
ಕೇವಲ 36 ರನ್ ಬೇಕು
ಹ್ಯಾಗ್ಲಿ ಓವಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಲು ಅವಕಾಶವಿದೆ. ದ್ವಿತೀಯ ಟೆಸ್ಟ್‌ನಲ್ಲೇ ಮಯಾಂಕ್ ಕೇವಲ 36 ರನ್ ಗಳಿಸಿದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 1000 ರನ್ ಬಾರಿಸಿದ ದಾಖಲೆಗೆ ಕಾರಣರಾಗಲಿದ್ದಾರೆ.

ಪೂಜಾರ, ಗವಾಸ್ಕರ್ ದಾಖಲೆ ಬದಿಗೆ
ದ್ವಿತೀಯ ಟೆಸ್ಟ್‌ನಲ್ಲೇ ಮಯಾಂಕ್ ಏನಾದರೂ 36ಕ್ಕೂ ಹೆಚ್ಚು ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 1000 ರನ್ ಬಾರಿಸಿದ ಭಾರತೀಯರ ದಾಖಲೆ ಸಾಲಿನಲ್ಲಿ ಚೇತೇಶ್ವರ ಪೂಜಾರ ಮತ್ತು ಸುನಿಲ್ ಗವಾಸ್ಕರ್ ಹೆಸರು ಕೆಳಗೆ ಸರಿಯಲಿದೆ. ಯಾಕೆಂದರೆ ಪೂಜಾರ 18 ಇನ್ನಿಂಗ್ಸ್‌ಗಳಲ್ಲಿ, ಗವಾಸ್ಕರ್ 21 ಇನ್ನಿಂಗ್ಸ್‌ಗಳಲ್ಲಿ 1000 ರನ್ ಬಾರಿಸಿದ್ದರೆ, ಮಯಾಂಕ್ ಸದ್ಯ 15 ಇನ್ನಿಂಗ್ಸ್‌ಗಳಲ್ಲಿ 964 ರನ್ ಗಳಿಸಿದ್ದಾರೆ.

ವಿನೋದ್ ಕಾಂಬ್ಲಿಗೆ ಅಗ್ರಸ್ಥಾನ
ಟೆಸ್ಟ್‌ನಲ್ಲಿ ಅತೀ ವೇಗದಲ್ಲಿ 1000 ರನ್ ಮೈಲಿಗಲ್ಲು ಸ್ಥಾಪಿಸಿದವರ ಪಟ್ಟಿಯಲ್ಲಿ ವಿನೋದ್ ಕಾಂಬ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಾಂಬ್ಲಿ ಈ ದಾಖಲೆಗಾಗಿ ಕೇವಲ 14 ಇನ್ನಿಂಗ್ಸ್ ಬಳಸಿಕೊಂಡಿದ್ದರು. 1994ರಲ್ಲಿ ಮುಂಬೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಾಂಬ್ಲಿ ಈ 1000 ರನ್ ಮೈಲಿಗಲ್ಲು ನಿರ್ಮಿಸಿದ್ದರು.

ರಾಹುಲ್ ದ್ರಾವಿಡ್‌ಗೆ 5ನೇ ಸ್ಥಾನ
ಟೆಸ್ಟ್ ನಲ್ಲಿ ವೇಗವಾಗಿ 1000 ರನ್ ಗಳಿಸಿದ ದಾಖಲೆ ಪಟ್ಟಿಯಲ್ಲಿ ವಿನೋದ್ ಕಾಂಬ್ಲಿ (14 ಇನ್ನಿಂಗ್ಸ್, vs ವೆಸ್ಟ್ ಇಂಡೀಸ್), ಚೇತೇಶ್ವರ ಪೂಜಾರ (18 ಇನ್ನಿಂಗ್ಸ್, vs ಆಸ್ಟ್ರೇಲಿಯಾ), ಸುನಿಲ್ ಗವಾಸ್ಕರ್ (21 ಇನ್ನಿಂಗ್ಸ್, vs ಇಂಗ್ಲೆಂಡ್), ಸಂಜಯ್ ಮಂಜ್ರೇಕರ್ (23 ಇನ್ನಿಂಗ್ಸ್, vs ಇಂಗ್ಲೆಂಡ್), ರಾಹುಲ್ ದ್ರಾವಿಡ್ (23 ಇನ್ನಿಂಗ್ಸ್, vs ವೆಸ್ಟ್ ಇಂಡೀಸ್), ಸೌರವ್ ಗಂಗೂಲಿ (23 ಇನ್ನಿಂಗ್ಸ್, vs ಶ್ರೀಲಂಕಾ) ಮೊದಲ 6 ಸ್ಥಾನಗಳಲ್ಲಿ ಇದ್ದಾರೆ.


Click it and Unblock the Notifications
