Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಂದ್ಯ ಮುಗಿಯಿತು, ಮನೆಗೆ ಹೋಗಿ; ತ್ರಿಕೊನ ಸರಣಿಯಲ್ಲಿ ಲಂಕಾ ಆಟಗಾರನ ಜೊತೆ ವೈಭವ್ ಕಿರಿಕ್

ಭರವಸೆಯ ಬ್ಯಾಟರ್‌ ವೈಭವ್ ಸೂರ್ಯವಂಶಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಈಗ ವಿಶ್ವದ ಚಿತ್ತ ಕದ್ದಿದ್ದಾರೆ. ಐಪಿಎಲ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಅಭಿಮಾನಿಗಳ ಮನ ಗೆದ್ದಿದ್ದ ವೈಭವ್ ಸೂರ್ಯವಂಶಿ, ಟೀಮ್ ಇಂಡಿಯಾಕ್ಕೂ ಆಯ್ಕೆ ಆದರು. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ತಂಡಕ್ಕೂ ಬಿಸಿಸಿಐ ಆಯ್ಕೆ ಸಮಿತಿ ಇವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಿತು. ಆದರೆ ಇವರು ಈ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ನಿರಂತರ ವಿಫಲರಾಗುತ್ತಿದ್ದಾರೆ. ಅಲ್ಲದೆ ಮೈದಾನದಲ್ಲಿನ ವಿವಾದದಿಂದಲೂ ಸುದ್ದಿಯಲ್ಲಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಸೂಪರ್ ಓವರ್ ಸೋಲಿನ ನಂತರ ದುಂಬಾಲ ಮೈದಾನದಲ್ಲಿ ನಡೆದ ಘಟನೆ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈಗ, ಈ ವಿವಾದದ ಹಿಂದಿನ ನಿಜವಾದ ಕಾರಣ ಬಹಿರಂಗವಾಗಿದೆ.

ತ್ರಿಕೋನ ಸರಣಿಯ ಮಹತ್ವದ ಪಂದ್ಯದಲ್ಲಿ ಭಾರತ 'ಎ' ಹಾಗೂ ಶ್ರೀಲಂಕಾ 'ಎ' ತಂಡಗಳು ದುಂಬಾಲ ಕ್ರೀಡಾಂಗಣದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಶ್ರೀಲಂಕಾ 'ಎ' ರೋಚಕ ಗೆಲುವು ದಾಖಲಿಸಿತು. ಸೂಪರ್ ಓವರ್‌ ವರೆಗೂ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಶ್ರೀಲಂಕಾ 'ಎ' ನೀಡಿದ್ದ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 'ಎ' 6 ರನ್‌ಗಳಿಂದ ಪಂದ್ಯವನ್ನು ಕೈ ಚೆಲ್ಲಿತು. ಇದೇ ವೇಳೆ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಎ ತಂಡದ ಆಟಗಾರ ವಿಶೆನ್ ಹಾಲಂಬಗೆ ನಡುವೆ ಬಿಸಿಯಾದ ವಾಗ್ವಾದ ನಡೆಯಿತು. ವಾಗ್ವಾದ ತಡೆಯಲು ಇತರ ಆಟಗಾರರು ಮಧ್ಯಪ್ರವೇಶಿಸಬೇಕಾಯಿತು.

Match Over Go Home

ಮಾತಿನ ಚಕಮಕಿಗೆ ಕಾರಣವೇನು?

ಕ್ರಿಕ್‌ಬಜ್ ವರದಿಗಳ ಪ್ರಕಾರ, ಶ್ರೀಲಂಕಾದ ಆಟಗಾರ ವಿಶೆನ್ ಹಾಲಂಬ ಮಾಡಿದ ಕಾಮೆಂಟ್‌ನೊಂದಿಗೆ ವಿವಾದ ಪ್ರಾರಂಭವಾಯಿತು. ಪಂದ್ಯ ಗೆದ್ದ ನಂತರ ಶ್ರೀಲಂಕಾದ ಈ ಆಟಗಾರ ವೈಭವ್ ಸೂರ್ಯವಂಶಿಯನ್ನು ನೋಡಿ, "ಪಂದ್ಯ ಮುಗಿದಿದೆ, ಈಗ ಮನೆಗೆ ಹೋಗು" ಎಂದು ಹೇಳಿದರು. ಈ ಹೇಳಿಕೆಯನ್ನು ಕೇಳಿದ ವೈಭವ್, ಆಕ್ರಶೋಗೊಂಡು ವಾಗ್ವಾದ ನಡೆಸಿದರು. ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಎಷ್ಟು ಉದ್ವಿಗ್ನಗೊಂಡಿತು. ಪರಿಸ್ಥಿತಿ ಗಮನಿಸಿದ ಶ್ರೀಲಂಕಾ ಎ ಮತ್ತು ಭಾರತ ಎ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದಾಗ್ಯೂ, ಈ ಘಟನೆಯು ಪಂದ್ಯದ ರೋಮಾಂಚಕಾರಿ ಅಂತ್ಯವನ್ನು ಹಾಳು ಮಾಡಿತು.

Story first published: Tuesday, June 16, 2026, 10:26 [IST]
Other articles published on Jun 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+