Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Retirement: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಆಸೀಸ್‌ಗೆ ಪೆಟ್ಟು: ಸ್ಟಾರ್ ಆಲ್‌ರೌಂಡರ್‌ ನಿವೃತ್ತಿ

ಚಾಂಪಿಯನ್ಸ್ ಟ್ರೋಫಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಟ್ರೋಫಿಯಲ್ಲಿ ಭಾಗವಹಿಸು ತಂಡಗಳು ಈಗಾಗಲೇ ತಮ್ಮ ತಮ್ಮ ತಂಡವನ್ನು ಪ್ರಕಟಿಸಿವೆ. ಏಳು ವರ್ಷಗಳ ಬಳಿಕ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್‌ ಒಬ್ಬರು ದಿಢೀರ್‌ ಕ್ರಿಕೆಟ್‌ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಿದ್ದರೆ ಆ ಪ್ಲೇಯರ್ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ತಮ್ಮ ಕ್ರಿಕೆಟ್‌ ಬದುಕಿಗೆ ಗುಡ್‌ ಬಾಯ್‌ ಹೇಳಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್ ಆಲ್‌ರೌಂಡರ್‌ ಹಠಾತನೆ ನಿವೃತ್ತಿ ಘೋಷಿಸಿರುವುದು ಆಸ್ಟ್ರೇಲಿಯಾ ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸ್ಟಾರ್‌ ಪ್ಲೇಯರ್‌ ನಿವೃತ್ತಿಯಿಂದಾಗ ಇವರಿಗೆ ಬದಲಿ ಆಟಗಾರನ ಆಯ್ಕೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮಾಡಲಿದೆ.ಮಾರ್ಕಸ್‌ ಸ್ಟೋಯಿನಿಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ನೋವು ತಂದೆದೆ.

Marcus Stoinis Announces Sudden Retirement Huge Setback for Australia Before Champions Trophy

ಸದ್ಯ ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸದಲ್ಲಿದೆ. ಈ ವೇಳೆ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಏಕದಿನ ಪಂದ್ಯಗಳು ನಡೆಯಲಿವೆ. ಚಾಂಪಿಯನ್ಸ್‌ ಟ್ರೋಫಿ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ. ಏತನ್ಮಧ್ಯೆ, ಮಾರ್ಕಸ್ ಸ್ಟೊಯಿನಿಸ್ ಇದ್ದಕ್ಕಿದ್ದಂತೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ 2023 ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದಾರೆ. ಇವರು ಚುಟುಕು ಕ್ರಿಕೆಟ್‌ ಆಡುವುದನ್ನು ಮುಂದುವರೆಸಲಿದ್ದಾರೆ ಎಂಬುದೇ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಅಲ್ಲದೆ ಲೀಗ್‌ನಲ್ಲಿ ಆಡುವುದನ್ನು ಮುನ್ನಡೆಸಬಹುದು.

35 ವರ್ಷದ ಸ್ಟೊಯಿನಿಸ್ ಇತ್ತೀಚೆಗೆ ಎಸ್‌ಎಟಿ20 ನಲ್ಲಿ ಭಾಗವಹಿಸಿ ಡರ್ಬನ್ ಸೂಪರ್‌ಜೈಂಟ್ಸ್‌ ಪರ ಆಡಿದ್ದರು. ಇದೇ ವೇಳೆ ಅವರು ಗಾಯದೊಂದಿಗೆ ಹೋರಾಡಿದ್ದರು. ಈ ಗಾಯದ ಸಮಸ್ಯೆಯಿಂದಾಗಿ ಅವರಿಗೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ತಮ್ಮ ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿರುವ ಸ್ಟೋಯ್ನಿಸ್, ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ ಆಡುವುದು ಅದ್ಭುತ ಅನುಭವ. ಮೈದಾನದಲ್ಲಿ ಕಳೆದ ಪ್ರತಿ ಕ್ಷಣ ಸ್ಮರಣೀಯ. ನಿವೃತ್ತಿ ನಿರ್ಧಾರ ಕೈಗೊಳ್ಳುವುದು ಸುಲಭದ ನಿರ್ಧಾರವಲ್ಲ ಎಂದು ಮಾರ್ಕಸ್ ಹೇಳಿದ್ದಾರೆ. ಆದರೆ ಏಕದಿನ ಪಂದ್ಯಗಳಿಂದ ದೂರ ಸರಿದು ನನ್ನ ವೃತ್ತಿಜೀವನದತ್ತ ಗಮನಹರಿಸಲು ಇದು ಸರಿಯಾದ ಸಮಯ ಎಂದು ತಿಳಿಸಿದ್ದಾರೆ.

ಸ್ಟೋಯ್ನಿಸ್ ಸಾಧನೆ

ಆಸ್ಟ್ರೇಲಿಯಾದ ಪರ ಮಾರ್ಕಸ್‌ ಸ್ಟೋಯಿನಿಸ್‌ 71 ಏಕದಿನ ಪಂದ್ಯಗಳನ್ನು ಆಡಿದ್ದು, 26.69 ಸರಾಸರಿಯಲ್ಲಿ 1495 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 6 ಅರ್ಧಶತಕ ಸಿಡಿಸಿದ್ದಾರೆ. ಇನ್ನು 48 ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ.

Story first published: Thursday, February 6, 2025, 12:15 [IST]
Other articles published on Feb 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+