For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಅಭಿಮಾನಿಗಳ ಆತಂಕ ಹೆಚ್ಚಿಸಿದ ಮ್ಯಾಕ್ಸ್‌ವೆಲ್ ಗಾಯ

ಸದ್ಯ ಭರ್ಜರಿ ಫಾರ್ಮ್‌ಲ್ಲಿರುವ ಈ ಆಟಗಾರ ಭರ್ಜರಿ ಲಯದಲ್ಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿ ಆಸೀಸ್‌ ತಂಡಕ್ಕೆ ನೆರವಾಗಿದ್ದರು. ಇವರ ಪ್ರದರ್ಶನ ಕಂಡ ಆರ್‌ಸಿಬಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಆದರೆ, ಬಿಗ್ ಬ್ಯಾಷ್ ಲೀಗ್ ನಿಂದ ಬಂದಿರುವ ಸುದ್ದಿ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಆಸ್ಟ್ರೇಲಿಯಾದಲ್ಲಿ ಈಗ ಬಿಗ್‌ ಬ್ಯಾಷ್ ಲೀಗ್ ನಡೆಯುತ್ತಿದೆ. ಡಿಸೆಂಬರ್‌ 7ರಂದು ನಡೆದ ಪಂದ್ಯದಲ್ಲಿ ಬ್ರಿಸ್ಬೇನ್‌ ಹೀಟ್‌ ಹಾಗೂ ಮೆಲ್ಬೋರ್ನ್‌ ಸ್ಟಾರ್ಸ್‌ ತಂಢಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಬ್ರಿಸ್ಬೇನ್‌ ತಂಡ 103 ರನ್ ಗಳಿಂದ ಮೆಲ್ಬೋರ್ನ್ ತಂಡವನ್ನು ಮಣಿಸಿತು. ಈ ಪಂದ್ಯದ ವೇಳೆ ಮೆಲ್ಬೋರ್ನ್‌ ತಂಡದ ಆಟಗಾರನೊಬ್ಬ ಗಾಯಕ್ಕೆ ತುತ್ತಾಗಿದ್ದಾನೆ. ಅಲ್ಲಿ ಆದ ಗಾಯ ಇಲ್ಲಿ ಆರ್‌ಸಿಬಿ ಫ್ಯಾನ್ಸ್ ಆತಂಕ ಹೆಚ್ಚಿಸಿದೆ.

Maxwell’s Injury Has Increased Rcb Fans’ Anxiety

ಬಿಗ್ ಬ್ಯಾಷ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮೆಲ್ಬೋರ್ನ್ ತಂಡದ ಸ್ಟಾರ್ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಈ ಪಂದ್ಯದ ವೇಳೆ ಮ್ಯಾಕ್ಸ್‌ವೆಲ್ ಭರ್ಜರಿ ಲಯದಲ್ಲಿ ಕಂಡು ಬಂದರು. ಅವರು 14 ಎಸೆತಗಳಲ್ಲಿ 23 ರನ್ ಸಿಡಿಸಿದರು. ಆದರೆ ಗಾಯದಿಂದಾಗಿ ಅವರು ಬೇಗನೆ ವಿಕೆಟ್ ಒಪ್ಪಿಸಿದರು.

ಮ್ಯಾಕ್ಸ್‌ವೆಲ್‌ ಅವರಿಗೆ ಮೈದಾನದಲ್ಲಿ ಎರಡು ಬಾರಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇನ್ನು ಮ್ಯಾಕ್ಸ್‌ವೆಲ್‌ ಔಟ್‌ ಆದ ಮೇಲೆ ಅವರ ಕೈಮೇಲೆ ಐಸ್ ಇಟ್ಟುಕೊಂಡಿದ್ದರು. ಇವರ ಅನುಪಸ್ಥಿತಿಯಲ್ಲಿ ಮಾರ್ಕಸ್ ಸ್ಟೋಯಿನಿಸ್‌ ಬ್ಯಾಟಿಂಗ್ ನೊಗವನ್ನು ಹೊರಲಿದ್ದಾರೆ.

ಮ್ಯಾಕ್ಸ್‌ವೆಲ್‌ ಅವರ ಗಾಯ ನಿಜಕ್ಕೂ ಆರ್‌ಸಿಬಿ ಅಭಿಮಾನಿಗಳ ಆತಂಕವನ್ನು ಹೆಚ್ಚು ಮಾಡಿದೆ. ತಮ್ಮ ಧಮಾಕೆದಾರ ಬ್ಯಾಟಿಂಗ್ ಹಾಗೂ ಬೌಲಿಂಗ್ ನಿಂದ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್‌ ಮ್ಯಾಕ್ಸ್‌ವೆಲ್‌. ಆಸೀಸ್‌ ಈ ಪ್ಲೇಯರ್‌ ಆಟಕ್ಕೆ ಆರ್‌ಸಿಬಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅದರಲ್ಲೂ ಗ್ಲೇನ್‌ ಮ್ಯಾಕ್ಸ್‌ ವೆಲ್‌ ವಿಶ್ವಕಪ್ ನಲ್ಲಿ ಆಡಿದ ಧಾಟಿಗೆ ವಿಶ್ವವೇ ಸಲಾಂ ಎಂದಿದೆ.

Maxwell’s Injury Has Increased Rcb Fans’ Anxiety

ಏಕದಿನ ವಿಶ್ವಕಪ್‌ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಅಬ್ಬರದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಪಟಪಟನೇ ಏಳು ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಏಕಾಂಗಿಯಾಗಿ ಆಫ್ಘಾನ್ ಬೌಲರ್‌ಗಳನ್ನು ಕಾಡಿದ ಮ್ಯಾಕ್ಸ್‌ವೆಲ್‌ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದರು. ಮ್ಯಾಕ್ಸ್‌ವೆಲ್‌ 128 ಎಸೆತಗಳಲ್ಲಿ ಅಜೇಯ 201 ರನ್ ಬಾರಿಸಿ ಜಯದಲ್ಲಿ ಮಿಂಚಿದ್ದರು. ಇವರ ಕ್ಲಾಸಿಕ್ ಇನ್ನಿಂಗ್ಸ್ ನಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ಸೇರಿವೆ.

Story first published: Friday, December 8, 2023, 16:41 [IST]
Other articles published on Dec 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+