For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಯಶಸ್ಸಿಗೆ ಕಾರಣ ಅದೊಂದೆ..: ಸಿಎಸ್‌ಕೆ ನಾಯಕನ ಬಗ್ಗೆ ಲಂಕಾ ಕ್ರಿಕೆಟಿಗನ ಹೇಳಿಕೆ

ಶ್ರೀಲಂಕಾದ ಯುವ ಭರವಸೆಯ ಆಟಗಾರ ಮಥೀಶ ಪತಿರಣ ಐಪಿಎಲ್ ಮೂಲಕ ಭರವಸೆ ಮೂಡಿಸಿದ ಕ್ರಿಕೆಟಿಗ. ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿರುವ ಪತಿರಣ ಮೇಲೆ ಶ್ರೀಲಂಕಾ ಕ್ರಿಕೆಟ್ ಕೂಡ ಸಾಕಷ್ಟು ದೊಡ್ಡ ನಿರೀಕ್ಷೆಯಿಟ್ಟುಕೊಂಡಿದೆ. ಈ ಸಂದರ್ಭದಲ್ಲಿ ಲಂಕಾದ ಈ ಯುವ ಆಟಗಾರ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಎಂಎಸ್ ಧೋನಿಯ ಯಶಸ್ಸಿಗೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ ಲಂಕಾದ ಯುವ ಕ್ರಿಕೆಟಿಗ ಪತಿರಣ.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನೀಡಿ ಗಮನಸೆಳೆದಿದ್ದ ಪರಿರಣ ಇತ್ತೀಚೆಗೆ ಎಲ್‌ಪಿಎಲ್ 2023 ಆವೃತ್ತಿಯಲ್ಲಿ ಕೊಲಂಬೊ ಸ್ಟ್ರೈಕರ್ಸ್ ಪರವಾಗಿ ಆಡಿ ಅಮೋಘ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. 12 ವಿಕೆಟ್ ಕಬಳಿಸುವ ಮೂಲಕ ಜಂಟಿಯಾಗಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಅದ್ಭುತ ಪ್ರದರ್ಶದ ಬಳಿಕ ಯುವ ಕ್ರಿಕೆಟಿಗ ಸಿಎಸ್‌ಕೆ ನಾಯಕ ಧೋನಿ ತನ್ನ ವೃತ್ತಿಜೀವನಸಲ್ಲಿ ನಿರ್ವಹಿಸಿರುವ ಪಾತ್ರದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

Matheesha Pathirana on MS Dhoni said he very successful because he is humble

"ಯುವ ಆಟಗಾರನಾಗಿ ಆ ಪ್ರಮಾಣದಲ್ಲಿ ಯಾರಾದರೂ ನಿಮಗೆ ಬೆಂಬಲ ನೀಡಿದರೆ ಅದು ನಿಮ್ಮ ವೃತ್ತಿಜೀವನಕ್ಕೆ ಹೊಸ ವೇಗ ನೀಡುತ್ತದೆ. ಆ ಮಟ್ಟದ ಒಬ್ಬ ಆಟಗಾರ ನನ್ನ ಮೇಲೆ ನಂಬಿಕೆಯಿರಿಸುತ್ತಾರೆ ಎಂದಾಗ ನನಗೆ ಆ ಕ್ಷಣದಲ್ಲಿ ಏನಾದರೂ ಮಾಡಬಹುದು ಎಂಬ ಭಾವನೆ ಮೂಡುತ್ತದೆ. ಇದು ಕೇವಲ ನನ್ನ ವಿಚಾರದಲ್ಲಿ ಮಾತ್ರವಲ್ಲ. ಧೋನಿ ಎಲ್ಲರಿಗೂ ಅದೇ ರೀತಿಯಾಗಿ ಆತ್ಮವಿಶ್ವಾಸ ಹೆಚ್ಚಿಸುತ್ತಾರೆ" ಎಂದಿದ್ದಾರೆ ಪತಿರಣ.

ಇನ್ನು ಈ ಸಂದರ್ಭದಲ್ಲಿ ಪತಿರಣ ಎಂಎಸ್ ಧೋನಿಯ ವಿನಮ್ರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಶ್ರೀಲಂಕಾದ ವೇಗಿ ಧೋನಿಯನ್ನು 42 ನೇ ವಯಸ್ಸಿನಲ್ಲಿ ಫಿಟೆಸ್ಟ್ ಕ್ರಿಕೆಟಿಗ ಎಂದು ಶ್ಲಾಘಿಸಿದರು.

"ನಾನು ಧೋನಿಯಿಂದ ಸಾಕಷ್ಟು ಕಲಿತದ್ದೇನೆ. ಮೊದಲ ಸಂಗತಿಯೆಂದರೆ ಅದು ಅವರ ವಿನಮ್ರತೆ. ಅದೇ ಕಾರಣದಿಂದಾಗಿ ಅವರು ಬಹಳಷ್ಟು ಯಶಸ್ಸು ಕಂಡಿದ್ದಾರೆ. ಅವರಿಗೆ ಈಗ 42 ವಯಸ್ಸು. ಹಾಗಿದ್ದರೂ ಅವರು ಫಿಟ್ಟೆಸ್ಟ್ ಕ್ರಿಕೆಟಿಗ ಎಂದಿದ್ದಾರೆ. ಅದು ಎಲ್ಲರಿಗೂ ಸ್ಪೂರ್ತಿ" ಎಂದಿದ್ದಾರೆ ಶ್ರೀಲಂಕಾದ ಕ್ರಿಕೆಟಿಗ ಮತೀಶ ಪತಿರಣ.

"ನಾನು ಅಲ್ಲಿಗೆ(ಐಪಿಎಲ್‌) ಹೋಗಿದ್ದಾಗ ನಾನಿನ್ನೂ ಸಣ್ಣ ಹುಡುಗ. ಯಾರಿಗೂ ಕೂಡ ನಾನು ಗೊತ್ತಿರಲಿಲ್ಲ. ಅವರು ನನಗೆ ತರಬೇತಿ ನೀಡಿ ಸಾಕಷ್ಟು ವಿಚಾರಗಳನ್ನು ಕಲಿಸಿದರು. ಈಗ ಯಾವುದೇ ಟಿ20 ಪಂದ್ಯದಲ್ಲಾದರೂ ಹೇಗೆ ಆಡಬೇಕೆಂದು ಹಾಗೂ ನನ್ನ ನಾಲ್ಕು ಓವರ್‌ಗಳಲ್ಲಿ ಹೇಗೆ ಸಮತೋಲನ ಕಾಪಾಡಿಕೊಳ್ಳಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ" ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ಮತೀಶ ಪತಿರಣ.

Story first published: Wednesday, August 16, 2023, 19:35 [IST]
Other articles published on Aug 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+