ಆರ್‌ಸಿಬಿ ಎಂತೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಅಬ್ಬರ
ವಿಶ್ವ ಕ್ರಿಕೆಟ್ ಲೀಗ್‌ನಲ್ಲಿ ಆರ್‌ಸಿಬಿ ಹವಾ ಕ್ರಿಯೇಟ್ ಮಾಡಿದೆ. ಆರ್‌ಸಿಬಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ತಮ್ಮ ಅಭಿಮಾನಿಗಳಿಗೆ ಹಬ್ಬದೂಟವನ್ನು ಆರ್‌ಸಿಬಿ ಅವಕಾಶ ಸಿಕ್ಕಾಗಲೆಲ್ಲಾ ಉಣ ಬಡಿಸುತ್ತಲೇ ಇರುತ್ತದೆ. ಕಳೆದ ಬಾರಿ ಐಪಿಎಲ್‌ನ ಲೀಗ್ ಹಂತದಲ್ಲೇ ಆರ್‌ಸಿಬಿ ಹೊರ ಬೀಳುತ್ತದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿಕೊಂಡಾಗಲೇ, ಫಿನಿಕ್ಸ್ ಪಕ್ಷಿಯಂತೆ ಪುಟಿದೆದ್ದು ನಾಕೌಟ್ ಹಂತವನ್ನು ಪ್ರವೇಶಿಸಿತ್ತು. ಈಗ ಆರ್‌ಸಿಬಿ ಆಟವನ್ನು ನೆನಪಿಸುವ ಕೆಲಸವನ್ನು ಮೆಲ್ಬೋರ್ನ್ ತಂಡ ಮಾಡಿದೆ.
ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಈ ವೇಳೆ ಅಂಕ ಪಟ್ಟಿಯಲ್ಲಿ ಟಾಪ್ 4 ತಂಡಗಳು ನಾಕೌಟ್ ಹಂತವನ್ನು ಪ್ರವೇಶಿವೆ. ಕೊನೆಯ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದ ಮೆಲ್ಬೋರ್ನ್ ಸ್ಟಾರ್ಸ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ನಾಕೌಟ್ ಹಂತಕ್ಕೆ ಕ್ವಾಲಿಫೈ ಆಗಿದೆ.

ಸ್ಟಾರ್‌ಗಳ ಅಬ್ಬರ
ಈ ಟೂರ್ನಿಯ ಆರಂಭಿಕ ಐದೂ ಪಂದ್ಯಗಳಲ್ಲಿ ಮೆಲ್ಬೋರ್ನ್ ಸ್ಟಾರ್ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿತ್ತು. ಆಡಿದ್ದ ಐದೂ ಪಂದ್ಯಗಳನ್ನು ಕೈ ಚೆಲ್ಲಿ ನಿರಾಸೆ ಅನುಭವಿಸಿತ್ತು. ಆದರೆ ಅದಾದ ಬಳಿಕ ಸ್ಟಾರ್ ಆಟಗಾರರ ಭರ್ಜರಿ ಫಾರ್ಮ್‌ಗೆ ಬಂದ ಪರಿಣಾಮ ಮೆಲ್ಬೋರ್ನ್ ತಂಡ ಮುಂದಿನ ಐದೂ ಪಂದ್ಯಗಳಲ್ಲಿ ಜಯದ ನಗೆ ಬೀರಿ, ಮುಂದಿನ ಹಂತಕ್ಕೆ ಕ್ವಾಲಿಫೈ ಆಗಿದೆ.
ಮೆಲ್ಬೋರ್ನ್ ತಂಡದ ಪರ ಸ್ಟಾರ್ ಆಟಗಾರರ ಮಹತ್ವದ ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳಿದ್ದು ನಿಜಕ್ಕೂ ತಂಡಕ್ಕೆ ಆನೆ ಬಲ ತುಂಬಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್, ಹೋಬರ್ಟ್ ಹರಿಕೇನ್ ವಿರುದ್ಧ ಕಾದಾಟ ನಡೆಸಿತು. ಈ ಪಂದ್ಯದಲ್ಲಿ ಬ್ಯು ವೆಬ್‌ಸ್ಟಾರ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಧಮಾಕೆದಾರ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಆರ್‌ಸಿಬಿ ತಂಡದ ಪರ ಆಡಿರುವ ಗ್ಲೇನ್ ಮ್ಯಾಕ್ಸ್‌ವೆಲ್ ಕೇವಲ 32 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಬ್ಯು ವೆಬ್‌ಸ್ಟಾರ್ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 31 ಎಸೆತಗಳಲ್ಲಿ 51 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮೆಲ್ಬೋರ್ನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 219 ರನ್ ಸೇರಿಸಿತು.
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಹೋಬರ್ಟ್ ತಂಡವನ್ನು ಮಾರ್ಕ್ ಸ್ಟಕಿ, ಜೋಯಲ್ ಪ್ಯಾರಿಸ್, ಉಸ್ಮಾನ್ ಮೀರ್ ಕಾಡಿದರು. ಪರಿಣಾಮ 40 ರನ್ ಜಯ ದಾಖಲಿಸಿತು.
ನಾಕೌಟ್ ಹಂತದ ಪಂದ್ಯ
ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ ತಂಡ, ಸಿಡ್ನಿ ಸಿಕ್ಸರ್ಸ್ ತಂಡಗಳು ಕಾದಾಟ ನಡೆಸಲಿದ್ದು, ಈ ಪಂದ್ಯ ಮಂಗಳವಾರ ನಡೆಯಲಿದೆ. ಜನವರಿ 22 ರಂದು ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಸಿಡ್ನಿ ಥಂಡರ್ಸ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications