ಡೆಲ್ಲಿಗೆ ಲಾಭ, ಆರ್‌ಸಿಬಿಗೆ ನಷ್ಟ ತಂದ ಈ ಆಲ್ ರೌಂಡರ್: ಲಾರಾ

ಕೋವಿಡ್ 19 ಕಾಲದಲ್ಲೂ ಆಟಗಾರರನ್ನು ಮೈದಾನಕ್ಕಿಳಿಸಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜಿಸಿ ಬಿಸಿಸಿಐ ಗೆದ್ದಿವೆ. ಹಲವು ಫ್ರಾಂಚೈಸಿಗಳು ಕಳೆದ ಬಾರಿ ಕೆಲವು ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಟಾಮ್ ಮೂಡಿ ಮಾತನಾಡಿ, ಡೆಲ್ಲಿ ತಂಡ ತಮ್ಮ ತಂಡದಲ್ಲಿದ್ದ ಟ್ರೆಂಟ್ ಬೌಲ್ಟ್ ಹೊರಗೆ ಕಳಿಸಿದ್ದು ಮುಂಬೈಗೆ ವರದಾನವಾಯಿತು ಎಂದಿದ್ದಾರೆ.
ಈಗ ಇದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಹೊರಗೆ ಕಳಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ಗೆ ಲಾಭವಾಗಿದೆ ಎಂದು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ.
ಐಪಿಎಲ್ 2020ರಲ್ಲಿ ಮಾರ್ಕಸ್ ಬ್ಯಾಟಿಂಗ್ ಬೌಲಿಂಗ್ ಫೀಲ್ಡಿಂಗ್ ಎಲ್ಲದರಲ್ಲೂ ಮಿಂಚುತ್ತಿದ್ದು, ಸಮರ್ಥ ಆಲ್ ರೌಂಡರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆರ್ ಸಿಬಿ ಈ ಬಾರಿ ಮಾರ್ಕಸ್ ರನ್ನು ತಮ್ಮ ತಂಡದಲ್ಲಿ ಹೊಂದಿದ್ದರೆ ಅಂತಿಮ ಹಂತದಲ್ಲಿ ಭಾರಿ ಲಾಭವಾಗುತ್ತಿತ್ತು ಎಂದು ಲಾರಾ ಹೇಳಿದ್ದಾರೆ.
ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುವ ಮಾಕ್ ಸ್ಟೋಯ್ನಿಸ್ ಅವರು ಓಪನರ್ ಆಗಿ ಕಣಕ್ಕಿಳಿಯುತ್ತಾರೆ. ಆದರೆ. ಐಪಿಎಲ್ ನಲ್ಲಿ ಈ ಅವಕಾಶ ಸಿಕ್ಕಿದ್ದು ಮಾತ್ರ ಕ್ವಾಲಿಫೈಯರ್ 2ರಲ್ಲಿ ಎಂಬುದು ವಿಶೇಷ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು ಇದರಿಂದ ಮಹತ್ವದ ಪಂದ್ಯದಲ್ಲಿ ಡೆಲ್ಲಿ 189ರನ್ ಗಳಿಸಲು ಸಾಧ್ಯವಾಯಿತು.
ಮಾರ್ಕಸ್ ರನ್ನು ಓಪನರ್ ಆಗಿ ಕಳಿಸುವ ಬಗ್ಗೆ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಜೊತೆ ಮಾತನಾಡಿದ್ದೆ.
ಮಾರ್ಕಸ್ ಓಪನರ್ ಆಗಿ ಕಣಕ್ಕಿಳಿಯುವ ಬಗ್ಗೆ ಗೊಂದಲವಿತ್ತು. ಅದರೆ, ಪೃಥ್ವಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಸ್ಟೋಯ್ನಿಸ್ ಅವರಿಗೆ ಅವಕಾಶ ನೀಡಲಾಯಿತು. ಮಾರ್ಕಸ್ ಉತ್ತಮವಾಗಿ ಆಡಿದರು ಎಂದು ಪಾಂಟಿಂಗ್ ಹೇಳಿದರು.
ಟಿ 20ಯಲ್ಲಿ ವಿಕೆಟ್ ಕೀಳುವುದರ ಜೊತೆಗೆ ರನ್ ನಿಯಂತ್ರಣವು ಮುಖ್ಯವಾಗುತ್ತದೆ. ಮಾರ್ಕಸ್ ಎರಡರಲ್ಲೂ ಸೈ ಎನಿಸಿಕೊಂಡು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆಲ್ ರೌಂಡರ್ ಆಟಗಾರರರಿಂದ ಡೆಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಲು ಸಾಧ್ಯವಾಗಿದೆ ಎಂದು ಲಾರಾ ಹೇಳಿದರು. ಐಪಿಎಲ್ 2020ರಲ್ಲಿ 16 ಪಂದ್ಯಗಳಿಂದ 149.15 ಸ್ಟೈಕ್ ರೇಟ್ ನಂತೆ 352ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications