IPL 2025 PBKS: ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಗಾಯ ಐಪಿಎಲ್‌ನಿಂದ ಔಟ್: ಬದಲಿ ಆಟಗಾರ ಯಾರು?
ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಭರ್ಜರಿ ಜಯ ದಾಖಲಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಖುಷಿಯ ಸುದ್ದಿಯ ಮಧ್ಯೆ ಪಂಜಾಬ್ ತಂಡಕ್ಕೆ ಚಿಂತೆಯೊಂದು ಆರಂಭವಾಗಿದೆ. ಈ ಸುದ್ದಿ ಟೂರ್ನಿ ಮಧ್ಯೆ ಭಾಗದಲ್ಲಿ ನಿಜಕ್ಕೂ ಪಂಜಾಬ್ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಪಂಜಾಬ್ ಕಿಂಗ್ಸ್ ಗ್ಲೇನ್ ಮ್ಯಾಕ್ಸ್‌ವೆಲ್‌ರನ್ನು ಹರಾಜಿನಲ್ಲಿ ಖರೀದಿಸಿತ್ತು. ಆದರೆ ಇವರು ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಪಂಜಾಬ್ ಇವರು ಕೇವಲ 48 ರನ್ ಸಿಡಿಸಿ 7 ವಿಕೆಟ್ ಪಡೆದಿದ್ದರು. ಪಂಜಾಬ್ ಕಿಂಗ್ಸ್ ತಂಡದ ಮಿಡ್ಲ್ ಆರ್ಡರ್ ಬೌಲಿಂಗ್ ವಿಭಾಗಕ್ಕೆ ಇವರು ಸ್ಥಿರತೆ ತರುವ ಕೆಲಸವನ್ನು ಮಾಡಿದ್ದರು. ಪ್ಲೇ ಆಫ್ ರೇಸ್‌ನಲ್ಲಿರುವ ಪಂಜಾಬ್ ಕಿಂಗ್ಸ್‌ಗೆ ಇವರ ಬದಲಿ ಆಟಗಾರನನ್ನು ಹುಡುಕುವುದು ದೊಡ್ಡ ತಲೆ ನೋವಾಗಿದೆ.

ಪಂಜಾಬ್ ಕಿಂಗ್ಸ್ ಗ್ಲೇನ್‌ಗೆ ಬದಲಿ ಆಟಗಾರರನ್ನು ಹುಡುಕುವುದು ದೊಡ್ಡ ಚಿಂತೆ ಆಗಿದೆ. ಇನ್ನು ಪಿಎಸ್‌ಎಲ್ ಹಾಗೂ ಐಪಿಎಲ್ ಟೂರ್ನಿಗಳು ಒಂದೇ ವೇಳೆ ನಡೆಯುತ್ತಿದ್ದು ಮ್ಯಾನೇಜ್ಮೆಂಟ್ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಆಟಗಾರರು ಈಗ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.
ಗ್ಲೇನ್ ರಿಪ್ಲೇಸ್ ಮೆಂಟ್ ಯಾರು?
ಇನ್ನು ಪಂಜಾಬ್ ಕಿಂಗ್ಸ್ ಮ್ಯಾಕ್ಸ್‌ವೆಲ್ ಬದಲಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿರುವ ಸಿಕಂದರ್ ರಜಾ (ಲಾಹೋರ್ ಖಲಂದರ್ಸ್), ಅಫ್ಘಾನಿಸ್ತಾನದ ಮೊಹಮ್ಮದ್ ನಬಿ (ಕರಾಚಿ ಕಿಂಗ್ಸ್), ಮತ್ತು ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ (ಮುಲ್ತಾನ್ ಸುಲ್ತಾನ್ಸ್) ಮೇಲೆ ಕಣ್ಣು ನೆಟ್ಟಿದೆ. ಪಂಜಾಬ್ ಕಿಂಗ್ಸ್ ತಂಡದ ಮುಂದೆ ಈಗ ಆಯ್ಕೆ ಸಹ ಕಡಿಮೆ ಇವೆ. ಇನ್ನು ನಮ್ಮ ತಂಡದಲ್ಲಿ ಇನ್ನು ಸಾಕಷ್ಟು ಪ್ರತಿಭಾನ್ವಿತ ಆಟಗಾರರು ಇದ್ದಾರೆ ಎಂದು ಪಂಜಾಬ್ ಕೋಚ್ ತಿಳಿಸಿದ್ದಾರೆ.
ಪರಿಸ್ಥಿತಿಗೆ ಅನುಗುಣವಾಗಿ ಆಟಗಾರರ ಆಯ್ಕೆ ಮಾಡಲಾಗುವುದು. ನಮ್ಮ ಪಟ್ಟಿಯಲ್ಲಿ ಅಜ್ಮತುಲ್ಲಾ ಒಮರ್‌ಜೈ, ಆರನ್ ಹಾರ್ಡಿ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು ಪಾಂಟಿಂಗ್ ತಿಳಿಸಿದ್ದಾರೆ. ನಾವು ಮುಂದಿನ ಪಂದ್ಯವನ್ನು ಧರ್ಮಶಾಲಾಕ್ಕೆ ಹೋಗುವಾಗ ಅಲ್ಲಿಗೆ ಪರಿಸ್ಥಿತಿಗೆ ಅನುಗುಣವಾಗಿ ಆಟಗಾರರ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಪಿಎಸ್‌ಎಲ್ ಸಹ ಇದೇ ಸಮಯದಲ್ಲಿ ನಡೆಯುತ್ತಿದ್ದರಿಂದ, ಗ್ಲೇನ್ ಮ್ಯಾಕ್ಸ್‌ವೆಲ್ ರೀತಿಯ ಕ್ವಾಲಿಟಿ ಆಟಗಾರರನ್ನು ಹುಡುಕುವುದು ದೊಡ್ಡ ಸಮಸ್ಯೆಯಾಗಿದೆ. ಇನ್ನು ನಮ್ಮದೇ ತಂಡದಲ್ಲಿ ಭಾರತದ ಯುವ ಆಟಗಾರರ ದಂಡೇ ಇದೆ. ಇವರಿಗೂ ಅವಕಾಶ ನೀಡಲಾಗುವುದು. ಧರ್ಮಶಾಲಾದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಪಾಂಟಿಂಗ್ ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಆಡಿದ 10 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದ್ದು, 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications