ವರ್ಷದ ಕೊನೆಯ ಎಫ್-1 ರೇಸ್ ಅಬುದಾಬಿಯಲ್ಲಿ ನಡೆಯಿತು. ಈ ರೇಸ್‌ನಲ್ಲಿ ಮ್ಯಾಕ್ಸ್ ವರ್ಸ್ಟಪ್ಪೆನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಯಾಸ್ ಮರೀನಾ ಸರ್ಕ್ಯೂಟ್‌ನಲ್ಲಿ ನಡೆದ ಪಂದ್ಯದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ರೆಡ್ ಬುಲ್ ತಂಡದ ಚಾಲಕ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಅಬುದಾಬಿಯಲ್ಲಿ ಯಾಸ್ ಮರೀನಾ ಸರ್ಕ್ಯೂಟ್ ನಡೆದ ಪಂದ್ಯದಲ್ಲಿ ರೆಡ್ ಬುಲ್ ತಂಡದ ಚಾಲಕ ಅಮೋಘ ಚಾಲನಾ ಕೌಶಲ್ಯವನ್ನು ಮೆರೆದರು. ಇವರು 58 ಲ್ಯಾಪ್‌ಗಳನ್ನು 1.26:07 ಸೆಕೆಂಡ್‌ಗಳಲ್ಲಿ ಪೈರೈಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಈ ಮೂಲಕ 25 ಅಂಕಗಳನ್ನು ಅಲಂಕರಿಸಿದರು. ಮೆಕ್‌ಲಾರೆನ್ ಆಟೋಮೋಟಿವ್ ತಂಡದ ಚಾಲಕ ಆಸ್ಕರ್ ಪಿಯಾಸ್ಟ್ರಿ ಎರಡನೇ ಸ್ಥಾನ ಪಡೆದರು. ಇವರು ನಿಗದಿತ ಲ್ಯಾಪ್‌ಗಳನ್ನು ಮೊದಲ ಸ್ಥಾನದಲ್ಲಿದ್ದ ತಂಡಕ್ಕೆ 12.59 ಸೆಕೆಂಡ್‌ಗಳ ನಂತರದಲ್ಲಿ ಗುರಿಯನ್ನು ಮುಟ್ಟಿ ಸಂಭ್ರಮಸಿದಿರು. ಈ ಟೂರ್ನಿಯಲ್ಲಿ ಲ್ಯಾಂಡೋ ನಾರಿಸ್ ಮೆಕ್‌ಲಾರೆನ್ ಆಟೋಮೋಟಿವ್ ಮೂರನೇ ಸ್ಥಾನವನ್ನು ಪಡೆದರು. ಇವರು ಈ ಗುರಿಯನ್ನು 16.572 ಸೆಕೆಂಡ್ ಗಳ ಅಂತರದಲ್ಲಿ ಕ್ರಮಿಸಿ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಈ ರೇಸ್‌ನಲ್ಲಿ ಲ್ಯಾಂಡೋ ನಾರಿಸ್ ಮೂರನೇ ಸ್ಥಾನವನ್ನು ಪಡೆದರೂ ತಮ್ಮ ಚೊಚ್ಚಲ F1 ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬ್ರಿಟಿಷ್ ಮತ್ತು ಮೆಕ್‌ಲಾರೆನ್ ಆಟೋಮೋಟಿವ್ ತಂಡದ ಚಾಲಕ ನಾಯಕ ಲ್ಯಾಂಡೋ ನಾರಿಸ್ (Lando Norris) ಅವರು 2025 ರ ಫಾರ್ಮುಲಾ 1 (F1) ಡ್ರೈವರ್ಸ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಸಾಧನೆ ಮಾಡಿದ್ದಾರೆ.
ಅಬುಧಾಬಿಯಲ್ಲಿ ನಡೆದ ಗ್ರ್ಯಾಂಡ್ ಪ್ರಿಕ್ಸ್ ವಿಶ್ವ ಚಾಂಪಿಯನ್ ಪಟ್ಟ ನಿರ್ಧರಿಸುವುದಿತ್ತು. ಈ ರೇಸ್‌ನಲ್ಲಿ ಲ್ಯಾಂಡೋ ನಾರಿಸ್ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.