ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಹಾಫ್ ವೇ ಮಾರ್ಕ್ ದಾಟಿ ಆಗಿದೆ. ಈ ವೇಳೆ ವಿದೇಶಿ ಆಟಗಾರರಾದ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಆರ್‌ಸಿಬಿ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಪ್ರದರ್ಶನದವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಆಟಗಾರರು ತಮ್ಮ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ನೆರವಾಗುವಲ್ಲಿ ವಿಫಲರಾಗಿದ್ದಾರೆ. ಈ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿರುವ ಪಂಜಾಬ್ ಕಿಂಗ್ಸ್ ನಿರಾಸೆ ಅನುಭವಿಸಿದ್ದಾರೆ. ಭಾನುವಾರ ಉಭಯ ತಂಡಗಳು ಮೈದಾನಕ್ಕೆ ಇಳಿದಾಗ ಈ ಇಬ್ಬರೂ ಆಟಗಾರರನ್ನು ಹೊರಗಿಟ್ಟು ತಂಡವನ್ನು ರಚಿಸಬೇಕಾದ ಅನಿರ್ವಾಯತೆ ಕಂಡು ಬಂದಿತ್ತು.
ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದರು. ಅಲ್ಲದೆ ಇವರ ಬದಲಿಗೆ ವಿಂಡೀಸ್ ತಂಡದ ರೊಮಾರಿಯೊ ಶೆಫರ್ಡ್ ಅವರಿಗೆ ಅವಕಾಶ ನೀಡಲಾಯಿತು. ಇನ್ನು ಪಂಜಾಬ್ ತಂಡದ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಹಿಂದಿನ ಪಂದ್ಯದಲ್ಲೇ ಬೆಂಚ್ ಮೇಲೆ ಕೂರಿಸಲಾಗಿತ್ತು. ಇವರಿಬ್ಬರು ಈ ಬಾರಿಯ ಐಪಿಎಲ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಕಿಡಿ ಕಾರಿದ್ದಾರೆ.

ಪಂಜಾಬ್ ತಂಡದ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಆರ್‌ಸಿಬಿ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ರನ್ ಬಾರಿಸುವ ಹಸಿವು ನಿಂತಿದೆ ಎಂದು ನಾನು ಭಾವಿಸುತ್ತೇನೆ ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ. ಈ ಆಟಗಾರರು ತಮ್ಮ ರಜೆ ದಿನಗಳನ್ನು ಕಳೆಯಲು ಇಲ್ಲಿಗೆ ಬರುತ್ತಾರೆ. ಇಲ್ಲಿ ಮೋಜು ಮಾಡಿ ಹೋಗುತ್ತಾರೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಈ ಇಬ್ಬರೂ ಆಟಗಾರರ ತಮ್ಮ ತಂಡದ ಪರ ಹೋರಾಡುವ ಬಯಕೆಯನ್ನು ತೋರಿಸುತ್ತಿಲ್ಲ.
"ನಾನು ಸಹ ಬಹಳ ಆಟಗಾರರೊಂದಿಗೆ ಸಮಯ ಕಳೆದಿದ್ದೇನೆ. ಈ ವೇಳೆ ಈ ಮನಸ್ಥಿತಿಯನ್ನು ಹೊಂದಿರುವ ಆಟಗಾರರು ಕೇವಲ ಒಂದಿಬ್ಬರು ಇರುತ್ತಾರೆ. ಉಳಿದ ಎಲ್ಲ ಆಟಗಾರರು ತಂಡಕ್ಕಾಗಿ ಏನನ್ನಾದ್ರೂ ಮಾಡುವ ಹಸಿವನ್ನು ಹೊಂದಿರುತ್ತಾರೆ ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಪರ ಆರು ಪಂದ್ಯಗಳನ್ನು ಆಡಿರುವ ಗ್ಲೇನ್ ಮ್ಯಾಕ್ಸ್‌ವೆಲ್ 8.20ರ ಸರಾಸರಿಯಲ್ಲಿ ಕೇವಲ 41 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಖಾತೆಯಲ್ಲಿ 4 ವಿಕೆಟ್‌ಗಳಿವೆ. ಇನ್ನು ಆರ್‌ಸಿಬಿ ತಂಡದ ದುಬಾರಿ ಆಟಗಾರರಲ್ಲಿ ಒಬ್ಬರಾಗಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಆಡಿದ 7 ಪಂದ್ಯಗಳಲ್ಲಿ 17ರ ಸರಾಸರಿಯಲ್ಲಿ 87 ರನ್ ಸಿಡಿಸಿದ್ದಾರೆ. ಇನ್ನು ಈ ವೇಳೆ ಲಿಯಾಮ್ 2 ವಿಕೆಟ್ ಕಬಳಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಐಪಿಎಲ್‌ನಲ್ಲಿ 104 ಪಂದ್ಯಗಳನ್ನು ಆಡಿದ್ದು, 155.4 ಸ್ಟ್ರೈಕ್ ರೇಟ್‌ನಲ್ಲಿ 2728 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ ಮತ್ತು 16 ಅರ್ಧಶತಕಗಳು ಸೇರಿವೆ.