ಶ್ರೀಲಂಕಾದಲ್ಲಿ ಇನ್ಮುಂದೆ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!

ಕೊಲಂಬೋ, ನವೆಂಬರ್ 12: ಏಷ್ಯಾದಲ್ಲೇ ಮೊದಲಬಾರಿಗೆ ಶ್ರೀಲಂಕಾ ದೇಶ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ತಡೆಯಲು ಹೊಸ ಕಾನೂನು ರೂಪಿಸಲು ಮುಂದಾಗಿತ್ತು. ಅದರಂತೆ ಇನ್ನು ಮುಂದೆ ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್‌ನಂತ ಅಪರಾಧಗಳು ಕ್ರಿಮಿನಲ್ ಅಪರಾಧಗಳಾಗಿ ಪರಿಗಣಿಸಲ್ಪಡುತ್ತವೆ.
ಕ್ರೀಡೆಯಲ್ಲಿ ಭ್ರಷ್ಟಾಚಾರ ನಿವಾರಿಸಲು ಕಳೆದ ಕೆಲ ವರ್ಷಗಳ ಹಿಂದೆಯೇ ಶ್ರೀಲಂಕಾ ಮುಂದಡಿಯಿಟ್ಟಿತ್ತು. ಆದರೆ ಈ ಕಾಯ್ದೆಗೆ ಅನುಮೋದನೆ ದೊರೆಯೋದು ಬಾಕಿಯಿತ್ತು. ಈಗ ಶ್ರೀಲಂಕಾ ಪಾರ್ಲಿಮೆಂಟ್, 'ಕ್ರೀಡೆಗಳಿಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ' ಎಂಬ ಶೀರ್ಷಿಕೆಯಡಿಯಲ್ಲಿ ಈ ಕಾಯ್ದೆಗೆ ಅನುಮೋದನೆ ನೀಡಿದೆ.
ಹೀಗಾಗಿ ಇನ್ಮುಂದೆ ಶ್ರೀಲಂಕಾದಲ್ಲಿ ಕ್ರೀಡೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅಪರಾಧಗಳು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲ್ಪಡುತ್ತವೆ. ಅಪರಾಧಿಗೆ 10 ವರ್ಷಗಳ ವರೆಗಿನ ಶಿಕ್ಷೆ ಮತ್ತು ಬೇರೆ ಬೇರೆ ರೀತಿಯ ದಂಡ ವಿಧಿಸಲು ಅವಕಾಶವಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಹೇಳಿದೆ.
ಲಂಕಾ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಅವರು ಮಂಗಳವಾರ ಈ ಕಾಯ್ದೆಯ ಪ್ರಸ್ತಾಪವನ್ನು ಪಾರ್ಲಿಮೆಂಟ್‌ನಲ್ಲಿ ಸಲ್ಲಿಸಿದ್ದರು. ಇದಕ್ಕೆ ಶ್ರೀಲಂಕಾ ತಂಡದ ಮಾಜಿ ನಾಯಕ, ಈಗಿನ ಕ್ಯಾಬಿನೆಟ್ ಸಚಿವ ಅರ್ಜುನ ರಣತುಂಗ ಅವರ ಬೆಂಬಲ ಲಭಿಸಿದೆ. ಮಾಜಿ ಆಟಗಾರರು, ಈಗಿನ ಆಟಗಾರರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡರೂ ಈ ಕಾನೂನು ಅನ್ವಯಿಸಲ್ಪಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications