For Quick Alerts
ALLOW NOTIFICATIONS  
For Daily Alerts
 

ಮಾರ್ಕಸ್ ಸ್ಟೋಯ್ನಿಸ್ ಹಿಂದಿಗಿಂತ 5 ಪಟ್ಟು ಉತ್ತಮಗೊಂಡಿದ್ದಾರೆ: ಪಾಂಟಿಂಗ್

Marcus Stoinis is playing five times better than a year ago says Ricky Ponting

ಸಿಡ್ನಿ: ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ವರ್ಷದ ಹಿಂದಿಗಿಂತ ಈಗ ಐದು ಪಟ್ಟು ಉತ್ತಮಗೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕತೆ ರಿಕಿ ಪಾಂಟಿಂಗ್ ಹೇಳಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಗೂ ಮುನ್ನ ಪಾಂಟಿಂಗ್ ಈ ಹೇಳಿಕೆ ನೀಡಿದ್ದಾರೆ.

ಬೌಲಿಂಗ್, ಬ್ಯಾಟಿಂಗ್ ಅಲ್ಲದೆ ಫಿನಿಷಿಂಗ್ ಜವಾಬ್ದಾರಿಯನ್ನೂ ಮಾರ್ಕಸ್ ಸ್ಟೋಯ್ನಿಸ್ ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸ್ಟೋಯ್ನಿಸ್ 352 ರನ್ ಮತ್ತು 13 ವಿಕೆಟ್ ಪಡೆದುಕೊಂಡಿದ್ದರು.

ನವೆಂಬರ್ 27ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಸರಣಿಗಾಗಿ ಆಸ್ಟ್ರೇಲಿಯಾದ ಏಕದಿನ ಮತ್ತು ಟಿ20ಐ ತಂಡದಲ್ಲಿ ಸ್ಟೋಯ್ನಿಸ್ ಹೆಸರಿಸಲ್ಪಟ್ಟಿದ್ದಾರೆ. ಸ್ಟೋಯ್ನಿಸ್ ಉತ್ತಮ ರೀತಿಯಲ್ಲಿ ಬದಲಾಗುತ್ತಿರುವುದನ್ನು ಐಪಿಎಲ್‌ ವೇಳೆ ಅಲೆಕ್ಸ್ ಕ್ಯಾರಿ ಅವರು ಪಾಂಟಿಂಗ್ ಗಮನಕ್ಕೆ ತಂದಿರುವುದಾಗಿ ಪಾಂಟಿಂಗ್ ಹೇಳಿದ್ದಾರೆ.

'ಇಂಗ್ಲೆಂಡ್‌ನಿಂದ ನೇರವಾಗಿ ಐಪಿಎಲ್‌ಗೆ ಬಂದಿದ್ದ ಮಾರ್ಕಸ್ ಸ್ಟೋಯ್ನಿಸ್ ಸುಧಾರಿಸುತ್ತಿದ್ದಾರೆ. ಆತ ಬದಲಾಗಿದ್ದನ್ನು ನಾನು ಗಮನಿಸುತ್ತಿದ್ದೇನೆ. ಅವರ ಕೆಲವು ನೆಟ್ ಅಭ್ಯಾಸಗಳನ್ನು ನೋಡಿದ ಮೇಲೆ ನಾನಿದನ್ನು ಹೇಳಬಲ್ಲೆ,' ಎಂದು ಕ್ರಿಕೆಟ್ ಡಾಟ್ ಕಾಮ್ ಟಾಟ್ ಎಯು ಜೊತೆ ಪಾಂಟಿಂಗ್ ಹೇಳಿಕೊಂಡಿದ್ದಾರೆ. ಐಪಿಎಲ್ ವೇಳೆ ರಿಕಿ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದರು.

Story first published: Monday, November 23, 2020, 18:07 [IST]
Other articles published on Nov 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+