For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಜತೆ ಮದುವೆ ಸದ್ಯಕ್ಕಿಲ್ಲ: ಅನುಷ್ಕಾ

By Mahesh

ಮುಂಬೈ, ಅ.28: ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಅವರ ಮದುವೆ ಸಂಭ್ರಮದಲ್ಲಿ ಯುವ ಕ್ರಿಕೆಟರ್ಸ್ ಮೇಲೆ ಮಾಧ್ಯಮದವರ ಕಣ್ಣು ಹೆಚ್ಚಾಗಿ ಬೀಳುತ್ತಿದೆ. ಭಜ್ಜಿ ಮದ್ವೆಯಾಯ್ತು ನಿಮ್ದು ಯಾವಾಗ? ಎಂಬ ಪ್ರಶ್ನೆ ಕಾಮನ್ ಆಗಿದೆ. ಈ ಬಗ್ಗೆ ಕೊಹ್ಲಿಯಂತೂ ಉತ್ತರಿಸುತ್ತಿಲ್ಲ. ಹಾಗೆ ಸಿಕ್ಕ ಕೊಹ್ಲಿ ಗೆಳತಿ ಅನುಷ್ಕಾರನ್ನು ಕೇಳಿದರೆ ಮದುವೆ ಬಗ್ಗೆ ನಾವೇನು ಯೋಚಿಸಿಯೇ ಇಲ್ಲ ಎಂದಿದ್ದಾರೆ.

2013ರಿಂದ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಡೇಟಿಂಗ್ ನಲ್ಲಿದ್ದಾರೆ. ಇಬ್ಬರ ನಡುವಿನ ಪ್ರೇಮ ಯಾವಾಗ ವಿವಾಹ ಬಂಧನಕ್ಕೆ ಒಳಪಡುತ್ತದೆ ಎಂಬುದು ಅವರಿಬ್ಬರಿಗಿಂತ ಉಳಿದವರಿಗೆ ಹೆಚ್ಚು ಆತುರವಾಗಿದೆ. 2015ರಲ್ಲಂತೂ ಇಬ್ಬರ ವಿವಾಹ ನಿಶ್ಚಿತಾರ್ಥ, ಮದುವೆ ಸಾಧ್ಯವಿಲ್ಲ ಎಂದು ಅನುಷ್ಕಾ ಶರ್ಮ ಅವರ ಮ್ಯಾನೇಜರ್ ಹೇಳಿದ್ದಾರೆ. [ಗೀತಾ- ಹರ್ಭಜನ್ ಸಿಂಗ್ ಮದುವೆ ಸಂಗೀತ್ ಸಂಭ್ರಮ]

ವಿರಾಟ್ ಕೊಹ್ಲಿ ಅವರ ಬಗ್ಗೆ ಅನುಷ್ಕಾ ಅವರ ಮನೆಯಲ್ಲಿ ಒಳ್ಳೆ ಅಭಿಪ್ರಾಯವಿಲ್ಲ. ಇಬ್ಬರ ಮದುವೆಗೆ ಒಪ್ಪುತ್ತಿಲ್ಲ ಎಂಬ ಸುದ್ದಿಯಲ್ಲಿ ಸತ್ಯವಿಲ್ಲ. ಕೊಹ್ಲಿ ಹಾಗೂ ಅನುಷ್ಕಾ ಇಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಾಧಿಸಬೇಕಿದೆ. ಸದ್ಯಕ್ಕಂತೂ ಇಬ್ಬರಿಗೂ ಪುರುಸೊತ್ತ್ತಿಲ್ಲ. ಮದುವೆ ಬಗ್ಗೆ ಮಾತುಕತೆ ನಡೆದರೆ, ಮದುವೆ ದಿನ, ದಿನಾಂಕ ನಿಶ್ಚಿತವಾದರೆ ಖುದ್ದು ಅನುಷ್ಕಾ ಅವರೇ ತಮ್ಮ ಫ್ಯಾನ್ಸ್ ಗೆ ಟ್ವಿಟ್ಟರ್ ಮೂಲಕ ತಿಳಿಸುತ್ತಾರೆ ಎಂದು ಅನುಷ್ಕಾ ಪರ ಅವರ ವಕ್ತಾರರು ಹೇಳಿದ್ದಾರೆ.

Marriage with cricketer Virat Kohli

ಇತ್ತೀಚೆಗೆ ಅನುಷ್ಕಾ ಅವರ ಪೋಷಕರ ಜೊತೆ ಕೊಹ್ಲಿ ಅವರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಇದಾದ ಬಳಿಕ ಅನುಷ್ಕಾ ಅವರು ಮದುವೆ ಬಗ್ಗೆ ಯೋಚಿಸಿಲ್ಲ ಎಂದಿದ್ದರು. ಹೀಗಾಗಿ ಇಬ್ಬರ ಪ್ರೇಮ ಬಂಧನ ಏನಾದರೂ ಬ್ರೇಕ್ ಆಯಿತೇ ಎಂಬ ಕುತೂಹಲದಿಂದ ಅವ್ರ ಸುತ್ತಾ ಮುತ್ತಾ ಸುದ್ದಿಗಾರರು ಓಡಾಡುವುದು ಸಾಮಾನ್ಯವಾಗಿದೆ.

ದಿಲ್ ಧಡಕ್ನೆ ದೋ ಚಿತ್ರದ ಯಶಸ್ಸಿನ ನಂತರ ಅನುಷ್ಕಾ ಅವರು ಏ ದಿಲ್ ಹೈ ಮುಷ್ಕಿಲ್ ನಲ್ಲಿ ತೊಡಗಿಕೊಂಡಿದ್ದಾರೆ. ಎನ್ ಎಚ್ 10 ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರು ಪ್ರಥಮ ಬಾರಿಗೆ ತವರು ನೆಲದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಲು ಸಿದ್ಧರಾಗುತ್ತಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+