Mark Chapman, ಮಿಚಲ್ ಹಿಡಿದ ಕ್ಯಾಚ್ ಪದೆ ಪದೇ ನೋಡಬೇಕು
ಚೆನ್ನೈ: ಭಾರತ ಹಾಗೂ ಶ್ರೀಲಂಕಾದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಈಗಾಗಲೇ ಸ್ಟಾರ್ ತಂಡಗಳು ಭರ್ಜರಿ ಪ್ರದರ್ಶನ ನೀಡಿವೆ. ಚೆನ್ನೈನಲ್ಲಿ ಮಂಗಳವಾರ "ಡಿ" ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಯುಎಇ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಮೊದಲು ಬ್ಯಾಟ್ ಮಾಡಲು ಮುಂದಾಯಿತು.
ಯುಎಇ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆರ್ಯನ್ಶ್ ಶರ್ಮಾ ಜಾಕೊಬ್ ಡಫಿ ತೋಡಿದ ಖೆಡ್ಡಾಗೆ ಬಲಿಯಾದರು. 12 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ಮುಹಮ್ಮದ್ ವಸೀಂ ಹಾಗೂ ಅಲಿಶನ್ ಶರಾಫು ಜೋಡಿ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಅಲ್ಲದೆ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಯಿತು.

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಅಲಿಶನ್ ಶರಾಫು 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಮಿಂಚಿದರು. ಇವರ ಆಟಕ್ಕೆ ಮಿಚೆಲ್ ಸ್ಯಾಂಟ್ನರ್ ಬ್ರೇಕ್ ಹಾಕಿದರು. ಇನಿಂಗ್ಸ್‌ನ 15ನೇ ಓವರ್ ಬೌಲ್ ಮಾಡಿದ ಸ್ಯಾಂಟ್ನರ್ ಅಲಿಶನ್ ಶರಾಫು ಅವರಿಗೆ ಬಿಗ್ ಹಿಟ್ ಬಾರಿಸಲು ಆಹ್ವಾನ ನೀಡಿದರು. ಆಗ ನ್ಯೂಜಿಲೆಂಡ್ ಆಟಗಾರರು ಹಿಡಿದ ಜುಗಲ್‌ಬಂಧಿ ಕ್ಯಾಚ್‌ಗೆ ಅಲಿಶನ್ ಶರಾಫು ಬಲಿಯಾದರು.
ಸೂಪರ್ ಮ್ಯಾನ್ ಕ್ಯಾಚ್
ಅಲಿಶನ್ ಶರಾಫು ಅವರಿಗೆ ನಿಧಾನಗತಿಯಲ್ಲಿ ಸ್ಯಾಂಟ್ನರ್ ಆಫ್ ಸ್ಟಂಪ್ ಆಚೆಗೆ ಚೆಂಡನ್ನು ಎಸೆದರು. ಈ ಎಸೆತವನ್ನು ನೋಡುತ್ತಲೇ ಅಲಿಶನ್ ಮುಖ ಅರಳಿತು. ತಾನು ಈ ಎಸೆತದಲ್ಲಿ ಬಿಗ್ ಹಿಟ್ ಬಾರಿಸಬಹುದು ಎಂದು ಲೆಕ್ಕಾಚಾರ ಹಾಕಿ ಡಿಪ್ ಮಿಡ್ ವಿಕೆಟ್ ಮೇಲೆ ಚೆಂಡನ್ನು ಎಸೆದರು. ಇವರು ಬಾರಿಸಿದ ವೇಗವನ್ನು ನೋಡಿದರೆ ಯುಎಇ ಖಾತೆಗೆ ಆರು ರನ್ ಬರೆದುಕೊಳ್ಳಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಬೌಂಡರಿ ಲೈನ್‌ನಲ್ಲಿ ಮಾರ್ಕ್ ಚಾಪ್ಮನ್ ಸೂಪರ್ ಮ್ಯಾನ್ ರೀತಿಯ ಕ್ಯಾಚ್ ಪಡೆದರು.
ಚೆಂಡು ತಮ್ಮ ಬಳಿ ಬರುತ್ತಿರುವುದನ್ನು ನೋಡಿದ ಮಾರ್ಕ್ ಚಾಪ್ಮನ್ ಗಾಳಿಯಲ್ಲಿ ಜಿಗಿದು ಎರಡೂ ಕೈಗಳಿಂದ ಚೆಂಡನ್ನು ಒಳಗೆ ತಳ್ಳಿದರು. ಆಗ ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಡ್ಯಾರಿಲ್ ಮಿಚೆಲ್ ಸುಲಭದ ಕ್ಯಾಚ್ ಪಡೆದರು. ಈ ಮೂಲಕ ಸಿಕ್ಸರ್ ಬಾರಿಸುವ ಅಲಿಶನ್ ಆಸೆಗೆ ನ್ಯೂಜಿಲೆಂಡ್ ಆಟಗಾರರು ಪೆಟ್ಟು ನೀಡಿದರು.
ಮುಹಮ್ಮದ್ ವಸೀಂ ಅರ್ಧಶತಕ
ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಸೇರಿಸಿತು. ಯುಎಇ ತಂಡದ ಪರ ನಾಯಕ ಮುಹಮ್ಮದ್ ವಸೀಂ 45 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 66 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಕುಮಾರ್ 13 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 21 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications