ಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್‌ಗೆ 170 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ
ಕೋಲ್ಕತ್ತಾ: ಭರವಸೆಯ ಆಲ್‌ರೌಂಡರ್ ಮಾರ್ಕೊ ಯಾನ್ಸನ್ ಅವರು ಬಾರಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 170 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಅನುಭವಿ ಕ್ವಿಂಟನ್ ಡಿಕಾಕ್ ರನ್ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ 10 ರನ್‌ಗಳಿಗೆ ಆಟ ಮುಗಿಸಿದರು. ದಕ್ಷಿಣ ಆಫ್ರಿಕಾ 1.4 ಓವರ್‌ಗಳಲ್ಲಿ 12 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಕ್ವಿಂಟನ್ ಡಿಕಾಕ್ ಅವರು ಪೆವೆಲಿಯನ್ ಸೇರುತ್ತಿದ್ದಂತೆ ರಯಾನ್ ರಿಕಲ್ಟನ್ ಬಂದು ಹೋಗುವ ಸಂಪ್ರದಾಯ ಮುಗಿಸಿದರು. ನ್ಯೂಜಿಲೆಂಡ್ ತಂಡದ ಕೋಲ್ ಮೆಕ್‌ಕಾಂಚಿ ಎಸೆದ ಒಳ್ಳೆಯ ಎಸೆತವನ್ನು ಕಟ್ ಮಾಡಿ ಬೌಂಡರಿ ಬಾರಿಸಲು ಹೋಗಿ ರಿಕಲ್ಟನ್ ಶಾರ್ಟ್ ಥರ್ಡ್ ಮೈನ್‌ನಲ್ಲಿ ನಿಂತಿದ್ದ ಫಿನ್ ಅಲೆನ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಪರಿಣಾಮ ದಕ್ಷಿಣ ಆಫ್ರಿಕಾ ಪವರ್ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 48 ರನ್ ಸಿಡಿಸಿತ್ತು.

12 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಏಡನ್ ಮಾರ್ಕ್ರಾಮ್ ಹಾಗೂ ಡೆವಾಲ್ಡ್ ಬ್ರೆವಿಸ್ ಜೋಡಿ ಆಧಾರವಾಯಿತು. ಈ ಜೋಡಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 35 ಎಸೆತಗಳಲ್ಲಿ 43 ರನ್ ಸೇರಿಸಿತು. ಟೂರ್ನಿಯುದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮಾರ್ಕ್ರಾಮ್ ಕೇವಲ 18 ರನ್ ಬಾರಿಸಿ ಔಟ್ ಆದರು. ಇವರು ರಚಿನ್ ರವೀಂದ್ರ ತೋಡಿದ ಖೆಡ್ಡಾಗೆ ಬಲಿಯಾದರು. ಭರವಸೆಯ ಬ್ಯಾಟರ್ ಡೇವಿಡ್ ಮಿಲ್ಲರ್ (6) ರನ್ ಕಲೆ ಹಾಕುವಲ್ಲಿ ವಿಫಲರಾಗಿ ರವೀಂದ್ರ ಅವರಿಗೆ ವಿಕೆಟ್ ಒಪ್ಪಿಸಿದರು.
ಆರನೇ ವಿಕೆಟ್‌ಗೆ 72 ರನ್ ಜೊತೆಯಾಟ
77 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ತಂಡಕ್ಕೆ ಮಾರ್ಕೊ ಯಾನ್ಸನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಆಧಾರವಾಯಿತು. ಈ ಜೋಡಿ ಉತ್ತಮ ಜೊತೆಯಾಟದ ನೆರವಿನಿಂದಲೇ ದಕ್ಷಿಣ ಆಫ್ರಿಕಾ ಸ್ಪರ್ಧಾತ್ಮಕ ಮೊತ್ತವನ್ನು ಸೇರಿಸುವತ್ತ ಚಿತ್ತ ನೆಟ್ಟಿತು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ರನ್ ಕಲೆ ಹಾಕಿದ ಯಾನ್ಸನ್ ಹಾಗೂ ಸ್ಟಬ್ಸ್ ಜೋಡಿ 48 ಎಸೆತಗಳಲ್ಲಿ 72 ರನ್ ಸೇರಿಸಿತು. ಈ ವೇಳೆ ಟ್ರಿಸ್ಟನ್ ಸ್ಟಬ್ಸ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಬಾರಿಸಿ ಔಟ್ ಆದರು.
ಭರವಸೆಯ ಬ್ಯಾಟರ್ ಮಾರ್ಕೊ ಯಾನ್ಸನ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿದರು. ಇವರು 30 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 55 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಸೇರಿಸಿತು. ನ್ಯೂಜಿಲೆಂಡ್ ಪರ ಕೋಲ್ ಮೆಕ್‌ಕಾಂಚಿ, ಮ್ಯಾಟ್ ಹೆನ್ರಿ, ರಚಿನ್ ರವೀಂದ್ರ ತಲಾ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications