ವಿಕೆಟ್ ಲಭಿಸಿದಾಗ ಸಂಭ್ರಮಿಸೋಕೆ ಐಡಿಯಾ ಹೇಳಿದ ಅಜಿಂಕ್ಯ ರಹಾನೆ

ನವದೆಹಲಿ, ಮೇ 6: ಇನ್ಮುಂದೆ ಜಸ್‌ಪ್ರೀತ್ ಬೂಮ್ರಾ ಕೇನ್ ವಿಲಿಯಮ್ಸನ್ ವಿಕೆಟ್ ಮುರಿದ್ರೆ ಅಥವಾ ಆರ್ ಅಶ್ವಿನ್ ಸ್ಟೀವ್ ಸ್ಮಿತ್ ವಿಕೆಟ್ ಪಡೆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರನ್ನೆಲ್ಲಾ ಗಟ್ಟಿಯಾಗಿ ಅಪ್ಪಿಕೊಂಡು, ಹೈ-ಫೈವ್ ಮಾಡಿ, ಫಸ್ಟ್ ಪಂಪ್ಸ್ ಮಾಡಿ ಸಂಭ್ರಮಿಸೋದು ಕಾಣಸಿಗುತ್ತದೆಯೋ ಗೊತ್ತಿಲ್ಲ. ಕೊರೊನಾವೈರಸ್ ಕ್ರಿಕೆಟ್‌ನಲ್ಲಿ ಒಂದಿಷ್ಟು ಬದಲಾವಣೆಗೆ ಕಾರಣವಾಗಿದೆ.
ವಿಕೆಟ್ ಲಭಿಸಿದಾಗ ಇನ್ಮುಂದೆ ಭಾರತೀಯ ಕ್ರಿಕೆಟಿಗರು ಪರಸ್ಪರ ಕೈ ಕುಲುಕುವ ಬದಲು, ನಮಸ್ತೆ ಮೂಲಕ ಸಂಭ್ರಮಿಸಿದರೆ ಅಚ್ಚರಿಯಿಲ್ಲ. ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಕೂಡ ಇದನ್ನೇ ಹೇಳಿಕೊಂಡಿದ್ದಾರೆ.
ವಿಶ್ವದಾದ್ಯಂತ ಹಬ್ಬಿರುವ ಕೋವಿಡ್-19 ಸೋಂಕಿನಿಂದ ಜಗತ್ತಿನ ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿದ್ದವು. ಈಗ ಕೆಲವೆಡೆ ಲಾಕ್‌ಡೌನ್ ಸಿಡಿಲಿಸಿರುವುದರಿಂದ ಮೆಲ್ಲಗೆ ಕೆಲ ಕ್ರೀಡಾಸ್ಪರ್ಧೆಗಳು ಚಾಲನೆಗೊಳ್ಳುತ್ತಿವೆ. ಆದರೂ ವೈರಸ್ ಬಗೆಗಿನ ಈಗಲೂ ಆತಂಕ ಇದ್ದೇ ಇದೆ.
'ಈಗ ವಿಕೆಟ್ ಲಭಿಸಿದರೆ ನಮಸ್ತೆ ಅಥವಾ ಬೇರೆ ರೀತಿಯಲ್ಲಿ ಸಂಭ್ರಮಾಚರಿಸಿದರೆ ಒಳ್ಳೆಯದು. ಹಿಂದಿನ ಕಾಲದಂತೆ ಮನೆಯಲ್ಲೇ ಇರಿ. ಗೆರೆದಾಟಿ ಓಡುವ ಅಗತ್ಯವಿಲ್ಲ. ನೀವು ನಮಸ್ತೆ ಮೂಲಕ ಎದುರಿದ್ದವರಿಗೆ ಗೌರವ ಸೂಚಿಸಬಹುದು. ನೀವು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಕ್ರಿಕೆಟ್ ಒಂದಕ್ಕೇ ಅಲ್ಲ. ನಿಮ್ಮ ಸಾಮಾನ್ಯ ಬದುಕಿನಲ್ಲೇ ಇದನ್ನು ಅಳವಡಿಸಿಕೊಳ್ಳಿ,' ಎಂದು ರಹಾನೆ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications