ICC T20 Racking: ಮೊಹಮ್ಮದ್ ನಬಿ ಹಿಂದಿಕ್ಕಿ ನಂಬರ್-1 ಆಲ್‌ರೌಂಡರ್ ಆದ ಮಾರ್ಕಸ್ ಸ್ಟೊಯಿನಿಸ್!
ಜೂನ್ 19 ಬುಧವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಉತ್ತಮವಾಗಿ ಆಡಿದ್ದಾರೆ. ಇದರ ಪ್ರತಿಫಲ ಟಿ20 ಶ್ರೇಯಾಂಕದಲ್ಲಿ ಸ್ಟೊಯಿನಿಸ್ ಲಾಭ ಪಡೆದಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪುರುಷರ ಆಲ್ ರೌಂಡರ್ ಶ್ರೇಯಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ ಮೊದಲ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಆಗ್ರ ಸ್ಥಾನ ಪಡೆದುಕೊಂಡಿದ್ದ ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರು ನಂಬರ್-1 ಪಟ್ಟವನ್ನು ಕಳೆದುಕೊಂಡಿದ್ದಾರೆ.

ಟಿ20 ವಿಶ್ವಕಪ್ 2024ರ ಆಸ್ಟ್ರೇಲಿಯಾದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸ್ಟೊಯಿನಿಸ್ 29 ಎಸೆತಗಳಲ್ಲಿ 59 ರನ್ ಗಳಿಸಿದ್ದರು. ಇದಕ್ಕೂ ಮೊದಲು ನಮೀಬಿಯಾ ವಿರುದ್ಧ 9 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದರು. ಸ್ಟೊಯಿನಿಸ್ ಅವರ ಈ ಅತ್ಯುತ್ತಮ ಫಾರ್ಮ್‌ನಿಂದ ಟಿ20 ವಿಶ್ವಕಪ್‌ನ ಸೂಪರ್-8 ಗೆ ಆಸ್ಟ್ರೇಲಿಯಾವನ್ನು ಕೊಂಡೊಯ್ದಿದೆ.
ಸ್ಟೊಯಿನಿಸ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ 190.24 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ಗಳೊಂದಿಗೆ 78ರ ಸರಾಸರಿಯಲ್ಲಿ 156 ರನ್ ಗಳಿಸಿದ್ದಾರೆ. ಇದುವರೆಗೆ ಬೌಲಿಂಗ್‌ನಲ್ಲಿ ತಮ್ಮ ಹೆಸರಿನಲ್ಲಿ 6 ವಿಕೆಟ್ ಪಡೆದಿದ್ದಾರೆ.
ಶ್ರೀಲಂಕಾ ತಂಡದ ನಾಯಕ ವನಿಂದು ಹಸರಂಗ ಮತ್ತು ಬಾಂಗ್ಲಾದೇಶದ ಅನುಭವಿ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ನಬಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಬೌಲಿಂಗ್ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್‌ನ ಅಕೇಲ್ ಹೊಸೈನ್ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಆರು ಸ್ಥಾನಗಳನ್ನು ಮೇಲೆರಿ 2ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಇಂಗ್ಲೆಂಡ್‌ನ ಬುದ್ಧಿವಂತ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಇನ್ನೂ ನಂಬರ್ 1 ಸ್ಥಾನದಲ್ಲಿ ಉಳಿದಿದ್ದಾರೆ.
ಪುರುಷರ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ನಾಲ್ಕರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಹಾಗು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಐದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಹಾಗೂ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಎಂಟು ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ತಲುಪಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications