ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಗಾಯದ ಸಮಸ್ಯೆ ತಂಡಗಳನ್ನು ಬಹುವಾಗಿ ಕಾಡುತ್ತಿದೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ ಸಹ ಇದೇ ರೀತಿಯ ಗಾಯದ ಸಮಸ್ಯೆಗಳನ್ನು ಎದುರಿಸುತ್ತಿದೆ. ತಂಡದ ಸ್ಟಾರ್ ವೇಗಿ ಹರ್ಷಿತ್ ರಾಣಾ ಈ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಇದೇ ವೇಳೆ ಕೆಕೆಆರ್ ತಂಡಕ್ಕೆ ನೆರೆಯ ಲಂಕಾದಿಂದ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಕೆಕೆಆರ್ ತಂಡ ಗಾಯದ ಚಿಂತೆಯಲ್ಲಿದ್ದಾಗಲೇ ಶ್ರೀಲಂಕಾ ಕ್ರಿಕೆಟ್ ತಂಡ ತನ್ನ ವೇಗಿ ಮತಿಶ ಪತಿರಾನ ಅವರನ್ನು ಫಿಟ್ ಎಂದು ಘೋಷಿಸಿದೆ. ವೇಗದ ಬೌಲರ್ ಮತಿಶ ಪತಿರಾನ ಅವರ ಫಿಟ್ ಆಗಿದ್ದು ಮುಂಬರುವ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಆಡಲು ಶ್ರೀಲಂಕಾ ಕ್ರಿಕೆಟ್‌ನಿಂದ ಪರವಾನಿಗೆ ಪಡೆದಿದ್ದಾರೆ. ಇದು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಒಳ್ಳೆಯ ಸುದ್ದಿ. ಐಪಿಎಲ್‌ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್‌ನಿಂದ ಪತಿರಾನ ಎನ್‌ಒಸಿ ಪಡೆದಿದ್ದಾರೆ.

ವೇಗದ ಬೌಲರ್ ಮತಿಶ ಪತಿರಾನ ಗಾಯದಿಂದ ಚೇತರಿಸಿಕೊಂಡಿದ್ದು, ಅವರು ಫಿಟ್ ಆಗಿದ್ದಾರೆ. ಅಲ್ಲದೆ ಅವರು ತಮ್ಮ ಪುನರ್ವಸತಿಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಬಂಡುಲ ದಿಸಾನಾಯಕೆ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನನಗೆ ತಿಳಿದಿರುವಂತೆ, ಅವರು ಫಿಟ್ ಆಗಿದ್ದಾರೆ ಮತ್ತು ನಾವು ಅವರಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಎನ್‌ಒಸಿ ನೀಡಿದ್ದೇವೆ. ಆದರೆ KKR ಅವರ ಫಿಟ್ನೆಸ್ ಬಗ್ಗೆ ಜಾಗರೂಕತೆ ವಹಿಸಬೇಕು" ಎಂದು ದಿಸಾನಾಯಕೆ ಹೇಳಿದ್ದಾರೆ.
ಮತಿಶ ಪತಿರಾನ 2026 ರ ಟಿ 20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡದ ಭಾಗವಾಗಿದ್ದರು. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಮಾಡುವಾಗ ಅವರು ಗಾಯಗೊಂಡಿದ್ದರು. ಅಂದಿನಿಂದ, ಅವರು ಮೈದಾನದಿಂದ ದೂರ ಉಳಿದಿದ್ದಾರೆ. ಇವರು ಈಗ ಫಿಟ್ ಆಗಿದ್ದು ನಿಜಕ್ಕೂ ಕೆಕೆಆರ್ ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ತಂದಂತೆ ಆಗುತ್ತದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇತ್ತೀಚಿಗೆ ಬ್ಲೆಸ್ಸಿಂಗ್ ಮುಜರಬಾನಿ ಅವರು ಸೇರಿಸಿಕೊಂಡಿದ್ದಾರೆ. ಇವರು ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರಿಗೆ ಬದಲಿ ಆಟಗಾರರಾಗಿ ತಂಡವನ್ನು ಸೇರಿದ್ದಾರೆ.
ಮಾರ್ಚ್ 29, ಮುಂಬೈ ಇಂಡಿಯನ್ಸ್, ರಾತ್ರಿ 7.30ಕ್ಕೆ
ಏಪ್ರಿಲ್ 2, ಎಸ್‌ಆರ್‌ಎಚ್, ರಾತ್ರಿ 7.30ಕ್ಕೆ
ಏಪ್ರಿಲ್ 6, ಪಂಜಾಬ್ ಕಿಂಗ್ಸ್, ರಾತ್ರಿ 7.30ಕ್ಕೆ
ಏಪ್ರಿಲ್ 9, ಎಲ್‌ಎಸ್‌ಜಿ, ರಾತ್ರಿ 7.30ಕ್ಕೆ
ಕೆಕೆಆರ್ ತಂಡ: ಕ್ಯಾಮೆರಾನ್ ಗ್ರೀನ್, ಅಜಿಂಕ್ಯ ರಹಾನೆ, ಸುನಿಲ್ ನರೈನ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ವರುಣ್ ಚಕ್ರವರ್ತಿ, ರಮಣದೀಪ್ ಸಿಂಗ್, ಅಂಕುಲ್ ರಾಯ್, ರೋವ್ಮನ್ ಪೊವೆಲ್, ಹರ್ಷಿತ್ ರಾಣಾ, ವೈಭವ್ ಅರೋರಾ, ಉಮ್ರಾನ್ ಮಲಿಕ್, ಮತಿಶಾ ಪತಿರಾನ, ತೇಜಸ್ವಿ ಸಿಂಗ್, ಫಿನ್ ಅಲೆನ್, ಟಿಮ್ ಸೀಫರ್ಟ್, ರಾಹುಲ್ ತ್ರಿಪಾಠಿ, ಕಾರ್ತಿಕ್ ತ್ಯಾಗಿ, ದಕ್ಷ ಕಮ್ರಾ, ಸಾರ್ಥಕ್ ರಂಜನ್, ಪ್ರಶಾಂತ್ ಸೋಲಂಕಿ, ಆಕಾಶದೀಪ್, ರಚಿನ್ ರವೀಂದ್ರ, ಬ್ಲೆಸ್ಸಿಂಗ್ ಮುಜರಬಾನಿ