ಭಾರತ ವಿರುದ್ಧದ ಟಿ20 ಸರಣಿಯಿಂದ ನ್ಯೂಜಿಲ್ಯಾಂಡ್‌ನ ಗಪ್ಟಿಲ್ ಹೊರಕ್ಕೆ

ವೆಲ್ಲಿಂಗ್ಟನ್, ಫೆಬ್ರವರಿ 4: ಮುಂಬರಲಿರುವ ನ್ಯೂಜಿಲ್ಯಾಂಡ್-ಭಾರತ ಟಿ20 ಸರಣಿಯಲ್ಲಿ ಮಾರ್ಟಿನ್ ಗಪ್ಟಿಲ್ ಅವರು ಕಿವೀಸ್ ಪರ ಕಣಕ್ಕಿಳಿಯುತ್ತಿಲ್ಲ. ಬೆನ್ನು ನೋವಿನ ಕಾರಣದಿಂದಾಗಿ ಗಪ್ಟಿಲ್ ನ್ಯೂಜಿಲ್ಯಾಂಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಫಿಟ್ನೆಟ್ ಟೆಸ್ಟ್ನಲ್ಲೂ ಅವರು ಫೇಲ್ ಆಗಿದ್ದರಿಂದ ತಂಡದಿಂದ ಅವರನ್ನು ಕೈಬಿಡಲಾಗಿದೆ.
ಇತ್ತಂಡಗಳ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಆಡಿದ್ದ ಗಪ್ಟಿಲ್ ಅನಂತರ ಗಾಯಾಳಾಗಿ ತಂಡದಿಂದ ಹೊರಗುಳಿದಿದ್ದರು. 5ನೇ ಪಂದ್ಯದಲ್ಲಿ ಮಾರ್ಟಿನ್ ಆಡಿರಲಿಲ್ಲ. ನಡೆಸಲಾದ ಫಿಟ್ನೆಸ್ ಟೆಸ್ಟ್‌ನಲ್ಲೂ ಗಪ್ಟಿಲ್ ಅನುತ್ತೀರ್ಣರಾಗಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದಾರೆ. ಭಾರತ-ಕಿವೀಸ್ ಟಿ20 ಸರಣಿ ಫೆಬ್ರವರಿ 6ರಿಂದ ಆರಂಭಗೊಳ್ಳಲಿದೆ.
'ಚುಟುಕು ಮಾದರಿಯ ಕ್ರಿಕೆಟ್‌ಗಾಗಿ ತಂಡದಲ್ಲಿ ಪ್ರಮುಖ ಆಟಗಾರರಾಗಿರುತ್ತಿದ್ದ ಗಪ್ಟಿಲ್ ಅವರು ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸದಿರುವುದು ದುರಾದೃಷ್ಟಕರ' ಎಂದು ಸ್ಟೆಡ್ ಹೇಳಿದ್ದಾರೆ. ಬಹುಶಃ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ವೇಳೆಗೆ ಮಾರ್ಟಿನ್ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಗಪ್ಟಿಲ್ ಜಾಗಕ್ಕೆ ಜಿಮ್ಮಿ ನೀಶಮ್ ಅವರನ್ನು ತರಲಾಗಿದೆ.
ಟಿ20ಗೆ ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ಕ್ಯಾಪ್ಟನ್), ಡೌಗ್ ಬ್ರೇಸ್ವೆಲ್, ಕೊಲಿನ್ ಡೆ ಗ್ರ್ಯಾಂಡ್‌ಹೋಮ್, ಲಾಕೀ ಫರ್ಗುಸನ್, ಸ್ಕಾಟ್ ಕುಗ್ಲೆಲೀಜನ್, ಡಾರ್ಲ್ ಮಿಚೆಲ್, ಕಾಲಿನ್ ಮುನ್ರೋ, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೈಫರ್ಟ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications