, ಬಕೆಟ್ ತಣ್ಣೀರಿನ ಚಾಲೆಂಜ್, ಹಳೆ ಫೋಟೋ ಹಾಕುವ ಚಾಲೆಂಜ್, ಕೈ ಬರಹ ಪೋಸ್ಟ್ ಚಾಲೆಂಜ್, ಬಾಟಲ್ ಮುಚ್ಚಳ ತೆಗೆಯೋ ಚಾಲೆಂಜ್, ಕವಿತೆ ಗೀಚುವ ಚಾಲೆಂಜ್ ಇಂಥ ಅನೇಕ ಚಾಲೆಂಜ್‌ಗಳು ಆಗೀಗ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಕ್ರೀಡಾಪಟುಗಳು ಒಬ್ಬರಿಗೊಬ್ಬರು ವರ್ಕೌಟ್ ಚಾಲೆಂಜ್ ಎಸೆಯೋದು ಟ್ರೆಂಡ್ ಆಗಿದೆ.
ಭಾರತದ ನಾಯಕ ವಿರಾಟ್ ಕೊಹ್ಲಿಯೂ ಸೇರಿದಂತೆ ಅನೇಕರು ವರ್ಕೌಟ್ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು. ರಮೇಶ್ ಪೊವಾರ್ ಕೂಡ ಟ್ವಿಟರ್‌ನಲ್ಲಿ ಪುಶ್‌ಅಪ್ಸ್ ಚಾಲೆಂಜ್ ಸ್ವೀಕರಿಸಿ ತಾನು ಪುಶ್‌ಅಪ್ ಮಾಡಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇಂಥ ಚಾಲೆಂಜ್‌ನ ವಿಚಾರಕ್ಕಾಗಿಯೇ ಬೆಂಗಾಲ್ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಮತ್ತು ಭಾರತದ ಮಾಜಿ ಸ್ಪಿನ್ನರ್-ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ನಡೆದಿದೆ.
ರಮೇಶ್ ಪೊವಾರ್ ಚಾಲೆಂಜ್
ಕಳೆದ ತಿಂಗಳು ಅಂದರೆ ಜೂನ್ 28ರಂದು ರಮೇಶ್ ಪೊವಾರ್ ಟ್ವಿಟರ್‌ನಲ್ಲಿ ಪುಶ್ ಅಪ್ಸ್ ಚಾಲೆಂಜ್‌ನ ವೀಡಿಯೋ ಹಾಕಿಕೊಂಡಿದ್ದರು. ಇಂಥ ಪುಶ್‌ಅಪ್ಸ್ ಚಾಲೆಂಜ್‌ನಿಂದ ಮಾನಸಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಬಹುದು ಎಂದು ಬರೆದುಕೊಂಡಿದ್ದರು.

25 ಪುಶ್‌ಅಪ್ಸ್ ಚಾಲೆಂಜ್
ವೀಡಿಯೋ ಹಂಚಿಕೊಂಡಿದ್ದ ಪೊವಾರ್, 'ನಿಮ್ಮ ಮಾತಿಗೆ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ 25 ಪುಶ್‌ಅಪ್ಸ್‌ಗಳ ಚಾಲೆಂಜ್‌ಗೆ ನನ್ನನ್ನು ಹೆಸರಿಸಿದ್ದಕ್ಕಾಗಿ ಓಜಾಸ್ ಮೆಹ್ತಾಗೆ ಧನ್ಯವಾದಗಳು. ನಮಗೆ ನಮ್ಮದೇ ಹೋರಾಟಗಳಿವೆ. ಅದರಲ್ಲಿ ಕೆಲವಲ್ಲಿ ಗೆಲ್ಲುತ್ತೇವೆ. ಕೆಲವಲ್ಲಿ ಸೋಲುತ್ತೇವೆ. ಆದರೆ ಎಲ್ಲಾ ಸಂದರ್ಭಗಳನ್ನು & ಪಯಣವನ್ನೂ ನಾವು ಎಂಜಾಯ್ ಮಾಡಬೇಕು,' ಎಂದು ಬರೆದಿದ್ದರು.

ಪೊವಾರ್ ಟ್ವೀಟ್‌ಗೆ ತಿವಾರಿ ತಮಾಷೆ
ಪೊವಾರ್ ಜೂನ್ 28ರಂದು ಮಾಡಿದ್ದ ಟ್ವೀಟ್‌ಗೆ ಮನೋಜ್ ತಿವಾರಿ ಜುಲೈ 14ರಂದು ಟಾಂಗ್ ಕೊಟ್ಟಿದ್ದಾರೆ. 'ಪುಶ್‌ಅಪ್ಸ್ ಚಾಲೆಂಜ್‌ಗಳು ಅಥವಾ ಇಂಥ ಮೂರ್ಖತನದ ಚಾಲೆಂಜ್‌ಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತವೆ ಅನ್ನೋದನ್ನು ನನಗೆ ಯಾರಾದರೂ ತಿಳಿಸಿಕೊಡಿ,' ಎಂದು ತಿವಾರಿ ಗೇಲಿಯಾಗಿ ಸಾಲು ಬರೆದುಕೊಂಡಿದ್ದರು.
ತಿವಾರಿಗೆ ಪವಾರ್ ತಿರುಗೇಟು
ಮನೋಜ್ ರಿವಾರಿ ಟ್ವೀಟ್‌ಗೆ ರಮೇಶ್ ಪವಾರ್ ಪ್ರತ್ಯುತ್ತರ ನೀಡಿದ್ದಾರೆ. 'ಪುಶ್‌ಅಪ್ಸ್‌ನಂತ ಚಾಲೆಂಜ್‌ಗಳಿಂದ 'ನೀನು ಏಕಾಂಗಿಯಲ್ಲ' ಅನ್ನೋ ಪದ ಪಸರಿಸಲ್ಪಡುತ್ತದೆ. ಇದು ತನ್ನಷ್ಟಕೇ ತಾನಿದ್ದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದರಿಂದ ಹೊರಗೆ ಬರೋಕೆ ನೆರವು ನೀಡುತ್ತದೆ,' ಎಂದು ಪವಾರ್ ವಿವರಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications