ಗಪ್ಟಿಲ್ ಅಬ್ಬರ, ಬಾಂಗ್ಲಾ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಏಕದಿನ ಸರಣಿ ಮುನ್ನಡೆ

ನೇಪಿಯರ್, ಫೆಬ್ರವರಿ 13: ಏಕದಿನ ಅಜೇಯ ಶತಕ ಬಾರಿಸುವ ಮೂಲಕ ತಾನು ಫಾರ್ಮ್‌ಗೆ ಮರಳಿರುವುದಕ್ಕೆ ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ಸಾಕ್ಷಿ ಹೇಳಿದ್ದಾರೆ. ಗಪ್ಟಿಲ್ ಶತಕದ ನೆರವಿನಿಂದ ನೇಪಿಯರ್‌ನಲ್ಲಿ ನಡೆದ ಬಾಂಗ್ಲಾದೇಶ-ನ್ಯೂಜಿಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ 8 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ.
ನೇಪಿಯರ್‌ನ ಮೆಕ್‌ಲೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 13) ನಡೆದ ಪ್ರವಾಸಿ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ನಡುವಿನ ಆರಂಭಿಕ ಏಕದಿನ ಪಂದ್ಯದಲ್ಲಿ ಗಪ್ಟಿಲ್ 116 ಎಸೆತಗಳಿಗೆ 117 ರನ್ ಚಚ್ಚಿದರು. ಹೆನ್ರಿ ನಿಕೋಲ್ಸ 53, ರಾಸ್ ಟೇಲರ್ ಕೊಡುಗೆಯೊಂದಿಗೆ ಬಾಂಗ್ಲಾ ನೀಡಿದ್ದ 233 ರನ್ ಗುರಿಯನ್ನು ಕಿವೀಸ್, 44.3 ಓವರ್ ಇರುವಾಗಲೇ 2 ವಿಕೆಟ್ ನಷ್ಟದೊಂದಿಗೆ ತಲುಪಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ ತಂಡ, ಸೌಮ್ಯ ಸರ್ಕಾರ್ 30, ಮೊಹಮ್ಮದ್ ಮಿಥುನ್ 62, ಮೊಹಮ್ಮದ್ ಸೈಫುದ್ದೀನ್ 41 ರನ್ ಕೊಡುಗೆಯೊಂದಿಗೆ 48.5 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 232 ಗಳಿಸಿತು. ಬಾಂಗ್ಲಾ ಇನ್ನಿಂಗ್ಸ್ ವೇಳೆ ನ್ಯೂಜಿಲ್ಯಾಂಡ್‌ನ ಟ್ರೆಂಡ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 3, ಮ್ಯಾಟ್ ಹೆನ್ರಿ ಮತ್ತು ಲಾಕೀ ಫರ್ಗುಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಅಬ್ಬರದ ಬ್ಯಾಟಿಂಗ್ ನಡೆಸಿದ ಮಾರ್ಟಿನ್ ಗಪ್ಟಿಲ್ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದದ ಗೆಲುವಿನೊಂದಿಗೆ ಆತಿಥೇಯ ನ್ಯೂಜಿಲ್ಯಾಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ದ್ವಿತೀಯ ಏಕದಿನ ಪಂದ್ಯ ಫೆಬ್ರವರಿ 16ರಂದು ಕ್ರೈಸ್ಟ್‌ಚರ್ಚ್ ನಲ್ಲಿರುವ ಹ್ಯಾಗ್ಲಿ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications