ಭಾರತ vs ಶ್ರೀಲಂಕಾ ಸರಣಿಗೆ ಅಂಪೈರ್‌ಗಳ ಪಟ್ಟಿ ಪ್ರಕಟಿಸಿದ ಐಸಿಸಿ

ಕೊಲಂಬೋ: ಮುಂಬರಲಿರುವ ಭಾರತ-ಶ್ರೀಲಂಕಾ ಸರಣಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂಪೈರ್‌ಗಳ ಪಟ್ಟಿ ಪ್ರಕಟಿಸಿದೆ. ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಕುಮಾರ್ ಧರ್ಮಸೇನಾ ಮತ್ತು ಮ್ಯಾಚ್ ರೆಫರೀ ರಂಜನ್ ಮದುಗಾಲೆ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀಲಂಕಾಕ್ಕೆ ಪ್ರವಾಸ ಹೋಗಲಿರುವ ಭಾರತ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಜುಲೈ 18ರಿಂದ ಈ ಸರಣಿ ಶುರುವಾಗಲಿವೆ. ಭಾರತೀಯ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ನಾಯಕರಾಗಿ, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ತಂಡದ ಜೊತೆಗಿರಲಿದ್ದಾರೆ.
ಐಸಿಸಿ ಇಂಟರ್ ನ್ಯಾಷನಲ್ ಪ್ಯಾನೆಲ್ ಅಂಪೈರ್‌ಗಳಾದ ರುಚಿರ ಪಲ್ಲಿಯಗುರುಗೆ, ರವೀಂದ್ರ ವಿಮಲಾಸಿರಿ, ಲಿಂಡನ್ ಹನ್ನಿಬಲ್, ಪ್ರಗೀತ್ ರಾಂಬುಕ್ವೆಲ್ಲ ಕೂಡ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಜುಲೈ 18ಕ್ಕೆ ಆರಂಭಗೊಳ್ಳುವ ಭಾರತ-ಶ್ರೀಲಂಕಾ ಸರಣಿ ಜುಲೈ 29ಕ್ಕೆ ಕೊನೆಗೊಳ್ಳಲಿದೆ.
"2021ರ ಶ್ರೀಲಂಕಾ vs ಭಾರತ ಪ್ರವಾಸದ ಏಕದಿನ ಮತ್ತು ಟಿ20ಐ ಸರಣಿಯ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಈ ಅಧಿಕಾರಿಗಳನ್ನು ನೇಮಿಸಲಾಗಿದೆ," ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅಂಪೈರ್‌ಗಳನ್ನು ಹೆಸರಿಸಿದೆ. ಅಸಲಿಗೆ ಜುಲೈ 13ರಿಂದ ಆರಂಭಗೊಳ್ಳಬೇಕಿದ್ದ ಪ್ರವಾಸ ಸರಣಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications