For Quick Alerts
ALLOW NOTIFICATIONS  
For Daily Alerts
 

WTC Final: ಮಾರ್ಕ್ರಾಮ್‌ ಶತಕ, ಬವುಮಾ ಅರ್ಧಶತಕ ಸುಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ

ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ಫೈನಲ್‌ನ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿದ್ದು, ಗೆಲುವಿನ ಆಸೆಯನ್ನು ಚಿಗುರಿಸಿದೆ. ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಬಾರಿಗೆ ಈ ಟೂರ್ನಿಯ ಚಾಂಪಿಯನ್ ಆಗಲು ಶನಿವಾರ 69 ರನ್‌ಗಳನ್ನು ಕಲೆ ಹಾಕುವ ಅಗತ್ಯತೆ ಇದೆ.

ಶುಕ್ರವಾರ ಮೂರನೇ ದಿನಾದಾಟವನ್ನು ಆಸ್ಟ್ರೇಲಿಯಾ ಆರಂಭಿಸಿತು. ಎರಡನೇ ಇನಿಂಗ್ಸ್‌ಗಳಲ್ಲಿ 8 ವಿಕೆಟ್‌ಗೆ 144 ರನ್‌ಗಳಿಂದ ಆಟ ಮುಂದುವರಿಸಿದ ಆಸೀಸ್‌ 207 ರನ್‌ಗಳಿಗೆ ಸರ್ವಪತನ ಹೊಂದಿತು. ಅನುಭವಿ ಆಟಗಾರ ಮಿಚೆಲ್ ಸ್ಟಾರ್ಕ್‌ 5 ಬೌಂಡರಿ ನೆರವಿನಿಂದ 56 ರನ್‌ ಬಾರಿಸಿ ಅಜೇಯರಾಗಿ ಉಳಿದರು. ದಕ್ಷಿಣ ಆಫ್ರಿಕಾದ ಪರ ಅನುಭವಿ ವೇಗದ ಬೌಲರ್‍ ಕಗಿಸೋ ರಬಾಡ 4, ಲುಂಗಿ ಎನ್‌ಗಿಡಿ 3 ವಿಕೆಟ್‌ ಕಬಳಿಸಿದರು.

Markram s Century Bavuma s Half-Century Put South Africa in Strong Position in WTC Final

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ರಯಾನ್‌ ರಿಂಕಲ್ಟನ್‌ ಬೇಗನೇ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಐಡೇನ್‌ ಮಾರ್ಕ್ರಾಮ್ ಅವರ ಜೊತೆಗೂಡಿಸಿದ ವಿಯಾನ್ ಮುಲ್ಡರ್ ಜೋಡಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿತು. ಎರಡನೇ ವಿಕೆಟ್‌ಗೆ ಐಡೇನ್‌ ಹಾಗೂ ವಿಯಾನ್ ಮುಲ್ಡರ್ (27) 93 ಎಸೆತಗಳಲ್ಲಿ 61 ರನ್‌ ಸಿಡಿಸಿದರು.

ಮೂರನೇ ವಿಕೆಟ್‌ಗೆ ಮಾರ್ಕ್ರಾಮ್‌ ಜೊತೆಗೂಡಿದ ನಾಯಕ ತೆಂಬು ಬವುಮಾ ಒತ್ತಡವನ್ನು ಮೆಟ್ಟಿನಿಂತು ಇನಿಂಗ್ಸ್‌ ಕಟ್ಟುವತ್ತ ಚಿತ್ತ ನೆಟ್ಟರು. ಈ ಜೋಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿತು. ಅಲ್ಲದೆ ಆಸ್ಟ್ರೇಲಿಯಾ ಬೌಲರ್‍ಗಳ ರಣತಂತ್ರವನ್ನು ಮೆಟ್ಟಿನಿಂತಿತು. ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಡಿದ ಮಾರ್ಕ್ರಾಮ್‌ ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದರು. ಇವರು 11 ಬೌಂಡರಿ ನೆರವಿನಿಂದ ಅಜೇಯ 102 ರನ್ ಬಾರಿಸಿ ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗಾಯದ ನಡುವೆ ಆಟ

ದಕ್ಷಿಣ ಆಫ್ರಿಕಾದ ನಾಯಕ ತೆಂಬು ಬವುಮಾ ತಮ್ಮ ಕ್ಲಾಸ್ ಆಟವನ್ನು ಪ್ರದರ್ಶಿಸಿದರು. ಇವರು ಸ್ನಾಯು ಸೆಳೆತಕ್ಕೆ ಒಳಗಾದ್ರೂ ಬಗ್ಗದೇ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಬವುಮಾ ಮೊದಲ ಇನಿಂಗ್ಸ್‌ನಲ್ಲಿ ಆಡಿದ ಅಮೋಘ ಆಟವನ್ನೇ ಎರಡನೇ ಇನಿಂಗ್ಸ್‌ನಲ್ಲೂ ಮುಂದುವರೆಸಿದರು. ಇವರು 121 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ ಅಜೇಯ 65 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಮೂರನೇ ವಿಕೆಟ್‌ಗೆ ಮಾರ್ಕ್ರಾಮ್‌ ಹಾಗೂ ಬವುಮಾ ಜೋಡಿ 232 ಎಸೆತಗಳಲ್ಲಿ ಅಜೇಯ 143 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಮೂಲಕ ದಕ್ಷಿಣ ಆಫ್ರಿಕಾ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್ ಆಗುವ ಕನಸು ಚಿಗುರಿಸಿದೆ. ಶನಿವಾರದ ಆಟದಲ್ಲಿ ಈ ಆಟಗಾರರು ಕೊಂಚ ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿದರೆ, ಜಯದ ನಗೆ ಬೀರಬಹದು. ಮೂರನೇ ದಿನದ ಆಟದ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ 213 ರನ್‌ ಕಲೆ ಹಾಕಿ ಸುಸ್ಥಿತಿಯಲ್ಲಿದೆ.

Story first published: Saturday, June 14, 2025, 1:39 [IST]
Other articles published on Jun 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+