For Quick Alerts
ALLOW NOTIFICATIONS  
For Daily Alerts
 

SL vs AUS: ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಆಸೀಸ್‌ ಸ್ಪಿನ್ ಬೌಲರ್‍‌ಗೆ ಗಾಯ

ಈಗಾಗಲೇ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯಾ, ಆತ್ಮ ವಿಶ್ವಾಸದಿಂದಲೇ ಇದೆ. ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ 3-1 ರಿಂದ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಈಗ ಶ್ರೀಲಂಕಾ ಪ್ರವಾಸಕ್ಕೆ ಸಿದ್ದತೆ ನಡೆಸಿದೆ. ಆದರೆ ಫ್ಲೈಟ್ ಹತ್ತುವ ಮುನ್ನವೇ ಅಸ್ಟ್ರೇಲಿಯಾಕ್ಕೆ ಪೆಟ್ಟು ಬಿದ್ದಿದೆ. ಹಾಗಿದ್ದರೆ ಆಗಿದ್ದು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಶ್ರೀಲಂಕಾ ಪ್ರವಾಸಕ್ಕೆ ಇನ್ನು ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿಲ್ಲ. ಆದರೆ ಈ ವೇಳೆ ಆಸೀಸ್‌ ತಂಡಕ್ಕೆ ಭಾರೀ ಪೆಟ್ಟು ಬಿದ್ದಿದೆ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಜನವರಿ 29 ರಿಂದ ಆರಂಭವಾಗಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಘೋಷಿಸಬೇಕಿದೆ. ಇನ್ನು ಏಷ್ಯಾ ಖಂಡದಲ್ಲಿ ಭಾರೀ ಪರಿಣಾಮ ಬೀರುವ ಸ್ಪಿನ್ ಬೌಲರ್‌ಗಳಿಗೆ ತಂಡದಲ್ಲಿ ಅವಕಾಶ ಸಿಗುವುದು ಪಕ್ಕಾ ಆಗಿತ್ತು. ಈ ಸರಣಿಗೆ ತಂಡವನ್ನು ಪ್ರಕಟಿಸುವ ಮುನ್ನವೇ ಮ್ಯಾಟ್ ಕುಹ್ನೆಮನ್ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಆಸೀಸ್‌ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದರು.

Matt Kuhnemann Injured Ahead of Sri Lanka Test Series Doubts Loom Over Selection

ಆಗಿದ್ದೇನು?

ಸದ್ಯ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಆರಂಭವಾಗಿದೆ. ಈ ವೇಳೆ ಮ್ಯಾಟ್ ಕುಹ್ನೆಮನ್ ಸಹ ಬ್ರಿಸ್ಬೇನ್ ಹೀಟ್‌ ಪರ ಆಡುತ್ತಿದ್ದಾರೆ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಇವರು ಗಾಯಕ್ಕೆ ತುತ್ತಾಗಿದ್ದಾರೆ. ಇವರಿಗೆ ಗಾಯ ಎಷ್ಟು ಘಾಸಿ ಮಾಡಿದೆ ಎಂದರೆ ಇವರು ತಕ್ಷಣದಿಂದಲೇ ಮೈದಾನ ತೊರೆಯಬೇಕಾಯಿತು. ಇವರ ಬಲಗೈಗೆ ಗಾಯವಾಗಿದೆ. ಇದರಿಂದ ತಂಡದಲ್ಲಿ ಚಿಂತೆ ಮನೆ ಮಾಡಿದೆ.

ಮ್ಯಾಟ್ ಕುಹ್ನೆಮನ್ ಅವರ ಗಾಯದ ಬಗ್ಗೆ ಮಾತನಾಡಿರುವ ಆಸೀಸ್‌ ಆಟಗಾರ ಮಾರ್ನಸ್‌ ಲಂಬುಶೇನ್‌, ಈ ಸಮಯದಲ್ಲಿ ಇವರಿಗೆ ಗಾಯವಾಗಿದ್ದು ಬೇಸರ ತರಿಸಿದೆ. ಅವರ ಬೆರಳಿಗೆ ಗಾಯವಾಗಿದೆ. ಇವರು ಗಾಯಕ್ಕೆ ತುತ್ತಾಗಿದ್ದರಿಂದ ಇವರು ಪೂರ್ವ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿಲ್ಲ. ಇವರ ಅನುಪಸ್ಥಿತಿಯಲ್ಲಿ ಆಲ್‌ರೌಂಡರ್ ಕೂಪರ್ ಅವಕಾಶ ಪಡೆಯುವ ಸಾಧ್ಯತೆ ಇದೆ.

ಏಷ್ಯಾ ಖಂಡದಲ್ಲಿ ಟೆಸ್ಟ್‌ ಸರಣಿ ನಡೆಯುತ್ತಿದ್ದರಿಂದ ಸ್ಪಿನ್ ಬೌಲರ್‌ಗಳ ಪಾತ್ರ ಮುಖ್ಯವಾಗಿದೆ. ಶ್ರೀಲಂಕಾದ ಪಿಚ್‌ಗಳಲ್ಲಿ ಸ್ಪಿನ್ ಬೌಲರ್‌ಗಳು ಆರ್ಭಟ ನಡೆಸಬಲ್ಲರು ಹೀಗಾಗಿ ಈ ದೇಶಕ್ಕೆ ಪ್ರವಾಸ ಬೆಳೆಸುವ ತಂಡಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಹೀಗಾಗಿ ಆಸ್ಟ್ರೇಲಿಯಾ ಸಹ ಅನುಭವಿ ಸ್ಪಿನ್ ಬೌಲರ್‌ಗೆ ಮಣೆ ಹಾಕುವ ಯೋಚನೆಯಲ್ಲಿತ್ತು. ಆದರೆ ಇವರು ಗಾಯಕ್ಕೆ ತುತ್ತಾಗಿದ್ದರಿಂದ ಆಸೀಸ್ ಮ್ಯಾನೇಜ್ಮೆಂಟ್‌ ಚಿಂತೆ ಸಹ ಹೆಚ್ಚಾಗಿದೆ.

Matt Kuhnemann Injured Ahead of Sri Lanka Test Series Doubts Loom Over Selection

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರವೇಶ ಪಡೆದಿವೆ. ಹೀಗಾಗಿ ಈ ಸರಣಿ ಅನೌಪಚಾರಿಕವಾಗಿದೆ. ಈ ಸರಣಿಯ ಫಲಿತಾಂಶ ವಿಶ್ವ ಟೆಸ್ಟ್‌ ಚಾಂಪಿಯನ್‌ ಫೈನಲ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Story first published: Friday, January 17, 2025, 13:05 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+