For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು ಟೆಸ್ಟ್‌ನಲ್ಲಿ ಮ್ಯಾಟ್‌ ಹೆನ್ರಿ ಟೆಸ್ಟ್‌ನಲ್ಲಿ 100 ವಿಕೆಟ್‌ ಸಾಧನೆ

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ರೋಹಿತ್ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ತವರಿನಲ್ಲಿ ನಡೆಯುತ್ತಿರುವ ಕಿವೀಸ್‌ ವಿರುದ್ಧದ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 46 ರನ್‌ಗಳಿಗೆ ಆಲೌಟ್‌ ಆಯಿತು.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಯಶಸ್ವಿ ಜೈಸ್ವಾಲ್‌ ಹಾಗೂ ರಿಷಭ್‌ ಪಂತ್‌ ಅವರನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಪೇಸ್‌ ಬೌಲರ್‌ ಮ್ಯಾಟ್‌ ಹೆನ್ರಿ ಅಬ್ಬರ ಜೋರಾಗಿತ್ತು.

Matt Henry Claims 100th Test Wicket with Five-Wicket Haul in Bangalore Against India

ಐದು ವಿಕೆಟ್ ಸಾಧನೆ

ನ್ಯೂಜಿಲೆಂಡ್‌ನ ಪರ ಮ್ಯಾಟ್‌ ಹೆನ್ರಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು 13.2 ಓವರ್‌ ಬೌಲಿಂಗ್ ನಡೆಸಿ 15 ರನ್‌ ನೀಡಿ ಐದು ವಿಕೆಟ್‌ ಕಬಳಿಸಿ ಸಾಧನೆ ಮಾಡಿದರು. ಇವರು ಸರ್ಫರಾಜ್‌ ಖಾನ್‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್, ರಿಷಭ್‌ ಪಂತ್‌, ಕುಲ್‌ದೀಪ್‌ ಯಾದವ್‌ ಅವರಿಗೆ ಪೆವೆಲಿಯನ್‌ ಹಾದಿ ತೋರಿಸಿದರು.

ಟೆಸ್ಟ್‌ನಲ್ಲಿ 100 ವಿಕೆಟ್

ಈ ಐದು ವಿಕೆಟ್‌ಗಳ ಸಹಾಯದಿಂದ ಮ್ಯಾಟ್‌ ಹೆನ್ರಿ ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. ಇವರು ತಮ್ಮ ಟೆಸ್ಟ್ ವೃತ್ತಿ ಜೀವನದ 26ನೇ ಪಂದ್ಯದಲ್ಲಿ 100 ವಿಕೆಟ್‌ ಪಡೆದು ಸಾಧನೆ ಮಾಡಿದರು. ಈ ಮೂಲಕ ಟೆಸ್ಟ್‌ನಲ್ಲಿ ಅತಿ ವೇಗವಾಗಿ ನೂರು ವಿಕೆಟ್‌ ಸಾಧನೆ ಮಾಡಿದ ಕಿವೀಸ್ ತಂಡದ ಜಂಟಿ ಎರಡನೇ ಪ್ಲೇಯರ್‌ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಇವರಿಗೂ ಮೊದಲು ನೀಲ್‌ ವ್ಯಾಗ್ನರ್‌ ಸಹ 26 ಟೆಸ್ಟ್‌ ಪಂದ್ಯಗಳಲ್ಲಿ 100 ವಿಕೆಟ್‌ ಪಡೆದಿದ್ದರು. ಈ ಪಟ್ಟಿಯನ್ನು ನ್ಯೂಜಿಲೆಂಡ್ ತಂಡದ ಮಾಜಿ ವೇಗಿ ರಿಚರ್ಡ್‌ ಹೆಡ್ಲಿ ಮುನ್ನಡೆಸುತ್ತಿದ್ದಾರೆ. ಇವರು ಕೇವಲ 25 ಟೆಸ್ಟ್‌ ಪಂದ್ಯಗಳಲ್ಲಿ ವಿಕೆಟ್‌ಗಳ ಶತಕ ಬಾರಿಸಿದ್ದರು.

ಮ್ಯಾಟ್‌ ಹೆನ್ರಿ ಟೆಸ್ಟ್‌ನಲ್ಲಿ 15 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದಿದ್ದು, ನ್ಯೂಜಿಲೆಂಡ್‌ ವೇಗಿ ಭಾರತದಲ್ಲಿ ಪಡೆದ ನಾಲ್ಕನೇ ಗರಿಷ್ಠ ಸಾಧನೆ ಆಗಿದೆ. ಬೆಂಗಳೂರಿನ ಪಂದ್ಯದಲ್ಲಿ ಮ್ಯಾಟ್ ಹೆನ್ರಿಗೆ ಐದು ವಿಕೆಟ್‌ ಪಡೆದಿದ್ದು ಸ್ಮರಣೀಯ. ಸಿಕ್ಕ ಅವಕಾಶದಲ್ಲಿ ಅಬ್ಬರಿಸಿರುವ ಮೂಲಕ ಸಾಧನೆ ಮಾಡಿದರು. ಭಾರತದ ನೆಲದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಕಿವೀಸ್‌ ಬೌಲರ್‌ಗಳ ಸಾಲಿಗೆ ಇವರು ಸೇರಿದ್ದಾರೆ.

Matt Henry Claims 100th Test Wicket with Five-Wicket Haul in Bangalore Against India

ಭಾರತದಲ್ಲಿ ಕಿವೀಸ್‌ ವೇಗಿಗಳ ಸಾಧನೆ

ಭಾರತದಲ್ಲಿ ಟೀಮ್ ಸೌಥಿ ಬೆಂಗಳೂರಿನಲ್ಲಿ 2012ರಂದು ನಡೆದ ಟೆಸ್ಟ್‌ನಲ್ಲಿ ಏಳು ವಿಕೆಟ್‌ ಪಡೆದಿದ್ದು ಗರಿಷ್ಠ ವಿಕೆಟ್‌ಗಳ ಸಾಧನೆ ಆಗಿದೆ. ಇನ್ನು 1999ರಲ್ಲಿ ಡಿಯೋನ್ ನ್ಯಾಶ್ ಮೊಹಾಲಿಯಲ್ಲಿ 6 ವಿಕೆಟ್‌, 1988ರಲ್ಲಿ ರಿಚರ್ಡ್‌ ಹೆಡ್ಲಿ ಮುಂಬೈನಲ್ಲಿ 6 ವಿಕೆಟ್‌ ಪಡೆದಿದ್ದರು. ಇದಾದ ಬಳಿಕ ಮ್ಯಾಟ್ ಹೆನ್ರಿ ಈ ಸಾಲಿಗೆ ಎಂಟ್ರಿ ನೀಡಿದ್ದಾರೆ.

Story first published: Thursday, October 17, 2024, 19:30 [IST]
Other articles published on Oct 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+