ಸ್ಟಾರ್ ಸ್ಪೋರ್ಟ್ಸ್ ಜಾಹೀರಾತಿಗೆ ಹೇಡನ್ ಕೆಂಗಣ್ಣು, ವೀರೂಗೂ ಛಾಟಿ

ಬೆಂಗಳೂರು, ಫೆಬ್ರವರಿ 12: ಆಸ್ಟ್ರೇಲಿಯಾ vs ಭಾರತ ಮತ್ತೊಂದು ಕ್ರಿಕೆಟ್ ಸರಣಿ ಕುರಿತ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾವು ಪ್ರಸಾರ ಮಾಡುತ್ತಿರುವ ಜಾಹೀರಾತೊಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರನ್ನು ಕೆರಳಿಸಿದೆ.
ಹೇಡನ್ ಕಣ್ಣು ಕೆಂಪಗಾಗಿಸಿರುವ ಜಾಹೀರಾತಿನಲ್ಲಿ, ಸೆಹ್ವಾಗ್ ನಟಿಸಿದ್ದು, ಸೆಹ್ವಾಗ್ ಅವರು ಆಸ್ಟ್ರೇಲಿಯಾದ ಕ್ರಿಕೆಟ್ ಜರ್ಸಿ ತೊಟ್ಟ ಎಳೆಯ ಮಕ್ಕಳೊಂದಿಗೆ ಆಟವಾಡುತ್ತಾ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಆಂಗ್ಲಭಾಷೆಯಲ್ಲಿ ಈ ಕಾರ್ಯವನ್ನು ಬೇಬಿಸಿಟಿಂಗ್ ಎಂದು ಕರೆಯುವುದುಂಟು.
ಜಾಹೀರಾತಿನಲ್ಲಿ ಇದನ್ನೇ ಹೇಳುವ ವಿರೇಂದ್ರ ಸೆಹ್ವಾಗ್ ನಾವು (ಭಾರತ ಕ್ರಿಕೆಟ್ ತಂಡ), ಅಲ್ಲಿಗೆ (ಆಸ್ಟ್ರೇಲಿಯಾಕ್ಕೆ) ಹೋದಾಗ 'ಬೇಬಿ ಸಿಟಿಂಗ್ ಮಾಡುತ್ತೀರಾ' ಎಂದು ಕೇಳಿದ್ದರು, ನಾವು ಹೇಳಿದ್ದೆವು ಎಲ್ಲರೂ ಬನ್ನಿರೆಂದು, ಈಗ ಅವರು ಬರುತ್ತಿದ್ದಾರೆ ಇದೇ ಫೆಬ್ರವರಿ 24ಕ್ಕೆ ಮೊದಲ ಪಂದ್ಯ ನಡೆಯುತ್ತಿದೆ ಎಂದು ಸೆಹ್ವಾಗ್ ಹೇಳುತ್ತಾರೆ.
ಆದರೆ ಈ ವ್ಯಂಗ್ಯಭರಿತ ಜಾಹೀರಾತು ಹೇಡನ್ ಅವರಿಗೆ ಸಿಟ್ಟು ತರಿಸಿದೆ, ಆಸ್ಟ್ರೇಲಿಯಾ ತಂಡವನ್ನು ಮಕ್ಕಳಿಗೆ ಹೋಲಿಸಿರುವುದು ಅವರ ಸಿಟ್ಟಿಗೆ ಕಾರಣ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸಿಟ್ಟು ಹೊರಹಾಕಿರುವ ಹೇಡನ್ ಸೆಹ್ವಾಗ್ ಹಾಗೂ ಸ್ಟಾರ್‌ಸ್ಪೋರ್ಟ್ಸ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.
'ಆಸ್ಟ್ರೇಲಿಯಾ ತಂಡವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ ವೀರೂ' ಎಂದು ವೀರೇಂದ್ರ ಸೆಹ್ವಾಗ್‌ಗೆ ಎಚ್ಚರಿಕೆ ನೀಡಿರುವ ಹೇಡನ್, 'ಅತಿ ಹೆಚ್ಚು ವಿಶ್ವಕಪ್‌ಗಳನ್ನು ಮಡಿಲಲ್ಲಿ ಇಟ್ಟುಕೊಂಡಿರುವವರು ಯಾರೆಂಬುದು ಗೊತ್ತಿಲ್ಲವೇ' ಎಂದು ಸ್ಟಾರ್ ಸ್ಫೋರ್ಟ್ಸ್ ಇಂಡಿಯಾ ಕ್ಕೂ ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾದ ಭಾರತ ಪ್ರವಾಸ ಫೆಬ್ರವರಿ 24 ರಿಂದ ಆರಂಭವಾಗಲಿದ್ದು, ಆಸ್ಟ್ರೇಲಿಯಾವು ಎರಡು ಟಿ20 ಹಾಗೂ ಐದು ಏಕದಿನ ಪಂದ್ಯಗಳನ್ನು ಭಾರತದಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications