ಇದು ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆಯ ಗಂಟೆ: ಸ್ಟೋಕ್ಸ್ ಉಲ್ಲೇಖಿಸಿ ಹೀಗಂದಿದ್ಯಾಗೆ ಆಸಿಸ್ ಮಾಜಿ ನಾಯಕ

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಅವರ ಅಂತಿಮ ಏಕದಿನ ಪಂದ್ಯವಾಗಿತ್ತು. 31ನೇ ವಯಸ್ಸಿನಲ್ಲಿಯೇ ಒಂದು ಮಾದರಿಗೆ ನಿವೃತ್ತಿ ಘೋಷಣೆ ಮಾಡಿರುವುದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯುಂಟು ಮಾಡಿತ್ತು. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು, ಪ್ರತಿಕ್ರಿಯೆಗಳು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷನೆ ಮಾಡಿರುವುದು ಎಲ್ಲಾ ದೇಶಗಳ ಕ್ರಿಕೆಟ್ ಆಡಳಿತ ಮಂಡಳಿಗಳಿಗೆ ಎಚ್ಚರಿಕೆಯ ಸಂದೇಶವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಧಾರವನ್ನು ಮತ್ತಷ್ಟು ಕ್ರಿಕೆಟಿಗರು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.

ಇದು ಎಚ್ಚರಿಕೆಯ ಗಂಟೆ
ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ ಬೆನ್ ಸ್ಟೋಕ್ಸ್ ನಿವೃತ್ತಿ ವಿಚಾರವಾಗಿ ವಿಶ್ಲೇಷಣೆ ಮಾಡಿದ್ದಾರೆ. "ಈ ವಿಚಾರವಾಗಿ ಹಲವು ಸಮಯಗಳಿಂದ ಎಚ್ಚರಿಕೆ ಗಂಟೆ ಮೊಳಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನಂತಾ ಶ್ರೀಮಂತ ಕ್ರಿಕೆಟ್‌ಗಳು ಅತೊಯಾಗುತ್ತಿದ್ದು ಇವುಗಳ ಮದ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಎಲ್ಲಿದೆ ಎಂದು ಹುಡುಕುವಂತಾಗಿದೆ" ಎಂದಿದ್ದಾರೆ ಮಾರ್ಕ್ ಟೇಲರ್.

ಪ್ರಮುಖ ಪಾತ್ರವಹಿಸುತ್ತಿವೆ ಕ್ರಿಕೆಟ್ ಲೀಗ್‌ಗಳು
ಈ ಸಂದರ್ಭದಲ್ಲಿ ಕ್ರಿಕೆಟ್ ಲೀಗ್‌ಗಳು ಆಟಗಾರರ ಮೇಲೆ ಭಾರೀ ಪ್ರಮಾಣದಲ್ಲಿ ಪ್ರಭಾವ ಬಿರುತ್ತಿವೆ ಎಂದಿದ್ದಾರೆ ಆಸಿಸ್ ಮಾಜಿ ನಾಯಕ. ಅದನ್ನು ಗಮನದಲ್ಲಿಟ್ಟುಕೊಂಡು ಆಟಗಾರರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವಿಚಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. "ಬೆನ್ ಸ್ಟೋಕ್ಸ್ ಅವರಂತಾ ಆಟಗಾರರಿಗೆ ಅತ್ಯಂತ ಹೆಚ್ಚು ಬೇಡಿಕೆಯಿದೆ. ಟಿ20 ಲೀಗ್ ಕ್ರಿಕೆಟ್‌ನಿಂದ ಅವರು ಸಾಕಷ್ಟು ಗಳಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರು ಕೂಡ ಕ್ರಿಕೆಟ್‌ಗೆ ವಾಪಾಸ್ ನೀಡಬೇಕಾಗಿದೆ" ಎಂದಿದ್ದಾರೆ ಮಾರ್ಕ್ ಟೇಲರ್.

ಬೆನ್ ಸ್ಟೋಕ್ಸ್ ಆನುಸರಿಸಲಿದ್ದಾರೆ ಮತ್ತಷ್ಟು ಕ್ರಿಕೆಟಿಗರು
ಈ ಸಂದರ್ಭದಲ್ಲಿ ಮಾರ್ಕ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತಷ್ಟು ಯುವ ಆಟಗಾರರು ಬೆನ್ ಸ್ಟೋಕ್ಸ್ ಅವರ ನಿರ್ಧಾರವನ್ನು ಹಿಂಬಾಲಿದ್ದಾರೆ ಎಂದಿದ್ದಾರೆ. "ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಮಾದರಿಗಳು ಇದೆ. ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಆಯ್ಕೆಗಳಿದ್ದು ವಿಶ್ವಾದ್ಯಂತ ಇರುವ ಭಿನ್ನ ಲೀಗ್ ಕ್ರಿಕೆಟ್‌ಗಳು ಹೆಚ್ಚಿನ ಅವಕಾಶವನ್ನು ನೀಡುತ್ತಿವೆ. ಯಾವುದೇ ಸಂದರ್ಭದಲ್ಲಿಯೂ ಆಟಗಾರರಿ ನಾಲ್ಕೈದು ಮಾಲೀಕರನ್ನು ಹೊಂದಬಹುದು. ಹೀಗಾಗಿ ಫ್ರೀಲಾನ್ಸ್ ಕ್ರಿಕೆಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಆದಾಯಗಳಿಸುತ್ತಿದ್ದಾರೆ" ಎಂದಿದ್ದಾರೆ ಮಾರ್ಕ್ ಟೇಲರ್.

ಅಂತಿಮ ಏಕದಿನ ಪಂದ್ಯವಾಡಿದ ಸ್ಟೋಕ್ಸ್
ಭಾರತದ ವಿರುದ್ಧ ನಡೆದ ಏಕದಿನ ಸರಣಿಯ ಬಳಿಕ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು. ಇನ್ನೂ 31ರ ಹರೆಯದ ಬೆನ್ ಸ್ಟೋಕ್ಸ್ ಹೀಗೆ ಒಂದು ಮಾದರಿಯಿಂದ ನಿವೃತ್ತಿ ಪಡೆಯುವ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚಿನ ಗಮನಹರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳ ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications