Border-Gavaskar Trophy: ಮ್ಯಾಚ್ ವಿನ್ನರ್ ಹೆಸರಿಸಿದ ಮ್ಯಾಥ್ಯೂ ಹೇಡನ್!
ಈ ವರ್ಷದ ಕೊನೆಯಲ್ಲಿ ಭಾರತ ತಂಡವು ಆಸ್ಟ್ರೇಲಯಾ ಪ್ರವಾಸ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ. ಸರಣಿ ಆರಂಭಕ್ಕೂ ಮುನ್ನ ಸೋಲು-ಗೆಲುವಿನ ಲೆಕ್ಕಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳು ಕ್ರಿಕೆಟ್ ಗಲ್ಲಿಯಲ್ಲಿ ಶುರುವಾಗಿದೆ.
ಉಭಯ ತಂಡಗಳ ಯಾವ ಆಟಗಾರ ಸರಣಿಯಲ್ಲಿ ಮಿಂಚಲಿದ್ದಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಅವರು ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಮ್ಯಾಚ್ ವಿನ್ನರ್ ಯಾರು ಎಂದು ಹೇಳಿದ್ದಾರೆ.

ಹೇಡನ್ ಸೂಚಿಸಿರುವ ಆಟಗಾರನ ಹೆಸರು ಬೇರೆ ಯಾರಾದೂ ಅಲ್ಲ. ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್. ಕ್ರಿಕೆಟ್‌ನ ಯಾವುದೇ ಮಾದರಿ ಇರಲಿ ಪಂತ್ ಬ್ಯಾಟಿಂಗ್ ಆರಂಭಿಸಿದರೆ, ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್ ಬಾರಿಸುತ್ತಾರೆ. ಜೊತೆಗೆ ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುತ್ತಾರೆ.
ಗಬ್ಬಾದಲ್ಲಿ ಭಾರತಕ್ಕೆ ವಿಜಯ
2021ರಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಟೀಮ್ ಇಂಡಿಯಾ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯನ್ನು 2-1 ಅಂತರದಿಂದ ಬೀಗಿತ್ತು. ಆದರೆ, ಈ ಗೆಲುವು ಭಾರತಕ್ಕೆ ಸುಲಭವಾಗಿರಲಿಲ್ಲ. ಸ್ಟಾರ್ ಆಟಗಾರರನ್ನು ಭಾರತ ಕಳೆದುಕೊಂಡಿತ್ತು.
ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಪಂತ್ ಅಮೋಘ ಬ್ಯಾಟಿಂಗ್ ಮಾಡಿದ್ದರು. ಅಜೇಯ 89 ರನ್‌ಗಳನ್ನು ಕಲೆ ಹಾಕುವ ಕಾಂಗೂರು ನೆಲದಲ್ಲಿ 32 ವರ್ಷಗಳ ಬಳಿಕ ಸರಣಿ ಗೆಲ್ಲಲು ಕಾರಣವಾಗಿದ್ದರು. ಇಂದಿಗೂ ಅವರ ಈ ಇನ್ನಿಂಗ್ಸ್ ಅನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
ಮ್ಯಾಚ್ ವಿನ್ನರ್
ಇದೀಗ ಮತ್ತೊಮ್ಮೆ ಹೇಡನ್ ಅವರು ಕೂಡ ಪಂತ್ ಸ್ಪೋಟಕ ಇನ್ನಿಂಗ್ಸ್ ಅನ್ನು ಹೊಗಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಮ್ಯಾಚ್ ವಿನ್ನರ್ ರಿಷಬ್ ಪಂತ್ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂತ್ ಅವರಂತಹ ಆಟಗಾರರಿಗೆ ಗೆಲುವಿನ ದಾಹವಿದೆ. ಕಳೆದ ಬಾರಿ ಅವರು ಆಡಿದ ಆಟ ಪ್ರಮುಖವಾಗಿತ್ತು. ಅವರು ತಮ್ಮ ಆಟವನ್ನು ಆಡಿದ ರೀತಿಯಿಂದಾಗಿ ಆಸ್ಟ್ರೇಲಿಯಾದ ಜನರು ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಡನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications