ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಭಾರತ; ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ
ಮ್ಯಾಂಚೆಸ್ಟರ್: ಭರವಸೆಯ ಬ್ಯಾಟರ್ ಮರಿಜಾನ್ನೆ ಕಪ್ಪ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಮಹಿಳಾ ಟಿ20 ವಿಶ್ವಕಪ್‌ನಲ್ಲಿ 6 ವಿಕೆಟ್‌ಗಳಿಂದ ಭಾರತ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿತು. ಟೀಮ್ ಇಂಡಿಯಾ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಜೋಡಿ 3 ಓವರ್‌ಗಳಲ್ಲಿ 30 ರನ್ ಸೇರಿಸಿತು. ಈ ಅವಧಿಯಲ್ಲಿ ಸ್ಮೃತಿ ಮಂಧಾನ 17 ರನ್ ಬಾರಿಸಿ ಔಟ್ ಆದರು. ಇನ್ನು ಇನ್ನೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ಮಧ್ಯಮ ಕ್ರಮಾಂಕದಲ್ಲಿ ಯಾಸ್ತಿಕಾ ಭಾಟಿಯಾ 15, ಜೆಮಿಮಾ ರೊಡ್ರಿಗಸ್ 12 ರನ್ ಸಿಡಿಸಿ ಔಟ್ ಆದರು. ಇವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ತಮ್ಮ ವೃತ್ತಿ ಜೀವನದ 200ನೇ ಟಿ20 ಪಂದ್ಯವನ್ನು ಆಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ 24, ಆಲ್‌ರೌಂಡರ್ ದೀಪ್ತಿ ಶರ್ಮಾ 29 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ರಿಚಾ ಘೋಷ್ 15 ರನ್ ಬಾರಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್ ಸೇರಿಸಿತು.
ಶ್ರೀ ಚರಣಿ ಕಮಾಲ್
159 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಆರಂಭದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ 25 ರನ್ ಬಾರಿಸಿದ್ದಾಗ 6ನೇ ಓವರ್ ಬೌಲ್ ಮಾಡಲು ಬಂದ ಶ್ರೀ ಚರಣಿ ಅಮೋಘ ದಾಳಿ ನಡೆಸಿದರು. ಇವರು ಈ ಓವರ್‌ನ ಎರಡನೇ ಎಸೆತದಲ್ಲಿ ಲಾರಾ ವೊಲ್ವಾರ್ಡ್ಟ್, ನಾಲ್ಕನೇ ಎಸೆತದಲ್ಲಿ ಅನ್ನೇರಿ ಡೆರ್ಕ್ಸೆನ್ ಅವರನ್ನು ಔಟ್ ಮಾಡಿದರು.

3ನೇ ವಿಕೆಟ್‌ಗೆ ತಜ್ಮಿನ್ ಬ್ರಿಟ್ಸ್ ಹಾಗೂ ಮರಿಜಾನ್ನೆ ಕಪ್ ಈ ಜೋಡಿ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡು ಬ್ಯಾಟ್ ಮಾಡಿದರು. ಈ ಜೋಡಿ 63 ಎಸೆತಗಳಲ್ಲಿ 97 ರನ್ ಸೇರಿಸಿತು. ಈ ಹಂತದಲ್ಲಿ ತಜ್ಮಿನ್ ಬ್ರಿಟ್ಸ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ನಾಡಿನ್ ಡಿ ಕ್ಲಾರ್ಕ್ 5 ರನ್ ಬಾರಿಸಿ ಔಟ್ ಆದರು.
ಮರಿಜಾನ್ನೆ ಕಪ್ಪ್ ಭರ್ಜರಿ ಬ್ಯಾಟಿಂಗ್
ಸ್ಟಾರ್ ಆಟಗಾರ್ತಿ ಮರಿಜಾನ್ನೆ ಕಪ್ಪ್ 7 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 81 ರನ್ ಸಿಡಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 161 ರನ್ ಸೇರಿಸಿ ಜಯ ಸಾಧಿಸಿತು.
ಕ್ಯಾಚ್ ಬಿಟ್ಟು ಪಂದ್ಯ ಕೈ ಚೆಲ್ಲಿದ ಭಾರತ
ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಭಾರತ ತಂಡದ ಫೀಲ್ಡರ್‌ಗಳಿಂದ ಪ್ರಮುಖವಾಗಿ ಮರಿಜಾನ್ನೆ ಕಪ್ಪ್ ಅವರ ಕ್ಯಾಚ್‌ಗಳನ್ನು ಕೈಚೆಲ್ಲಿ ನಿರಾಸೆ ಅನುಭಸಿದರು. ಇದೇ ಪಂದ್ಯದ ಗೆಲುವಿಗೆ ಪ್ರಮುಖ ಕಾರಣವಾಯಿತು. ಭಾರತದ ಫೀಲ್ಡರ್‌ಗಳು ಮರಿಜಾನ್ನೆ ಕಪ್ಪ್ ಅವರ ಸುಲಭದ ಕ್ಯಾಚ್‌ನ್ನು 12.2, 16.5 ಓವರ್‌ಗಳಲ್ಲಿ ಕೈ ಬಿಟ್ಟರು. ಇದು ದಕ್ಷಿಣ ಆಫ್ರಿಕಾಕ್ಕೆ ಚೇತರಿಸಿಕೊಳ್ಳಲು ದೊಡ್ಡ ಅವಕಾಶ ನೀಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications