Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಕ್ಸಿಂಗ್ ಟೇ ಟೆಸ್ಟ್; ಮೈದಾನದಲ್ಲಿ ಮೈಕಲ್ ಜಾಕ್ಸನ್ ನೆನಪಿಸಿದ ಮ್ಯಾಥ್ಯೂ ವೇಡ್!

Matthew Wade Just Literally Did A Michael Jackson Move At The Mcg!

ಆಸ್ಟ್ರೇಲಿಯಾದಲ್ಲಿ ಇಂದಿನಿಂದ ಬಾಕ್ಸಿಂಗ್ ಡೇ ಟೆಸ್ಟ್ ಅರಂಭವಾಗಿದೆ. ಈ ಪಂದ್ಯದಲ್ಲಿ ಅಂಗಳಕ್ಕಿಳಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮೆನ್ ಮ್ಯಾಥ್ಯೂ ವೇಡ್ ವಿಚಿತ್ರ ಕಾರಣಕ್ಕೆ ಇವತ್ತು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದಾರೆ. ಪಾಪ್ ಲೋಕದ ದೊರೆ ಮೈಕಲ್ ಜಾಕ್ಸನ್ ಸ್ಟೆಪ್ ಹಾಕಿ ಮ್ಯಾಥ್ಯೂ ವೇಡ್ ಸುದ್ದಿಯಾಗಿದ್ದಾರೆ.

ಅಂದಹಾಗೆ ವೇಡ್ ಮೈಕಲ್ ಜಾಕ್ಸನ್ ಸ್ಟೆಪ್ ಹಾಕಿದ್ದು ಉದ್ದೇಶಪೂರಿತವಾಗಿ ಅಲ್ಲ. ಬದಲಾಗಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಬಾಲ್‌ಅನ್ನು ಎದುರಿಸುವಾಗ ಎಡವಿದ ವೇಡ್ ಬಿದ್ದ ರೀತಿ ಮೈಕಲ್ ಜಾಕ್ಸನ್ ಅವರ ವಿಶ್ವ ವಿಖ್ಯಾತ 'ಗ್ರ್ಯಾವಿಟಿ ಡಿಫೈಯಿಂಗ್ ಟಿಲ್ಟ್' ಸ್ಟೆಪ್‌ಗೆ 100 ಶೇಕಡಾ ನೂರರಷ್ಟು ಹೋಲಿಕೆಯಾಗುತ್ತಿದೆ.

ನ್ಯೂಜಿಲ್ಯಾಂಡ್ ತಂಡ 144 ರನ್‌ಗಳಿಸಿದ್ದಾಗ ಮ್ಯಾಥ್ಯೂ ವೇಡ್ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಆಗಮಿಸಿದರು. ನ್ಯೂಜಿಲ್ಯಾಂಡ್ ವೇಗಿ ನೀಲ್ ವ್ಯಾಗ್ನಾರ್ ಅವರ ಎಸೆತ ಆರಂಭದಲ್ಲೇ ವೇಡ್ ಅವರನ್ನು ಕಂಗೆಡಿಸಿತು. ಬಳಿಕ ಟಿಮ್ ಸೌಥಿ ಹಾಗೂ ಟ್ರೆಂಟ್ ಬೋಲ್ಟ್‌ ಕೂಡ ಇದೇ ರೀತಿ ಮ್ಯಾಥ್ಯೂ ವೇಡ್ ಅವರನ್ನು ಇದೇ ರೀತಿ ಸಂಕಷ್ಟಕ್ಕೆ ಸಿಲುಕಿಸಿದರು. ಮಾತ್ರವಲ್ಲ ಈ ವಿಚಿತ್ರ ರೀತಿಯಲ್ಲಿ ಔಟ್‌ ಆಗಿ ಇನ್ನಿಂಗ್ಸನ್ನು ಕೊನೆಗೊಳಿಸಿದರು.

ಕ್ರಿಕೆಟ್‌ ಆಸ್ಟ್ರೇಲಿಯಾ ತನ್ ಅಧೀಕೃತ ಟ್ವೀಟರ್ ಖಾತೆಯಲ್ಲಿ ಈ ಫೋಟೋಗೆ ಮೈಕಲ್ ಜಾಕ್ಸನ್ ಪೋಟೋದ ಜೊತೆಗೆ ಕೊಲಾಜ್ ಮಾಡಿ ಪೋಸ್ಟ್‌ ಮಾಡಿದೆ. ಈ ಪೋಟೋಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಹೀಗಾಗಿ ಈ ಪಂದ್ಯವನ್ನು ಕೀವೀಸ್ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

Story first published: Thursday, December 26, 2019, 20:28 [IST]
Other articles published on Dec 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+