ಗೆಲ್ಲಲು ಇನ್ನೇಷ್ಟು ರನ್ ಕಲೆ ಹಾಕಬೇಕು: ಗರಿಷ್ಠ ರನ್ "ಮಾರ್ಕ್" ದಾಟಿದ ಆಫ್ರಿಕಾ
ಭರವಸೆಯ ಬ್ಯಾಟರ್ ಐಡೆನ್ ಮಾರ್ಕ್ರಾಮ್ ಬಾರಿಸಿದ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ಎರಡನೆ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ ಸವಾಲಿನ ಮೊತ್ತವನ್ನು ಚೇಸ್ ಮಾಡುವಲ್ಲಿ ಸಫಲವಾಗಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ 4 ವಿಕೆಟ್ ಸೋಲು ಕಂಡಿದ್ದು, ಸರಣಿಯಲ್ಲಿ 1-1 ಸಬಲವನ್ನು ಸಾಧಿಸಿದೆ. ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ದೊಡ್ಡ ಮೊತ್ತವನ್ನು ಕಲೆ ಹಾಕಿದರೂ, ರಕ್ಷಿಸಿಕೊಳ್ಳುವಲ್ಲಿ ಎಡವಿದೆ.
ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ 350ಕ್ಕೂ ಹೆಚ್ಚು ರನ್‌ಗಳನ್ನು ಚೇಸ್ ಮಾಡಿ ಇತಿಹಾಸ ನಿರ್ಮಿಸಿದೆ. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಕ್ವಿಂಟನ್ ಡಿಕಾಕ್ 8 ರನ್ ಬಾರಿಸಿ ಪೆವಿಲಿಯನ್ ಸೇರಿದರು. 26 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಐಡೆನ್ ಮಾರ್ಕ್ರಾಮ್ ಹಾಗೂ ತೆಂಬು ಬುವಾಮ ಜೋಡಿ ಆಧಾರವಾಯಿತು.

2ನೇ ವಿಕೆಟ್‌ಗೆ ತೆಂಬು ಬವುಮಾ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ವೇಳೆ ನಾಯಕ ತೆಂಬು ಬವುಮಾ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಔಟ್ ಆದರು. ಮ್ಯಾಥ್ಯೂ ಬ್ರೀಟ್ಜ್ಕೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದು ಐಡೆನ್ ಮಾರ್ಕ್ರಾಮ್ ಅವರನ್ನು ಸೇರಿಕೊಂಡು 55 ಎಸೆತಗಳಲ್ಲಿ 77 ರನ್ ಸಿಡಿಸಿದರು. ಈ ವೇಳೆ ಐಡೆನ್ ಮಾರ್ಕ್ರಾಮ್ 98 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 110 ರನ್ ಬಾರಿಸಿ ಹರ್ಷಿತ್ ರಾಣಾ ಅವರು ತೋಡಿದ ಖೆಡ್ಡಾಗೆ ಬಲಿಯಾದರು.
4ನೇ ವಿಕೆಟ್‌ಗೆ ಮ್ಯಾಥ್ಯೂ ಬ್ರೀಟ್ಜ್ಕೆಗೆ ಉತ್ತಮ ಸಾಥ್ ನೀಡಿದ ಡೇವಾಲ್ಡ್ ಬ್ರೆವೀಸ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 64 ಎಸೆತಗಳಲ್ಲಿ 92 ರನ್ ಸಿಡಿಸಿತು. ಈ ವೇಳೆ ಬ್ರೆವೀಸ್ 1 ಬೌಂಡರಿ, 5 ಸಿಕ್ಸರ್ ಸಹಾಯದಿಂದ 54 ರನ್ ಬಾರಿಸಿ ಔಟ್ ಆದರು. ಮ್ಯಾಥ್ಯೂ ಬ್ರೀಟ್ಜ್ಕೆ 5 ಬೌಂಡರಿ ನೆರವಿನಿಂದ 68 ರನ್ ಸಿಡಿಸಿದರು. ಕಾರ್ಬಿನ್ ಬಾಷ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ದಕ್ಷಿಣ ಆಫ್ರಿಕಾ ಬೆನ್ನಟ್ಟಿದ ದೊಡ್ಡ ಮೊತ್ತಗಳು
ಆಸ್ಟ್ರೇಲಿಯಾ ವಿರುದ್ಧ, 439/9
ಆಸ್ಟ್ರೇಲಿಯಾ ವಿರುದ್ಧ, 372/6
ಭಾರತ ವಿರುದ್ಧ, 359/6
ಇಂಗ್ಲೆಂಡ್ ವಿರುದ್ಧ, 347/5
ಆಸ್ಟ್ರೇಲಿಯಾ ವಿರುದ್ಧ, 328/3
ರುತುರಾಜ್, ವಿರಾಟ್ ಶತಕ ವ್ಯರ್ಥ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ರೋಹಿತ್ ಶರ್ಮಾ (14), ಯಶಸ್ವಿ ಜೈಸ್ವಾಲ್ (22) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಇವರು 93 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 102 ರನ್ ಸಿಡಿಸಿದರು. ರುತುರಾಜ್ ಗಾಯಕ್ವಾಡ್ ತಮ್ಮ 8ನೇ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕ ಬಾರಿಸಿದರು. ಇವರು 83 ಎಸೆತಗಳಲ್ಲಿ 105 ರನ್ ಬಾರಿಸಿದರು. ನಾಯಕ ಕೆಎಲ್ ರಾಹುಲ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 66 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್ ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications